PLEASE LOGIN TO KANNADANET.COM FOR REGULAR NEWS-UPDATES


ಕೊಪ್ಪಳ: ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಕನ್ನಡ ವಿಭಾಗದ ವತಿಯಿಂದ ಐಚ್ಛಿಕ ಕನ್ನಡ ವಿದ್ಯಾರ್ಥಿಗಳಿಗಾಗಿ  -  ಕವಿ ಮನೆ ಭೇಟಿ  - ಎಂಬ ವಿನೂತನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.  ಇಲ್ಲಿನ ಕಲ್ಯಾಣ ನಗರದಲ್ಲಿನ ಖ್ಯಾತ ಬಂಡಾಯ ಕವಿ ಅಲ್ಲಮಪ್ರಭು ಬೆಟ್ಟದೂರ ಅವರ ಮನೆಗೆ ಸುಮಾರು ೫೫ ಐಚ್ಛಿಕ ಕನ್ನಡ ವಿದ್ಯಾರ್ಥಿಗಳನ್ನು ಕರೆದೊಯ್ದು  ಅವರಿಂದ  ಬಂಡಾಯ ಸಾಹಿತ್ಯದ ಉಗಮ, ವಿಕಾಸ , ಸ್ವರೂಪಗಳ ಕುರಿತು  ಉಪನ್ಯಾಸ ಹಾಗೂ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮವನ್ನು ನಡೆಸಲಾಯಿತು.  ವಿದ್ಯಾರ್ಥಿಗಳನ್ನು ಉದ್ಧೇಶಿಸಿ  ಬಂಡಾಯ ಕವಿ ಅಲ್ಲಮಪ್ರಭು ಬೆಟ್ಟದೂರ ಮಾತನಾಡಿ ಇವತ್ತಿನ ಸಂದರ್ಭದಲ್ಲಿ ನಾವು ಬಂಡಾಯಗಾರರಾಗದಿದ್ದರೆ ದೇಶಕ್ಕೆ ಉಳಿಗಾಲವಿಲ್ಲ.  ಬಂಡಾಯ  ಯಾವ ವ್ಯಕ್ತಿಗಳ ವಿರುದ್ದವಲ್ಲ.  ನಮ್ಮ ವ್ಯವಸ್ಥೆಯಲ್ಲಿನ  ಕೆಲವು ತಪ್ಪು ವಿಚಾರಗಳಾದ ಕೊಮುವಾದ, ಜಾತಿಯತೆ, ಲಿಂಗತಾರತಮ್ಯ,  ಮೇಲುಕೀಳೆಂಬ ಪರಿಕಲ್ಪನೆ,  ಶೋಷಣೆ ಹಾಗೂ ಅಸಮಾನತೆ ಇವುಗಳ ವಿರುದ್ದ ಸಿಡಿದೆದ್ದು ಪ್ರತಿಭಟಿಸುವದೇ ಬಂಡಾಯ ಸಾಹಿತ್ಯವಾಗಿದೆ.  ಶೋಷಣೆ ಮುಕ್ತ ನೆಲ ಹಾಗೂ ಸಮಾನತೆ ಸಾಧಿಸುದೇ ಇದರ  ಉದ್ಧೇಶವಾಗಿದೆಯೆಂದರು.  ಕನ್ನಡ ವಿಭಾಗದ ಮುಖ್ಯಸ್ಥರಾದ ಗಾಯತ್ರಿ ಭಾವಿಕಟ್ಟಿ ಇಂತಹ ವಿನೂತನ ಕಾರ್ಯಕ್ರಮ ಸಂಘಟಿಸಿ ವಿದ್ಯಾರ್ಥಿಗಳ ಮೆಚ್ಚುಗೆಗೆ ಪಾತ್ರರಾದರು. ಕನ್ನಡ ವಿಭಾಗದ ಉಪನ್ಯಾಸಕರಾದ ಡಾ.ತುಕಾರಾಂ ನಾಯಕ್, ಡಾ.ವೆಂಕನಗೌಡ, ಡಾ.ಪ್ರಕಾಶಬಳ್ಳಾರಿ, ಶ್ರೀಮತಿ ಪುನೀತಾ ಭಾಗವಹಿಸಿದ್ದರು.

Advertisement

0 comments:

Post a Comment

 
Top