PLEASE LOGIN TO KANNADANET.COM FOR REGULAR NEWS-UPDATES

 ಇತ್ತಿಚಿಗೆ ಸಿ.ಎಲ್.-೭ ಸನ್ನದುಗಳು ಹೆಚ್ಚಾಗಿ ಅಬಕಾರಿ ಕಾಯಿದೆಗಳನ್ನು ಗಾಳಿಗೆ ತೂರಿ ಹಳ್ಳಿ-ಹಳ್ಳಿಗೂ ಅನಧೀಕೃತ ಮಧ್ಯ ಮಾರಾಟ ಮಾಡುತ್ತಾ ಗರಿಷ್ಠ ಮಾರಾಟ ಬೆಲೆ ಕಾಯ್ದೆಗೆ ಮಾನ್ಯತೇ ಕೊಡದೇ ಗ್ರಾಹಕರನ್ನು ಲೂಟಿ ಮಾಡುತ್ತಿದ್ದರೂ ಅಬಕಾರಿ ಇಲಾಖೆ ಮತ್ತು ಪೊಲೀಸ್ ಇಲಾಖೆ ಕಣ್ಣು ಮುಚ್ಚಿ ಕೂತಿದೆ ಎಂದು ಸಿಪಿಐಎಂಎಲ್ ಜಿಲ್ಲಾ ಕಾರ್ಯದರ್ಶಿ ಬಸವರಾಜ ಸುಳೇಕಲ್  ಆರೋಪಿಸಿದ್ದಾರೆ.
ಕೊಪ್ಪಳ ಜಿಲ್ಲೆಯಲ್ಲಿ ಸಿ.ಎಲ್.-೨, ಸಿ.ಎಲ್.-೭ ಮತ್ತು ಸಿ.ಎಲ್.-೯ ಸನ್ನದುಗಳ ಮಾಲೀಕರು ಅಬಕಾರಿ ಕಾಯ್ದೆಗಳನ್ನು ಲೆಕ್ಕಿಸದೇ ವ್ಯವಹಾರ ನಡೆಸುತ್ತಿದ್ದಾರೆ. ಸಿ.ಎಲ್.-೨ ನಲ್ಲಿ ಗ್ರಾಹಕರಿಗೆ ಮದ್ಯ ಸೇವಿಸಲು ಅವಕಾಶ ಕೊಡಬಾರದು. ಮದ್ಯವನ್ನು ಖರೀದಿಸಿ ಗ್ರಾಹಕರು ಹೊರ ಒಯ್ದು ಬಳಸತಕ್ಕದ್ದು. ಸಿ.ಎಲ್.-೭ ಕಾಯ್ದೆಯಂತೆ ಲಾಡ್ಜ್‌ನಲ್ಲಿ ತಂಗಿದ ಗ್ರಾಹಕರಿಗೆ ಮಾತ್ರ ಮದ್ಯ ಸರಬರಾಜು ಮಾಡಬೇಕು. ಮತ್ತು ವಸತಿ ಗೃಹದಲ್ಲಿ ಮದ್ಯ ಮಾರಾಟಕ್ಕೆ ಸಂಬಂಧಿಸಿದಂತೆ ಯಾವುದೇ ಕೌಂಟರ್ ನಿರ್ಮಿಸಬಾರದು ಎಂದು ಅಬಕಾರಿ ಕಾಯ್ದೆ ಹೇಳುತ್ತದೆ. ಸಿ.ಎಲ್.-೯ ನಲ್ಲಿ ರೆಸ್ಟೋರೆಂಟ್‌ಗೆ ಬಂದ ಗ್ರಾಹಕರಿಗೆ ಊಟದ ಜೊತೆಗೆ ಮದ್ಯ ಸರಬರಾಜು ಮಾಡತಕ್ಕದ್ದು. ಮೇಲಿನ ಎಲ್ಲಾ ಸನ್ನದುಗಳು ಅಬಕಾರಿ ಕಾಯ್ದೆಗಳನ್ನು ಗಾಳಿಗೆ ತೂರಿ ಜಿಲ್ಲಾದ್ಯಂತ ಹಳ್ಳಿಗಳಲ್ಲಿ ಚಿಲ್ಲರೆ ಅಂಗಡಿಗಳಂತೆ ಮದ್ಯ ಮಾರಾಟ ಮಾಡುತ್ತಿವೆ. 

ಜಿಲ್ಲಾ ಅಬಕಾರಿ ಇಲಾಖೆ ಭ್ರಷ್ಠಾಚಾರವೆಸಗಿ ಮದ್ಯದ ಮಾಫಿಯಾವನ್ನು ಬೆಂಬಲಿಸಿ ಅಕ್ರಮ ಮದ್ಯ ಸರಬರಾಜುವಿನಲ್ಲಿ ನೇರವಾಗಿ ಭಾಗಿಯಾಗಿದ್ದಾರೆ. ಕೂಡಲೇ ಮದ್ಯ ಸರಬರಾಜು ಮತ್ತು ಮಾರಾಟದ ಅಕ್ರಮಗಳನ್ನು ತಡೆದು ಕಾನೂನು ಪಾಲನೆ ಮಾಡಬೇಕು. ಇಲ್ಲದಿದ್ದಲ್ಲಿ ಸಿಪಿಐಎಂಎಲ್ ಲಿಬರೇಷನ್ ಪಕ್ಷ ಅಬಕಾರಿ ಇಲಾಖೆಯ ಅಧಿಕಾರಿಗಳ ವಿರುದ್ಧ ಜಿಲ್ಲಾಡಳಿತ ಭವನದ ಮುಂದೆ ಅನಿರ್ಧಿಷ್ಠಾವಧಿ ಧರಣಿ ಹಮ್ಮಿಕೊಳ್ಳಲಿದೆ ಎಂದು ಬಸವರಾಜ ಸುಳೇಕಲ್  ಎಚ್ಚರಿಸಿದ್ದಾರೆ.

Advertisement

0 comments:

Post a Comment

 
Top