PLEASE LOGIN TO KANNADANET.COM FOR REGULAR NEWS-UPDATES

 ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿನ ಅಲ್ಪಸಂಖ್ಯಾತರ ಸಮುದಾಯದ ಶಿಕ್ಷಣಕ್ಕಾಗಿ ಕೇಂದ್ರ ಸರ್ಕಾರದ ೧೨ ನೇ ಪಂಚವಾರ್ಷಿಕ ಯೋಜನೆಯ ಅಲ್ಪಸಂಖ್ಯಾತರ ಬಹುವಲಯವಾರು ಯೋಜನೆಯಡಿ ೧೧. ೬೬ ಕೊಟಿ ರೂ. ಗಳ ಅನುದಾನವನ್ನು ಬಿಡುಗಡೆ ಮಾಡಿರುವುದಕ್ಕೆ ಕೊಪ್ಪಳ ಸಂಸದ ಸಂಗಣ್ಣ ಕರಡಿ ಅವರು ಹರ್ಷ ವ್ಯಕ್ತಪಡಿಸಿದ್ದಾರೆ.
  ಕೇಂದ್ರ ಸರ್ಕಾರದ ಯೋಜನೆಯಡಿ ಕೊಪ್ಪಳ ಲೋಕಸಭಾ ಕ್ಷೇತ್ರದ ಕೊಪ್ಪಳ, ಗಂಗಾವತಿ ಮತ್ತು ಸಿಂಧನೂರಿನಲ್ಲಿ ವಿದ್ಯಾರ್ಥಿ, ವಿದ್ಯಾರ್ಥಿನಿಯರ ವಸತಿ ನಿಲಯ, ಸರ್ಕಾರಿ ಪದವಿ ಕಾಲೇಜಿನಲ್ಲಿ ಪ್ರಯೋಗಾಲಯ, ಲೈಬ್ರರಿ ಇನ್ನಿತರ ಮೂಲಭೂತ ಸೌಕರ್ಯ ಕಲ್ಪಿಸುವ ಯೋಜನೆಗಳಿಗೆ ಅನುದಾನ ಬಿಡುಗಡೆ ಮಾಡಲಾಗಿದೆ.  ಕೊಪ್ಪಳ ನಗರದಲ್ಲಿ ಬಾಲಕಿಯರ ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯ ಹೆಚ್ಚುವರಿ ಕಟ್ಟಡಕ್ಕೆ ೧ ಕೋಟಿ, ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ಹೆಚ್ಚುವರಿ ಕಟ್ಟಡಕ್ಕೆ ೧ ಕೋಟಿ, ಮೆಟ್ರಿಕ್ ನಂತರದ ೧೦೦ ಬಾಲಕಿಯರಿಗಾಗಿ ಹೊಸ ವಸತಿ ನಿಲಯ ನಿರ್ಮಾಣಕ್ಕೆ ೨. ೬೫ ಕೋಟಿ, ಕೊಪ್ಪಳದ ಪದವಿ ಕಾಲೇಜಿಗೆ ಕಮ್ಯುನಿಟಿ ಲೈಬ್ರರಿಗೆ ೫೦ ಲಕ್ಷ ರೂ., ಬಾಲಕರ ಉರ್ದು ಪ್ರೌಢಶಾಲೆಯಲ್ಲಿ ಪ್ರಯೋಗಾಲಯಕ್ಕೆ ೧೦ ಲಕ್ಷ ರೂ, ಬಾಲಕರ ಪ.ಪೂ. ಕಾಲೇಜು ಪ್ರಯೋಗಾಲಯಕ್ಕೆ ೧೫ ಲಕ್ಷ ರೂ., ಬಾಲಕಿಯರ ಸರ್ಕಾರಿ ಪ್ರೌಢಶಾಲೆ ಪ್ರಯೋಗಾಲಯಕ್ಕೆ ೧೦ ಲಕ್ಷ ರೂ., ಬಾಲಕಿಯರ ಪ.ಪೂ. ಕಾಲೇಜು ಪ್ರಯೋಗಾಲಯಕ್ಕೆ ೧೫ ಲಕ್ಷ ರೂ., ಸರ್ಕಾರಿ ಉರ್ದು ಪ್ರೌಢಶಾಲೆಯಲ್ಲಿ ಶೌಚಾಲಯಕ್ಕೆ ೬ ಲಕ್ಷ ರೂ.  ಅಲ್ಲದೆ ಕೊಪ್ಪಳದ ಪಲ್ಟನ್‌ಗಲ್ಲಿ, ನಿರ್ಮಿತಿ ಕೇಂದ್ರದ ಹತ್ತಿರ, ಫಿರ್ದೋಷ್‌ನಗರ, ಗೌರಿ ಅಂಗಳ, ಬಹಾರಪೇಟೆ, ಕೊಟಗಾರಗೇರಾ, ಸರ್ದಾರಗಲ್ಲಿ ಮತ್ತು ದಿಡ್ಡಿಕೇರಾನಲ್ಲಿ ಸರ್ಕಾರಿ ಉರ್ದು ಶಾಲೆಗಳಲ್ಲಿ ಹೆಚ್ಚುವರಿ ಕೊಠಡಿ ನಿರ್ಮಾಣಕ್ಕೆ ತಲಾ ೫. ೪೫ ಲಕ್ಷ ರೂ. ಗಳ ಅನುದಾನ ಒದಗಿಸಲಾಗಿದೆ.
  ಗಂಗಾವತಿ ನಗರದಲ್ಲಿ ಲಕ್ಷ್ಮಿಕ್ಯಾಂಪ್, ಹಿರೇಜಂತಕಲ್, ಹೊಸಳ್ಳಿ, ಉಪ್ಪಿನಮಳಿಕ್ಯಾಂಪ್, ಇಸ್ಲಾಂಪುರ ಮತ್ತು ಗಂಗಾವತಿ ನಗರದಲ್ಲಿನ ಸರ್ಕಾರಿ ಉರ್ದು ಪ್ರಾಥಮಿಕ ಶಾಲೆಗಳಲ್ಲಿ ಹೆಚ್ಚು
ವರಿ ಕೊಠಡಿ ನಿರ್ಮಾಣಕ್ಕೆ ತಲಾ ೫. ೪೫ ಲಕ್ಷ ರೂ.  ಗಂಗಾವತಿಯ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಕಮ್ಯುನಿಟಿ ಲೈಬ್ರರಿಗೆ ೫೦ ಲಕ್ಷ ರೂ., ಬಾಲಕರ ಸರ್ಕಾರಿ ಪ್ರೌಢಶಾಲೆ ಪ್ರಯೋಗಾಲಯಕ್ಕೆ ೧೦ ಲಕ್ಷ, ಬಾಲಕರ ಸರ್ಕಾರಿ ಪ.ಪೂ. ಕಾಲೇಜು ಪ್ರಯೋಗಾಲಯಕ್ಕೆ ೧೫ ಲಕ್ಷ, ಬಾಲಕಿಯರ ಸರ್ಕಾರಿ ಪ್ರೌಢಶಾಲೆ ಪ್ರಯೋಗಾಲಯಕ್ಕೆ ೧೦ ಲಕ್ಷ, ಬಾಲಕಿಯರ ಸರ್ಕಾರಿ ಪ.ಪೂ. ಕಾಲೇಜು ಪ್ರಯೋಗಾಲಯಕ್ಕೆ ೧೫ ಲಕ್ಷ ಹಾಗೂ ಸರ್ಕಾರಿ ಉರ್ದು ಪ್ರೌಢಶಾಲೆಯಲ್ಲಿ ಶೌಚಾಲಯ ಕಟ್ಟಡಕ್ಕೆ ೬ ಲಕ್ಷ ರೂ. ಅನುದಾನ ಒದಗಿಸಲಾಗಿದೆ.
  ಯೋಜನೆಯ ಕಾಮಗಾರಿ ಅನುಷ್ಠಾನದ ಹೊಣೆಯನ್ನು ಕೊಪ್ಪಳದ ನಿರ್ಮಿತಿ ಕೇಂದ್ರದ ಯೋಜನಾ ವ್ಯವಸ್ಥಾಪಕರಿಗೆ ವಹಿಸಲಾಗಿದ್ದು, ಈಗಾಗಲೆ ಯೋಜನಾ ವೆಚ್ಚದ ಶೇ. ೩೦ ರಷ್ಟು ಮೊತ್ತದ ಮೊದಲ ಕಂತನ್ನು ಬಿಡುಗಡೆ ಮಾಡಲಾಗಿದ್ದು, ಅಲ್ಪಸಂಖ್ಯಾತ ಸಮುದಾಯದ ಶಿಕ್ಷಣ ಯೋಜನೆಗಳಿಗೆ ಅನುದಾನ ಒದಗಿಸಿದ್ದಕ್ಕಾಗಿ ಕೊಪ್ಪಳ ಸಂಸದ ಸಂಗಣ್ಣ ಕರಡಿ ಅವರು ಕೇಂದ್ರ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.

Advertisement

0 comments:

Post a Comment

 
Top