PLEASE LOGIN TO KANNADANET.COM FOR REGULAR NEWS-UPDATES

. ದಕ್ಷಿಣ ಭಾರತ ಹಿಂದಿ ಪ್ರಚಾರ ಸಭೆಯ ಕಾನೂನು  ಮಹಾವಿದ್ಯಾಲಯ ಕೊಪ್ಪಳದ ರಾಷ್ಟೀಯ ಸೇವಾ ಯೋಜನಾ ಘಟಕದ ವತಿಯಿಂದ ರಾಷ್ಟೀಯ ಸೇವಾ ಯೋಜನೆ ದಿನಾಚರಣೆ ಹಾಗೂ ದೈನಂದಿನ ಚಟುವಟಿಕೆಗಳ ಉದ್ಘಾಟನಾ ಸಮಾರಂಭ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು ಕಾರ್ಯಕ್ರಮದ ಉದ್ಘಾಟಕರಾಗಿ ಆಗಮಿಸಿದ ಶರಣಸಪ್ಪ ಬಿಳಿಎಲಿ  ಕಾರ್ಯಕ್ರಮ ಉದ್ಘಾಟಿಸಿ ಇಂದು ಪ್ರಧಾನಮಂತ್ರಿಯವರ ಕನಸು ಸ್ವಚ್ಚ ಭಾರತದ ಕನಸನ್ನು ಈಡೇರಿಸುವ ದಿನ ಎನ್ನಬಹುದು ಮಹಾತ್ಮಗಾಂಧಿಜೀಯವರ ಕನಸಿನ ಕೂಸು  ಈ ರಾಷ್ಟೀಯ ಸೇವಾ ಯೋಜನೆ ಎಲ್ಲಾ ವಿದ್ಯಾರ್ಥಿಗಳು ವ್ಯಕ್ತಿತ್ವ ವಿಕಸನ ಮತ್ತು ನಾಯಕತ್ವ ಗುಣವನ್ನು ಬೆಳೆಸಿಕೋಳ್ಳಬೇಕಾದರೆ ರಾಷ್ಟೀಯ ಸೇವಾ ಯೋಜನೆಯಲ್ಲಿ ಭಾಗವಹಿಸಿದರೆ ಮಾತ್ರ ಸಾದ್ಯ ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು. 
          ಮುಖ್ಯಅತಿಥಿಗಳಾಗಿ ಡಾ.ಬಿ.ಎಸ್.ಹನಸಿ ಪ್ರಾಚಾರ್ಯರು, ದ.ಭಾ.ಹಿಂ.ಪ್ರಚಾರ ಸಭೆಯ  ಕಾನೂನು ಮಹಾವಿದ್ಯಾಲಯ ಕೊಪ್ಪಳ ಆಗಮಿಸಿ ಮಾತನಾಡುತ್ತಾ ನಾವೇಲ್ಲರೊ ಒಂದಾಗಿ ಬಾಳುಲು ಮತ್ತು ಒಂದು ಎಂದು ಹೇಳಲು ಈ ರಾಷ್ಟೀಯ ಸೇವಾ ಯೋಜನೆಯಿಂದ ಮಾತ್ರ ಸಾದ್ಯ ಎಂದು ಹೇಳಿದರು.ಇನ್ನೋರ್ವಅತಿಥಿಯಾದಶ್ರೀ ಕೆ.ನಾಗಬಸಯ್ಯ ಉಪನ್ಯಾಸಕರು ದ.ಭಾ.ಹಿಂ.ಪ್ರಚಾರ ಸಭಾ  ಕಾನೂನು ಮಹಾವಿದ್ಯಾಲಯ ಕೊಪ್ಪಳ ವಿಶೇಷ ರೀತಿಯ ಸೇವೆಗಳನ್ನು ಜನರಿಗೆ ಒದಗಿಸುವ ಮೂಲಕ ಸಮಾಜಕ್ಕೆ ಸೇವೆಯನ್ನು ಒದಗಿಸಬೇಕೆಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ. ಕೆ.ಬಿ.ಬ್ಯಾಳಿ,ಕಾರ್ಯಕಾರಿ ಸಮಿತಿ ಸದಸ್ಯರು ದ.ಭಾ.ಹಿಂ.ಪ್ರಚಾರ ಸಭೆಯ  ಕಾನೂನು ಮಹಾವಿದ್ಯಾಲಯ ಕೊಪ್ಪಳ ಆಗಮಿಸಿ ಮಾತನಾಡುತ್ತಾ ಭಾರತ ಎಲ್ಲಿದೆ ಎಂದರೆ ಅದು ಹಳ್ಳಿಗಳಲ್ಲಿದೆ. ಹಳ್ಳಿ ಉದ್ದಾರವಾದರೆ ಮಾತ್ರ ದೇಶ ಉದ್ಧಾರವಾಗುತ್ತದೆ ಎಂದು ಗಾಂಧೀಜಿ ಹೇಳಿದರು. ಆದರೆ ಈ ರೀತಿ ಉದ್ಧಾರವಾಗಲು ರಾಷ್ಟೀಯ ಸೇವಾ ಯೋಜನೆಯಿಂದ ಮಾತ್ರ ಸಾದ್ಯ ಎಂದು ಹೇಳಿದರು. ಕಾರ್ಯಕ್ರಮ ಕುರಿತು ಪ್ರಾಸ್ತಾವಿಕವಾಗಿ ರಾಷ್ಟೀಯ ಸೇವಾ ಯೋಜನೆಯ ಕಾರ್ಯಕ್ರಮಾದಿಕಾರಿಯಾದ ಕಾನೂನು ಮಹಾವಿದ್ಯಾಲಯದ ಉಪನ್ಯಾಸಕರಾದ   ಬಸವರಾಜ್ ಎಸ್.ಎಂ, ಮಾತನಾಡಿದರು.ದೈಹಿಕ ಉಪನ್ಯಾಸಕರಾದ ಬಸವರಾಜ್ ಅಳ್ಳೊಳ್ಳಿ ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋದಿಸಿದರು. ಗಿರೀಜಾ ಪ್ರಾರ್ಥಿಸಿದರು ಕುಮಾರ ಕಳಕಪ್ಪ ಬೆಟಗೇರಿ ನಿರೂಪಿಸಿದರು, ಕುಮಾರ ಸಂತೋಷ ಕವಲೂರು ವಂದಿಸಿದರು ಕಾರ್ಯಕ್ರಮದಲ್ಲಿ ಶ್ರೀಮತಿ ಉಷಾದೇವಿ ಹಿರೇಮಠ, ಸೇರಿದಂತೆ ಪ್ರಧಾನ ಕಾರ್ಯದರ್ಶಿ, ವಿದ್ಯಾರ್ಥಿ ಪ್ರತಿನಿಧಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Advertisement

0 comments:

Post a Comment

 
Top