ಇಲ್ಲಿನ ನಗರಸಭೆಗೆ ಗುರುವಾರ ಅರ್ಬನ್ ಡೆವಲಪ್‌ಮೆಂಟ ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಅನಿಲ್‌ಕುಮಾರ ಭೇಟಿ ನೀಡಿದರು.
ಅವರು ಭೇಟಿಯ ಸಂದರ್ಭದಲ್ಲಿ ಕೊಪ್ಪಳ ನಗರಸಭೆಯಿಂದ ನಗರದಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಅಧಿಕಾರಿಗಳಿಂದ ಸಂಪೂರ್ಣ ಮಾಹಿತಿ ಪಡೆದರಲ್ಲದೆ, ನಗರದ ವಿವಿಧೆಡೆ ನಡೆದಿರುವ ಕಾಮಗಾರಿಗಳ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು.
ಇದೇ ಸಂದರ್ಭದಲ್ಲಿ ಕೊಪ್ಪಳ ನಗರಸಭೆಯ ಅಧ್ಯಕ್ಷೆ ಲತಾ ವೀರಣ್ಣ ಸೊಂಡೂರ ಹಾಗೂ ಉಪಾಧ್ಯಕ್ಷ ಅಮ್ಜದ್ ಪಟೇಲ್ ಕೊಪ್ಪಳ ನಗರಸಭೆಯ ವಿವಿಧ ಬೇಡಿಕೆಗಳ ಬಗ್ಗೆ ಉಸ್ತುವಾರಿ ಕಾರ್ಯದರ್ಶಿಗಳ ಗಮನ ಸೆಳೆದರು.
ಮನವಿ: ನಗರದ ಜೆಪಿ ಮಾರುಕಟ್ಟೆ ಕಾಮಗಾರಿ ಆರಂಭಿಸಲು ಸರಕಾರದಿಂದ ಕೂಡಲೇ ಮಂಜೂರಾತಿ ಒದಗಿಸುವುದು, ನಗರಸಭೆಯ ಪೌರ ಕಾರ್ಮಿಕರ ವೇತನವನ್ನು ಕೊಪ್ಪಳ ನಗರಸಭೆಯೇ ಭರಿಸುತ್ತಿದ್ದು, ಇದರಿಂದ ನಗರಸಭೆ ಬೇರೆ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ ಆದ್ದರಿಂದ ಪೌರ ಕಾರ್ಮಿಕರ ತಿಂಗಳ ವೇತನವನ್ನು ಉಳಿತಾಯ ವೇತನ ಅನುದಾನದಿಂದ ಭರಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು. ನಗರಸಭೆಯ ವಾಹನಗಳು, ಘನತ್ಯಾಜ್ಯ ವಿಲೇವಾರಿ ವಾಹನಗಳ ನಿಲುಗಡೆಗೆ ಬೇಕಾದ ಅಗತ್ಯ ಸಾರ್ವಜನಿಕ ಜಾಗೆಯನ್ನು ನಗರಸಭೆಗೆ ನೀಡಬೇಕು. ಘನತ್ಯಾಜ್ಯ ವಿಲೇವಾರಿಗೆ ಹೆಚ್ಚಿನ ಭೂಮಿಯನ್ನು ಒದಗಿಸಬೇಕು. ಕೊಪ್ಪಳ ನಗರಕ್ಕೆ ೨೪ಗಂಟೆಗಳ ಸತತ ಕುಡಿವ ನೀರು ಪೂರೈಕೆ ಯೋಜನೆಯನ್ನು ತೀವ್ರಗತಿಯಲ್ಲಿ ಜಾರಿಗೊಳಿಸಲು ಕ್ರಮ ಕೈಗೊಳ್ಳುವುದು ಸೇರಿದಂತೆ ತಮ್ಮ ಇನ್ನು ಅನೇಕ ಬೇಡಿಕೆಗಳ ಮನವಿ ಪತ್ರವನ್ನು ಇದೇ ವೇಳೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಅನಿಲ್‌ಕುಮಾರ ರವರಿಗೆ ಅಧ್ಯಕ್ಷೆ ಲತಾ ವೀರಣ್ಣ ಸೊಂಡೂರ ಹಾಗೂ ಉಪಾಧ್ಯಕ್ಷ ಅಮ್ಜದ್ ಪಟೇಲ್ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷ ರಾಮಣ್ಣ ಹದ್ದಿನ, ಪೌರಾಯುಕ್ತ ರಮೇಶ ಪಟ್ಟೆದಾರ, ಜಿಲ್ಲಾ ಯೋಜನಾಧಿಕಾರಿ ಶಂಕ್ರಪ್ಪ, ಎಇಇ ಕಾಳಪ್ಪ, ಒಳ ಚರಂಡಿ ನಿರ್ಮಾಣ ಕಾಮಗಾರಿಯ ಎಇಇ ಕೃಷ್ಣಪ್ಪ, ಕೆಡಬ್ಲುಎಸ್‌ನ ಪ್ರಭಣ್ಣನವರ, ನಗರಸಭೆ ಎಇಇ ಗಂಗಾಧರ, ಮುಖಂಡರಾದ ವೀರಣ್ಣ ಸೊಂಡೂರ, ಮಾರುತಿ ಕಾರಟಗಿ, ನಗರಸಭೆ ಸಿಬ್ಬಂದಿ ಉಪಸ್ಥಿತರಿದ್ದರು.
0 comments:
Post a Comment