PLEASE LOGIN TO KANNADANET.COM FOR REGULAR NEWS-UPDATES

 ಬೇರೆ ಪ್ರದೇಶಗಳಿಗಿಂತ ನಮ್ಮ ಹಿಂದುಳಿದ ಹೈದ್ದಾಬಾದ್ ಕರ್ನಾಟಕ ಪ್ರದೇಶದಲ್ಲಿ ವಿಶೇಷವಾಗಿ ಕೊಪ್ಪಳ ಹಾಗೂ ರಾಯಚೂರು ಜಿಲ್ಲೆಗಳಲ್ಲಿ ಶಿಕ್ಷಣದ ಅಗತ್ಯತೆ ತುಂಬಾ ಇದ್ದು ಸಮಾಜದ ಎಲ್ಲಾ ಸಮಸ್ಯೆಗಳಿಗೆ ಉನ್ನತ ಶಿಕ್ಷಣದ ಬಹಳ ಅನಶ್ಯಕವಾಗಿದೆಂದು ಸಂಸದ ಸಂಗಣ್ಣ ಕರಡಿ ಹೇಳಿದರು. 
  ಅವರು ಕೊಪ್ಪಳದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಬೇಟಿ ನೀಡದ ಸಂದರ್ಭದಲ್ಲಿ ವಿದ್ಯಾರ್ಥಿಗಳೊಂದಿಗೆ ಮಾತನಾಡುವಾಗ ಈ ರೀತಿ ಹೇಳಿಕೆ ನೀಡಿದ ಅವರು ಶಿಕ್ಷಣ ಪಡೆಯುವದು ಪ್ರತಿಯೊಬ್ಬ ಪ್ರಜೆಯ ಮೂಲಭೂತ ಕರ್ತವ್ಯವಾಗಿದೆ. ವಿದ್ಯಾರ್ಥಿಗಳಿಗೆ ಖಾಸಗಿ ಕಾಲೇಜುಗಲಲ್ಲಿ ಶಿಕ್ಷಣ ದೊರಕುವಂತೆ ಅಗತ್ಯ ಎಲ್ಲಾ ಮೂಲಭೂತ ಸೌಕರ್ಯಗಳಾದ ಗ್ರಂಥಾಲಯ, ಅಗತ್ಯ ಸಿಬ್ಬಂದಿಗಳನ್ನು ಒದಗಿಸಲು ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೇನೆ. ತಾವು ಶಾಸಕರಾಗಿದ್ದಾಗ ಕಾಲೇಜು ಕಟ್ಟಡಕ್ಕೆ ಹಿಂದೆ ಕಟ್ಟಡ ನಿರ್ಮಾಣಕ್ಕೆ ೧.೮೦ಕೋಟಿ ಹಣ ಬಿಡುಗಡೆಯಾಗಿತ್ತು. ಕಟ್ಟಡ ಕಾಮಗಾರಿಯು ಗುಣಮಟ್ಟದಾಗಿರಬೇಕಾದರೆ ವಿದ್ಯಾರ್ತಿಗಳು ಮತ್ತು ಪ್ರಾಶುಂಪಾಲರು ಗಮನ ಹರಿಸಬೇಕು ಅಲ್ಲದೇ ಗುತ್ತಿಗೆದಾರರು ಕಾಲೇಜು ಕಟ್ಟಡವನ್ನು ಸರಿಯಾಗಿ ಗುಣಮಟ್ಟ ಕಾಪಾಡಬೇಕೆಂದು ಸೂಚಿಸಿದರು. ೨ಎಫ್, ೧೨ ಬಿ ಯೋಜನೆಯಡಿಯಲ್ಲಿ ಯುಜಿಸಿ ಧನ ಸಹಾಯ ಪಡೆಯಲಿಕ್ಕೆ ಕೇಂದ್ರ ಸರ್ಕಾರಕ್ಕೆ ಹೆಚ್ಚಿನ ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅಲ್ಲದೇ ಕೇಂದ್ರ ಸರ್ಕಾರ

ದ ಅಲ್ಪ ಸಂಖ್ಯಾಂತರ ಬಹು ವಲಯವಾರು ಅಭಿವೃದ್ದಿ ಯೋಜನೆಯಡಿ ಪದವಿ ಕಾಲೇಜಿನಲ್ಲಿ ಸಮುದಾಯ ಗ್ರಂಥಾಲಯ ನಿರ್ಮಾಣಕ್ಕೆ ೫೦ ಲಕ್ಷ ಅನುದಾನ ಬಿಡುಗಡೆಯಾಗಿದೆ. ಇದರಲ್ಲಿ ಡೆಸ್ಕಗಳು, ಕಂಪ್ಯೂಟರಗಳು, ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗುವದು ಇದರ ಸೌಲಭ್ಯವನ್ನು ವಿದ್ಯಾರ್ಥಿಗಳು ಪಡೆದುಕೊಳ್ಳಬೇಕೆಂದು ಹೇಳಿದರು.
 ಎಜ್ಯುಸ್ಯಾಟ್ ಮೂಲಕ ಆನ್‌ಲೈನ್ ಶಿಕ್ಷಣ ಪಡೆಯುವದರಿಂದ ವಿಷಯ ಪರಿಣಿತರ ಜ್ಷಾನ ಪಡೆದುಕೊಳ್ಳಲು ವಿದ್ಯಾರ್ಥಿಗಳಿಗೆ ಬಹಳಷ್ಟು ಸಹಾಯಕವಾಗಲಿ ಎಂದು ಸಂಸದ ಸಂಗಣ್ಣ ಕರಡಿ ಹೇಳಿದರು.
  ಈ ಸಂದರ್ಭದಲ್ಲಿ ಬೂ ನ್ಯಾಯ ಮಂಡಳಿ ಮಾಜಿ ಸದಸ್ಯ ಹಾಲೇಶ ಕಂದಾರಿ, ಮಾದ್ಯಮ ಪ್ರತಿನಿಧಿ ಪರಮಾನಂದ ಯಾಳಗಿ, ಬಸವರಡ್ಡಿ ಶಿವನಗೌಡ್ರ ಬೆಳವಿನಾಳ, ಸಾಲಿಮಠ, ಪ್ರಾಂಶುಪಾಲರಾದ ಎಸ್.ಬಿ ಶಾಂತಪ್ಪನವರ, ಉಪನ್ಯಾಸಕರಾದ ತಿಮ್ಮಾರಡ್ಡಿ, ಗುತ್ತಿಗೆದಾರ ಸುರೇಶ ತಟ್ಟಿ ಇನ್ನೀತರರು ಉಪಸ್ಥಿತರಿದ್ದರು.

Advertisement

0 comments:

Post a Comment

 
Top