PLEASE LOGIN TO KANNADANET.COM FOR REGULAR NEWS-UPDATES

 ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯಡಿ ಸುಧಾರಣೆ ಸಂಸ್ಥೆಗಳಾದ ಬಾಲಕರ ಮತ್ತು ಬಾಲಕಿಯರ ಸರ್ಕಾರಿ ಬಾಲಮಂದಿರಗಳಲ್ಲಿ ಅರೆಕಾಲಿಕ ದೈಹಿಕ ಶಿಕ್ಷಕ, ಯೋಗ ತರಬೇತಿದಾರರು ಆರ್ಟ್ ಮತ್ತು ಕ್ರಾಫ್ಟ್ ಕಮ್ ಮ್ಯೂಸಿಕ್ ಟೀಚರ್ ಹಾಗೂ ಮನೆ ಪಾಠ ಹೇಳಿಕೊಡಲು ಶಿಕ್ಷಕರನ್ನು ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸಲು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಮನೆ ಪಾಠ ಶಿಕ್ಷಕರು 02 ಹುದ್ದೆಗಳಿದ್ದು ಬಿ.ಎಡ್ ಅಥವಾ ಡಿ.ಎಡ್ ವಿದ್ಯಾರ್ಹತೆ ಹೊಂದಿರಬೇಕು, ಶಿಕ್ಷಕರಾಗಿ ಕನಿಷ್ಠ 3 ವರ್ಷದ ಅನುಭವ ಹೊಂದಿರಬೇಕು, 21 ರಿಂದ 38 ವರ್ಷದವರಾಗಿರಬೇಕು. ಮಾಸಿಕ ವೇತನ 4,000 ನೀಡಲಾಗುವುದು. ದೈಹಿಕ ಶಿಕ್ಷಣ ಹಾಗೂ ಯೋಗ ಶಿಕ್ಷಕರು 02 ಹುದ್ದೆಗಳಿದ್ದು ಸಿ.ಪಿ.ಎಡ್ ಅಥವಾ ಬಿ.ಪಿ.ಎಡ್ ವಿದ್ಯಾರ್ಹತೆ ಹೊಂದಿರಬೇಕು, ಶಿಕ್ಷಕರಾಗಿ ಕನಿಷ್ಠ 3 ವರ್ಷದ ಅನುಭವ ಹೊಂದಿರಬೇಕು, 21 ರಿಂದ 38 ವರ್ಷದವರಾಗಿರಬೇಕು. ಮಾಸಿಕ ವೇತನ 4,000 ನೀಡಲಾಗುವುದು.
ಅಭ್ಯರ್ಥಿಗಳು ಅಂಗೀಕೃತ ಸಂಸ್ಥೆಯಿಂದ ಅಂಕಪಟ್ಟಿ ಅಥವಾ ವಿಶ್ವ ವಿದ್ಯಾನಿಲಯಗಳಿಂದ ಪದವಿ ಪಡೆದಿರಬೇಕು, ಗೌರವಧನದ ಆಧಾರದ ಮೇಲೆ 2014-15ನೇ ಸಾಲಿನಲ್ಲಿ ಒಂದು ವರ್ಷದ ಅವಧಿಗೆ ಅರೆಕಾಲಿಕ ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸಬೇಕಾಗಿರುತ್ತದೆ. ಆಯ್ಕೆಯಾದ ಅಭ್ಯರ್ಥಿಗಳ ಹುದ್ದೆಯು ಅರೆಕಾಲಿಕ ಆಧಾರದ ಹುದ್ದೆಯಾಗಿದ್ದು ಯಾವುದೇ ಕಾರಣಕ್ಕೂ ಸಕ್ರಮಗೊಳಿಸಲಾಗುವುದಿಲ್ಲ. ನೇಮಕಗೊಂಡ ಸಿಬ್ಬಂದಿಗಳ ಸೇವೆಯು ಸಂಪೂರ್ಣ ತಾತ್ಕಾಲಿಕವಾಗಿದ್ದು ಸರ್ಕಾರ ಸೇವೆಯಲ್ಲಿ ಸಕ್ರಮಗೊಳ್ಳಲು ಅವಕಾಶವಿರುವುದಿಲ್ಲ. ಕನಿಷ್ಠ ಅರ್ಹತೆಗಿಂತ ಹೆಚ್ಚಿನ ಶೈಕ್ಷಣಿಕ ಅರ್ಹತೆ ಹಾಗೂ ಅನುಭವವಿದ್ದರೆ ಆದ್ಯತೆ ನೀಡಿ ಪರಿಗಣಿಸಲಾಗುವುದು, ಸ್ಥಳೀಯ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುವುದು,  ಸೆ.20 ರೊಳಗಾಗಿ ಅಗತ್ಯ ಪ್ರಮಾಣ ಪತ್ರಗಳೊಂದಿಗೆ ಸ್ವ-ವಿವರ ಪತ್ರವನ್ನು ಸಲ್ಲಿಸಬಹುದಾಗಿದೆ. 
ಅರ್ಜಿಯೊಂದಿಗೆ ಶೈಕ್ಷಣಿಕ ಅರ್ಹತೆಯ ದೃಢೀಕೃತ ಪ್ರಮಾಣ ಪತ್ರ, ಪಾಸಪೋರ್ಟ್ ಅಳತೆಯ ಒಂದು ಭಾವಚಿತ್ರ ಲಗತ್ತಿಸಿದ ಸ್ವವಿವರ ಪತ್ರ, ಅನುಭವ ಪ್ರಮಾಣ ಪತ್ರಗಳು, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಹೆಸರಿನಲ್ಲಿ ತಗೆದ ರೂ.100/- ಡಿ.ಡಿ.ಯೊಂದಿಗೆ ಸ್ವ-ವಿವರ ಪತ್ರವನ್ನು ಸೆ.20 ರೊಳಗಾಗಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಕೊಪ್ಪಳ ದೂರವಾಣಿ ಸಂಖ್ಯೆ: 08539-225030 ಸಂಪರ್ಕಿಸಬಹುದಾಗಿದೆ ಎಂದು ಮಹಿಳಾ ಮತ್ತು  ಮಕ್ಕಳ ಅಭಿವೃದ್ದಿ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ. 

Advertisement

0 comments:

Post a Comment

 
Top