ರಾಷ್ಟ್ರೀಯ ಸ್ವಚ್ಚತಾ ಸಪ್ತಾಹದ ಅಂಗವಾಗಿ ಸಾರ್ವಜನಿಕರಲ್ಲಿ ಸ್ವಚ್ಚತೆಯ ಅರಿವು ಮೂಡಿಸಲು ಹಾಗೂ ವೈಯಕ್ತಿಕ ಶೌಚಾಲಯ ನಿರ್ಮಿಸಿಕೊಳ್ಳಲು ಜಾಗೃತಿ ಮೂಡಿಸುವ ಉದ್ದೇಶದಿಂದ ಕೊಪ್ಪಳ ಗವಿಮಠದ ಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳ ನೇತೃತ್ವದಲ್ಲಿ ಪಾದಯಾತ್ರೆ ಕಾರ್ಯಕ್ರಮ ತಾಲೂಕಿನ ಇರಕಲ್ಲಗಡಾ ಗ್ರಾಮದಲ್ಲಿ ಜರುಗಿತು.
ಈ ಸಂದರ್ಭದಲ್ಲಿ ಮಾತನಾಡಿದ, ಜಿಲ್ಲಾ ಪಂಚಾಯತ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ.ಡಿ.ಉದಪುಡಿ ಅವರು, ಪ್ರತಿಯೊಬ್ಬರು ಸ್ವಚ್ಚತೆಯನ್ನು ಕೈಗೊಂಡು ಮನೆ ಮತ್ತು ಮನಸ್ಸನ್ನು ಎರಡನ್ನು ಸ್ವಚ್ಚಗೊಳಿಸಬೇಕು. ಪ್ರತಿಯೊಬ್ಬರು ಮನೆಗೆ ವೈಯಕ್ತಿಕ ಶೌಚಾಲಯ ನಿರ್ಮಾಣಕ್ಕೆ ಪಣ ತೋಡಬೇಕೆಂದು ಮಹಿಳಾ ಸ್ವಸಹಾಯ ಸಂಘದ ಸದಸ್ಯರಿಗೆ ಕರೆ ನೀಡಿದರು. ಪ್ರಸಕ್ತದಲ್ಲಿ ಮಹಿಳೆಯರಿಗೆ ಮತ್ತು ಪ್ರತಿ ಮನೆಗೆ ವೈಯಕ್ತಿಕ ಶೌಚಾಲಯ ಅಗತ್ಯವಿದೆ. ಶೌಚಾಲಯ ನಿರ್ಮಿಸಿಕೊಳ್ಳುವುದರಿಂದ ಅನೇಕ ಮಾರಕ ರೋಗಗಳನ್ನು ತಡೆಯಬಹುದು. ಸಂಘದ ಸದಸ್ಯರು ತಮ್ಮ ಮನೆಯ ಹತ್ತಿರದವರಿಗೆ ಶೌಚಾಲಯ ಬಗ್ಗೆ ಅರಿವು ಮೂಡಿಸಿ ಅವರಿಗೂ ಸಹ ಶೌಚಾಲಯ ನಿರ್ಮಿಸಿಕೊಳ್ಳುವಂತೆ ಪ್ರೇರೇಪಣೆ ಮಾಡುವಂತೆ ಕಿವಿ ಮಾತು ಹೇಳಿದರು.
ಈ ಸಂದರ್ಭದಲ್ಲಿ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಟಿ. ಕೃಷ್ಣಮೂರ್ತಿ, ಗ್ರಾಮ ಪಂಚಾಯತಿ ಅಧ್ಯಕ್ಷ ಶಿವಮ್ಮ ಶೇಖರಪ್ಪ ಲಮಾಣಿ, ಉದ್ಯೋಗಖಾತ್ರಿ ತಾಲೂಕ ಐಇಸಿ ಸಂಯೋಜಕ ದೇವರಾಜ ಪತ್ತಾರ, ವಿಷಯ ನಿರ್ವಾಹಕ ಸಂಗಪ್ಪ ಕೊಪ್ಪದ, ರೂಪಸೇನ ಚವ್ಹಾಣ್, ಜಿಲ್ಲಾ ಸಂಯೋಜಕ ರಾಮಣ್ಣ ಬಂಡಿಹಾಳ, ಪಂಚಾಯತಿ ಅಭಿವೃದ್ದಿ ಅಧಿಕಾರಿ ಲಲಿತಾ, ಮುಂತಾದವರು ಪಾಲ್ಗೊಂಡಿದ್ದರು.
0 comments:
Post a Comment