
ಮುಖ್ಯಅತಿಥಿಗಳಾಗಿ ಆಗಮಿಸಿದ ಎಸ್.ಜಿ.ಪಾಟೀಲ್. ಉಪನ್ಯಾಸಕರು ಕೆ.ಪಿ.ಎಸ್ಸಿ ಕಾನೂನು ಮಹಾವಿದ್ಯಾಲಯ ಧಾರವಾಡ.ಇವರು ನಮ್ಮ ದೇಶದಲ್ಲಿ ಶಿಕ್ಷೆಯ ಭಯದಿಂದ ಕಾನೂನನ್ನು ಪರಿಪಾಲಿಸಲಾಗುತ್ತದೆ.ಆದರೆ ನಮ್ಮ ನಡವಳಿಕೆಯ ಮೂಲಕ ಕಾನೂನನ್ನು ಪಾಲಿಸುವ ಮಟ್ಟಿಗೆ ಕಾನೂನಿನ ತಿಳುವಳಿಕೆ ನಮಗೆ ಬೇಕಾಗಿದೆ.ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಇನ್ನೋರ್ವ ಅತಿಥಿಗಳಾಗಿ ಆಗಮಿಸಿದ ಎ.ವಿ.ಕಣವಿ ಅಧ್ಯಕ್ಷರು, ಜಿಲ್ಲಾ ವಕೀಲರು ಸಂಘ, ಕೊಪ್ಪಳ ಇವರು ಕಾನೂನು ಸೇವೆಗಳ ಪ್ರಾಧಿಕಾರದ ಯೋeನೆಗಳು ಸರಿಯಾಗಿ ಅನುಷ್ಟಾನಗೊಂಡಾಗ ಮಾತ್ರ ಜನರಲ್ಲಿ ಕಾನೂನಿನ ಅರಿವು ಮೂಡುತ್ತದೆ.ಎಂದು ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ. ಕೆ.ಬಿ.ಬ್ಯಾಳಿ,ಕಾರ್ಯಕಾರಿ ಸಮಿತಿ ಸದಸ್ಯರು ದ.ಭಾ.ಹಿಂ.ಪ್ರಚಾರ ಸಭೆಯ ಕಾನೂನು ಮಹಾವಿದ್ಯಾಲಯ ಕೊಪ್ಪಳ ಆಗಮಿಸಿ ಮಾತನಾಡುತಾ ಸಾಮನ್ಯ ವಾಗಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಮೂಲಕ ದೇಶಕ್ಕೆ ಹಾಗೂ ಪರಿಸರಕ್ಕೆಯಾಗುವ ಹಾನಿಯನ್ನು ತಪ್ಪಸಬಹುದಾಗಿದೆ ಎಂದು ಹೇಳದರು. ವಿದ್ಯಾರ್ಥಿಗಳಾದ ಕುಮಾರಿ ಅಶ್ವಿನಿ ಜಾಧವ , ಪರಿಸರ ಸಂರಕ್ಷಣೆ ಕಾಯಿದೆ.ಕುಮಾರ ವಾಯ್.ಜಿ ಕಬ್ಬನ್ನವರ್, ಮಹಿಳೆ ಮತ್ತು ಮಕ್ಕಳ ಹಕ್ಕು ಮತ್ತು ರಕ್ಷಣೆ.ಕುಮಾರ ಕಳಕನಗೌಡ ಪೋ.ಪಾಟೀಲ್ , ಮಾನವ ಹಕ್ಕುಗಳು ಮತ್ತು ರಕ್ಷಣೋಪಾಯಗಳು.ಕುರಿತು ಉಪನ್ಯಾಸ ನೀಡಿದರು
ಅಶ್ವಿನಿ ಪ್ರಾರ್ಥಿಸಿದರು ಡಾ.ಬಿ.ಎಸ್.ಹನಸಿ ಪ್ರಾಚಾರ್ಯರು, ಸ್ವಾಗತಿಸಿದರು, ಎಸ್.ಎಮ್.ಪಾಟೀಲ್ ಪರಿಚಯಸಿದರು ಕುಮಾರ ಸಂತೋಷ ಕವಲೂರು ನಿರೂಪಿಸಿದರು ಕುಮಾರ ಬಸವರಾಜ ಎಚ್.ಎಮ್. ವಂದಿಸಿದರು ಕಾನೂನು ಸಂಘದ ಪ್ರವರ್ತಕ ಹಾಗೂ ರಾಷ್ಟೀಯ ಸೇವಾ ಯೋಜನೆಯ ಕಾರ್ಯಕ್ರಮಾದಿಕಾರಿಯಾದ ಕಾನೂನು ಮಹಾವಿದ್ಯಾಲಯದ ಉಪನ್ಯಾಸಕರಾದ ಬಸವರಾಜ್ ಎಸ್.ಎಂ,ಉಪನ್ಯಾಸಕರಾದ ಶ್ರೀಮತಿ ಉಷಾದೇವಿ ಹಿರೇಮಠ, ಕೆ.ನಾಗಬಸಯ್ಯ ಸೇರಿದಂತೆ ಪ್ರಧಾನ ಕಾರ್ಯದರ್ಶಿ, ವಿದ್ಯಾರ್ಥಿ ಪ್ರತಿನಿಧಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
0 comments:
Post a Comment