PLEASE LOGIN TO KANNADANET.COM FOR REGULAR NEWS-UPDATES

 ಭಾರತ ವಿಧ್ಯಾರ್ಥಿ ಫೆಡರೇಶನ್ ಜಿಲ್ಲಾ ಸಮಿತಿ ಕೊಪ್ಪಳ ವತಿಯಿಂದ ಇಂದು ಬೆಳಿಗ್ಗೆ ೯.೦೦ ಘಂಟೆಗೆ ನಗರದ ಸರಕಾರಿ ಪದವಿ ಕಾಲೇಜಿನಲ್ಲಿ  ನಡೆದ ಭಗತ್‌ಸಿಂಗ್ ಜನ್ಮ ದಿನಾಚರಣೆ  ಅಂಗವಾಗಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
         ಪ್ರಸಕ್ತ ಸಮಯದಲ್ಲಿ ಭಗತ್ ಸಿಂಗ್ ರವರ ಆದರ್ಶ ಉಪನ್ಯಾಸ ಕಾರ್ಯಕ್ರಮದಲ್ಲಿ ಉದ್ಘಾಟಕರಾಗಿ ಹಾಗೂ ಉಪನ್ಯಾಸ ನೀಡಲು ಆಗಮಿಸಿದ್ದ ರಾಜ್ಯದ AIAWUಸಂಘದ ರಾಜ್ಯಾಧ್ಯಕ್ಷರಾದ ನಿತ್ಯಾನಂದ ಸ್ವಾಮಿ ಇವರು ವಿದ್ಯಾರ್ಥಿಗಳಿಗೆ ಭಗತ್‌ಸಿಂಗ್‌ರವರ ಜೀವನ ಚರಿತ್ರೆಯೊಂದಿಗೆ  ಪ್ರಸಕ್ತ ದಿನಗಳಲ್ಲಿ ಭಗತ್ ಸಿಂಗ್ ಆದರ್ಶ ಮತ್ತು ತತ್ವಗಳನ್ನು ಹೇಗೆ ಅಳವಡಿಸಿಕೊಳ್ಳಬೇಕು ಎನ್ನುವುದರ ಬಗ್ಗೆ ಮನದಟ್ಟಾಗುವಂತೆ ತಿಳಿಸಿದರು. 
          ನಮ್ಮೆಲ್ಲರ ಸುಖಕ್ಕಾಗಿ ತಮ್ಮ ಪ್ರಾಣವನ್ನೇ ಬಲಿದಾನ ಮಾಡಿದ ಹುತಾತ್ಮರಲ್ಲಿ ಭಗತ್‌ಸಿಂಗ್ ಒಬ್ಬರು ಎಂದರು ಮತ್ತು ಅವರ ಕುಟುಂಬ ಸ್ವಾತಂತ್ರ ಹೋರಾಟಗಾಗರ ಕುಟುಂಬವಾಗಿದ್ದು ಜಲಿಯನ್‌ವಾಲಾಭಾಗ್ ಹತ್ಯಾಕಾಂಡದಿಂದ ಪ್ರಚೋದಿತರಾದ ಭಗತ್‌ಸಿಂಗ್‌ರವರು ತಮ್ಮ ಸಂಸಾರಿಕ ಜೀವನವನ್ನೇ ತ್ಯಜಿಸಿ ಸ್ವಾತಂತ್ರಕ್ಕಾಗಿ ಪ್ರಾಣವನ್ನು ಮುಡುಪಾಗಿಸಿದರು ೧೯೧೭ ರಲ್ಲಿ ನಡೆದ ರಷ್ಯಾದ ಕ್ರಾಂತಿಯಾಗಿದ್ದು ಭಾರತದ ಚಳುವಳಿಗಾರರಿಗೆ ಸ್ಪೂರ್ತಿಯಾಗಿ ಗಾಢವಾದ ಪರಿಣಾಮ ಬೀರಿತು.ಭಗತ್‌ರವರು ನೌಜವಾನ್ ಭಾರತ ಸಭಾ ಮೂಲಕ ಹಿಂದೂ ಮುಸ್ಲಿಂ ದಲಿತರ ಸಾಮೂಹಿಕ ಭೋಜನಕೂಟ ಏರ್ಪಡಿಸಿ ಜ್ಯಾತ್ಯಾತಿತ ನಿಲುಮೆ ಹರಡಿದರು. ಹಿಂದುಸ್ಥಾನಿ ಸಮಾಜವಾದಿ ಗಣತಂತ್ರ ಕಟ್ಟುವುದರ ಮೂಲಕ ಕ್ರಾಂತಿಕಾರಿಗಳನ್ನು ಒಗ್ಗೂಡಿಸಿದರು. ಮತ್ತು ಬ್ರೀಟಿಷ್ ಸಾಮ್ರಾಜ್ಯ ಶಾಹಿಗಳ ದಮನಕಾರಿ ಮತ್ತು ಶೋಷಕ ಆಳ್ವಿಕೆಯಿಂದ ಭಾರತವನ್ನು ಸ್ವತಂತ್ರಗೊಳಿಸಿದ ವೀರರು ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು. ಮತ್ತು ಕಾರ್ಯಕ್ರಮದಲ್ಲಿ ಪದವಿ ಕಾಲೇಜಿನ ಪ್ರಾಚಾರ್ಯರು ಅಧ್ಯಕ್ಷತೆ ವಹಿಸಿ ಅಧ್ಯಕ್ಷೀಯ ಭಾಷಣ ಮಾಡಿದರು. ಮತ್ತು ಮುಖ್ಯ ಅತಿಥಿಗಳಾಗಿ ಸುರೇಶ್ ಸೊನ್ನದ್ ಹಾಗೂ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದ ಸ್ವಾಗತವನ್ನು ಶಿವಕುಮಾರ್ ಇವರು ಮತ್ತು ಕಾರ್ಯಕ್ರಮದ ನಿರೂಪಣೆಯನ್ನು ಪರಶುರಾಮ್ ರಾಠೋಡ್ ಇವರು ನಿರ್ವಹಿಸಿದರು 

Advertisement

0 comments:

Post a Comment

 
Top