PLEASE LOGIN TO KANNADANET.COM FOR REGULAR NEWS-UPDATES


 ಕನ್ನಡ ಸಾಹಿತ್ಯ ಪರಿಷತ್ತು, ವಿರಂಚಿ ಕಲಾ ಬಳಗದ ಸಂಯುಕ್ತಾಶ್ರಯದಲ್ಲಿ ಹಿರಿಯ ಬರಹಗಾರರಾದ ಈಶ್ವರ ಹತ್ತಿಯವರ ೩ ಪುಸ್ತಕಗಳ ಬಿಡುಗಡೆ ಸಮಾರಂಭ ರವಿವಾರ ೩೧-೦೮-೨೦೧೪ ರಂದು ಇಲ್ಲಿನ  ಜ.ಚ.ನಿ. ಭವನದಲ್ಲಿ ಜರುಗಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಸಾಹಿತಿಗಳಾದ ಪ್ರೊ. ಜಿ.ಎಚ್. ಹನ್ನೆರಡುಮಠ  ದೀಪಬೆಳಗಿಸುವದರ ಮೂಲಕ ಉದ್ಘಾಟಿಸಿ ಮಾತನಾಡಿ ಈಶ್ವರ ಹತ್ತಿಯವರು ನಮ್ಮ ನಡುವಿನ ಪ್ರತಿಭಾನ್ವಿತ ಕವಿ. ಒಬ್ಬ ಕವಿಗೆ ಇರಬೇಕಾದುದು ಸಮಕಾಲಿನ ಬದುಕಿಗೆ ಸ್ಪಂದಿಸುವಂತಹ ಮನಸ್ಥಿತಿ ಹಾಗೂ ಅಭಿವ್ಯಕಿ. ಅಂತಹ ಅಭಿವ್ಯಕ್ತಿ ಈಶ್ವರ ಹತ್ತಿಯವರ ಕಾವ್ಯಕ್ಕಿದೆ. ಅವರ  ಕವಿತೆಗಳು ಓದುಗರ ಹೃದಯವನ್ನು ಮುಟ್ಟುತ್ತವೆ. ಇಂದು ಬಿಡುಗಡೆಗೊಂಡಿರುವ ಮೂರು ಕೃತಿಗಳು ಸಾಹಿತ್ಯ ಕ್ಷೇತ್ರದಲ್ಲಿ ಅವರ ಹೆಸರನ್ನು ಎತ್ತರಕ್ಕೇರಿಸಬಲ್ಲವು ಎಂದರು. 
ಇದೇ ವೇದಿಕೆಯಲ್ಲಿ ’ಗುನ್ನಾಳೇಶನ ವಚನಗಳು’ ಕೃತಿ ಕುರಿತು ಕನಕಗಿರಿಯ ಸುವರ್ಣಗಿರಿ ವಿರಕ್ತಮಠದ ಡಾ. ಶ್ರೀ ಚೆನ್ನಮಲ್ಲ ಸ್ವಾಮಿಗಳು, ’ಅಳ್ಳೊಳ್ಳಿ ಬಂತು ಕಳ್ಳೊಳ್ಳಿ’ ಶಿಶುಗೀತೆಗಳ ಕುರಿತು ಮಕ್ಕಳ ಸಾಹಿತಿ ಡಾ. ರಾಜೇಂದ್ರ ಗಡಾದ ಹಾಗೂ ಬಂಗಾಳಿ ಮೂಲದ ’ದೇವಿ ಹಾಗೂ ಇತರೆ ಕಥೆಗಳು’ ಅನುವಾದಿತ ಕಥಾ ಸಂಕಲನ ಕುರಿತಾಗಿ ಸಾಹಿತಿಗಳಾದ ಎ.ಎಂ. ಮದರಿ ಮಾತನಾಡಿದರು., ಅಧ್ಯಕ್ಷತೆಯನ್ನು ಕೊಪ್ಪಳ ಜಿಲ್ಲಾ ಕ.ಸಾ.ಪ.ದ ಅಧ್ಯಕ್ಷ ವೀರಣ್ಣ ನಿಂಗೋಜಿ ವಹಿಸಿ ಮಾತನಾಡಿದರು.
ವೇದಿಕೆಯಲ್ಲಿ ನಿವೃತ್ತ ಕಾರ್ಯಪಾಲಕ ಇಂಜಿನಿಯರ್ ಎಸ್.ಕೆ. ಪಾಟೀಲ, ಕವಯತ್ರಿ ವಿಮಲಾ ಇನಾಂದಾರ, ಕವಿ ಈಶ್ವರ ಹತ್ತಿ   ಉಪಸ್ಥಿತರಿದ್ದರು. ಪ್ರಾರ್ಥನೆ ಮತ್ತು ನಾಡಗೀತೆ ಅನಸೂಯಾ ಜಾಗಿರದಾರ ಸಂಗಡಿಗರು,  ಸ್ವಾಗತ ಮತ್ತು ಪ್ರಸ್ತಾವಿಕ ಶಿ.ಕಾ.ಬಡಿಗೇರ, ಅತಿಥಿ ಪರಿಚಯ ಅಲ್ಲಮಪ್ರಭು ಬೆಟ್ಟದೂರು, ನಿರೂಪಣೆ ವಿಜಯಲಕ್ಮಿ ಕೊಟಗಿ, ನಿರ್ವಹಿಸಿದರು. ಈ ಕಾರ್ಯಕ್ರಮದಲ್ಲಿ ಎಲ್ಲ ಸಾಹಿತ್ಯಾಭಿಮಾನಿಗಳು ಭಾಗವಹಿಸಿದ್ದರು..

Advertisement

0 comments:

Post a Comment

 
Top