ಸೆ ೦೪ ಇತ್ತೀಚಿಗೆ ಕೊಪ್ಪಳ ನಗರದ ಜಿಲ್ಲಾ ಕ್ರಿಡಾಂಗಣದಲ್ಲಿ ನಡೆದ ವಲಯ ಮಟ್ಟದ ಪ್ರೌಢಶಾಲಾ ವಿದ್ಯಾರ್ಥಿಗಳ ಕ್ರೀಡಾಕೂಟದಲ್ಲಿ ನಗರದ ಬನ್ನಿಕಟ್ಟಿ ಸರಕಾರಿ ಪ್ರೌಡಶಾಲೆಯ ವಿದ್ಯಾರ್ಥಿಗಳು ವಿವಧ ಕ್ರಿಡಾಕೂಟಗಳಲ್ಲಿ ಭಾಗವಹಿಸಿ ಬಹುಮಾನಗಳನ್ನು ಪಡೆದಿದ್ದಾರೆ.
೯ನೇ ತರಗತಿ ವಿದ್ಯಾರ್ಥಿ ನಾಗಪ್ಪ ಕಬ್ಬೆರ, ಉದ್ದ ಜಿಗಿತದಲ್ಲಿ ದ್ವಿತಿಯ, ತ್ರಿವಿದ ಜಿಗಿತದಲ್ಲಿ ಪ್ರಥಮ, ೧೦೦ಮೀ ಓಟದಲ್ಲಿ ತೃತಿಯ ಸ್ಥಾನ ಪಡೆದಿದ್ದಾನೆ. ವಸಂತ ೧೫೦೦ಮೀ ಓಟದಲ್ಲಿ ಪ್ರಥಮ ಸ್ಥಾನ ಪಡೆದು ಬಹುಮಾನಗಳನ್ನು ಪಡೆದು ತಾಲೂಕ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.

0 comments:
Post a Comment