PLEASE LOGIN TO KANNADANET.COM FOR REGULAR NEWS-UPDATES



ಅಖಿಲ ಭಾರತ ವೀರಶೈವ ಆದಿಬಣಜಿಗ ಸಮಾಜದ ರಾಜ್ಯ ಉಪಾದ್ಯಕ್ಷರು, ಲಿಂಗಾಯತ ಸಮಾಜದ ಹಿರಿಯ ರಾಜಕೀಯ ಮುಖಂಡರು ಆಗಿದ್ದ ಇಲ್ಲಿನ ತೆಗ್ಗನಕೇರಿ ಓಣಿಯ ನಿವಾಸಿ ಚೆನ್ನಪ್ಪ  ವೀರಪಣ್ಣ ದಿವಟರ್ (೭೩) ಕೆಲ ದಿನಗಳಿಂದ ಅನಾರೋಗ್ಯ ನಿಮಿತ್ತ ಇಂದು ೧೫-೦೯-೨೦೧೪ ಸೋಮುವಾರ ಬೆಳಿಗ್ಗೆ ೯:೦೦ ಘಂಟೆಗೆ ತಮ್ಮ ಸ್ವಗೃಹದಲ್ಲಿ ನಿಧನಹೊಂದಿದರು

ನಿಧನ ಸುದ್ದಿ ತಿಳಿದ ತಕ್ಷಣ ಗವಿಮಠದ ಶ್ರೀ ಗವಿಸಿದ್ದೇಶ್ವರ ಸ್ವಾಮಿಗಳು, ಲೋಕಸಭಾ ಸದಸ್ಯರಾದ ಸಂಗಣ್ಣ ಕರಡಿ, ಶಾಸಕ ರಾಘೇಂದ್ರ ಹಿಟ್ನಾಳ, ವಿಧಾನ ಪರಿಷತ್ ಮಾಜಿ ಸದಸ್ಯ ಕರಿಯಣ್ಣ ಸಂಗಟಿ, ಮುಖಂಡರಾದ ರುದ್ರಮುನಿ ಗಾಳಿ, ಕವಲೂರ ಈರಪ್ಪ , ವೀರಣ್ಣ ಹಂಚಿನಾಳ, ಸಮಾಜದ ಜಿಲ್ಲಾಅಧ್ಯಕ್ಷ ವೈಜನಾಥ ದಿವಟರ್, ಯಲ್ಲಪ್ಪ ಕ್ರಾಟ್ರಳ್ಳಿ, ಸಾಹಿತಿಗಳಾದ ಎಚ್.ಎಸ್.ಪಾಟೀಲ್ ಅಲ್ಲಮಪ್ರಭು ಬೆಟದೂರು ಡಾ|| ಮಾಹಾಂತೇಶ ಮಲ್ಲನಗೌಡರ, ವಿಟ್ಟಪ್ಪ ಗೋರಂಟ್ಲಿ, ಕಾರ್ಯದರ್ಶಿ ಪರಮಾನಂದ ಯಾಳಗಿ, ನಗರಸಭಾ ಸಧಸ್ಯರಾದ ಶರಣಪ್ಪ ಕೋಟ್ಯಾಳ ಭಾಳಪ್ಪ ಬಾರಕೇರಿ, ಯಲ್ಲಪ್ಪ ಉಮಚಗಿ ಅಲ್ಲದೆ ಬಿಜಾಪೂರ ಹುಬ್ಬಳ್ಳಿ, ಗದಗ, ಸೊರಟೂರ, ಕಾರಟಗಿ, ಸಿಂದನೂರ, ರಾಯಚುರ, ಮಾನ್ವಿ, ಕೂಕನೂರ, ಯಲಬುರ್ಗಾ ಮ್ಯಾಗೇರಿ, ಸೊಲ್ಲಾಪುರ, ರಾಯನಾಳ ಉಮಚಗಿ, ಗಂಗಾವತಿ, ಆಳಕೇರಿ, ವಿವಧ ನಗರಗಳಿಂದ ಗಣ್ಯರು ಸಬಂದಿಕರು ಅಭಿಮಾನಿಗಳು ವಿವಿಧ ಸಂಘಟನೆಗಳ ಪದಾಧೀಕಾರಿಗಳು  ಮೃತರ ಮನೆಗೆ  ಆಗಮಿಸಿ  ಅವರ ಕುಟುಂಬಕ್ಕೆ ಸಾಂತ್ವಾನ ಸೂಚಿಸಿದರು.
ನಗರದ ಗವಿಸಿದ್ದೇಶ್ವರ ರುದ್ರಭೂಮಿಯಲ್ಲಿ ಅಪಾರ ಜನಸ್ತೋಮ ಮದ್ಯ ಸಂಜೆ ೫:೦೦ಕ್ಕೆ ಅಂತ್ಯಕ್ರಿಯ ಜರಗಿತು.

Advertisement

0 comments:

Post a Comment

 
Top