ಬನಾಯೇಂಗೆ ಮಂಧಿರ ನಿಷೇದಿಸಿ ಜಿಲ್ಲಾಧಿಕಾರಿಗಳ ಆದೇಶದಿಂದ ಬಹುತೇಕ ಜನರ ಭಾವನೆಗಳಿಗೆ ದಕ್ಕೆಯಾಗಿದೆ. ಈ ಆದೇಶದಲ್ಲಿ ಸ್ಪಷ್ಟತೆ ಇಲ್ಲ. ಬನಾಯೇಂಗೆ ಮಂದಿರ ನಿಷೇಧ ಎಂಬ ಒಂದು ಸಾಲನ್ನು ಬಿಟ್ಟರೆ ಯಾರು ಬರೆದಿದ್ದು, ಯಾರು ಹಾಡಿದ್ದು ಎಂಬುರದ ಬಗ್ಗೆ ನಿಖರತೆ ಇಲ್ಲ, ಇಂತಹ ತಲೆಬುಡವಿಲ್ಲದ ಆದೇಶ ನಿಜಕ್ಕೂ ಹಾಸ್ಯಾಸ್ಪದ ಎಂದು ಬಿಜೇಪಿ ಜಿಲ್ಲಾಧ್ಯಕ್ಷ ಹಾಗೂ ಸಂಸದರಾದ ಕರಡಿ ಸಂಗಣ್ಣ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಜಿಲ್ಲಾಡಳಿತ ಹಾಗೂ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದಿದ್ದು, ಗ್ರಾಮಾಂತರ ಪ್ರದೇಶದಲ್ಲಿ ಅಕ್ರಮ ಮದ್ಯ, ಅವ್ಯಾಹತವಾಗಿದೆ. ರೀ ಕ್ರೀಯೇಶನ ಕ್ಲಬ್ ಹೆಸರಿನಲ್ಲಿ ಜೂಜು ಅಡ್ಡೆಗಳು ತಲೆಎತ್ತಿವೆ, ಮಟಕಾ ದಂದೆಗೆ ಬಡಜನರು ದಿನೇ ದಿನೆ ಬಲಿಯಾಗುತ್ತಿದ್ದಾರೆ. ಬೈಕುಗಳ ಸರಣಿ ಕಳ್ಳತನ ನಡೆಯುತ್ತಿದೆ. ಅಲ್ಲದೇ ಜಿಲ್ಲಾ ಉಸ್ತುವಾರಿ ಸಚಿವರ ಕ್ಷೇತ್ರದಲ್ಲಿ ದಲಿತರ ಮೇಲೆ ದೌರ್ಜನ್ಯ ನಡೆಯುತ್ತಿದ್ದರೂ ಜಿಲ್ಲಾಡಳಿತ ಮತ್ತು ಪೊಲೀಸ ಇಲಾಖೆ ಕಂಡುಕಾಣದಂತಿದೆ ಎಂದು ಹೇಳಿದರು.
ಮಂದಿರ, ಮಸೀದಿ, ಚರ್ಚುಗಳ ನಿಮಾಣ ಮಾಡಿಕೊಳ್ಳುವ ಅಧಿಕಾರವು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂವಿದಾನ ದತ್ತವಾಗಿ ಬಂದಿವೆ ಕಾನೂನು ಮತ್ತು ಸುವ್ಯವಸ್ತೆಯ ಹೆಸರಿನಲ್ಲಿ ಇಂತಹ ಹಾಡನ್ನು ನಿಷೇದಿಸುವಿದು ಅಪ್ರಸ್ತುತ. ಅಲ್ಲದೇ ಸದರಿ ಹಾಡನ್ನು ನಿಷೇದಿಸುವುದಕ್ಕೆ ಯಾವುದೇ ಜನಾಂಗ ಒತ್ತಾಯಿಸಿರುವುದಿಲ್ಲ. ಕೂಡಲೇ ಜಿಲ್ಲಾಡಳಿತ ಈ ಆದೇಶವನ್ನು ಪುನರ್ ಪರಿಶೀಲನೆ ಮಾಡಬೇಕೆಂದು ಸಂಸದರು ಒತ್ತಾಯಿಸಿದ್ದಾರೆ.
0 comments:
Post a Comment