PLEASE LOGIN TO KANNADANET.COM FOR REGULAR NEWS-UPDATES

 ಕಾಲೇಜು ಶಿಕ್ಷಣ ಇಲಾಖೆ, ವಿಜಯನಗರದ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ ಬಳ್ಳಾರಿ ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕೊಪ್ಪಳ ಇವುಗಳ ಸಂಯುಕ್ತಾಶ್ರಯದಲ್ಲಿ ಇಂದು ದಿನಾಂಕ ೦೧-೦೯-೨೦೧೪ ರಂದು ಸೋಮವಾರ  ಬೆಳಿಗ್ಗೆ ೧೦ ಗಂಟೆಗೆ ಅಂತರ ಕಾಲೇಜು ಪುರುಷ ಮತ್ತು

ಮಹಿಳೆಯರ ಕಬಡ್ಡಿ ಪಂದ್ಯಾವಳಿಗಳ ಉದ್ಘಾಟನಾ ಸಮಾರಂಭವು  ಕಾಲೇಜಿನ ಆವರಣಲ್ಲಿ ಜರುಗಿತು.
               ಉದ್ಘಾಟಕರಾಗಿ ಸಂಸದರಾದ ಕರಡಿ ಸಂಗಣ್ಣ ಆಗಮಿಸಿ  ಕ್ರೀಡೆ ಮನುಷ್ಯನ ಅವಿಭಾಜ್ಯ ಅಂಗ . ಅದರಲ್ಲಿ ಕಬಡ್ಡಿ ಆಟ ಶಾರೀರಿಕ  ಹಾಗೂ ಮಾನಸಿಕ  ಗಟ್ಟಿತನ ಬೆಳಸಿಕೊಳ್ಳುವಲ್ಲಿ ಕಬಡ್ಡಿ ಆಟದ ಪಾತ್ರ  ದೊಡ್ಡದು.  ಇದೊಂದು  ದೇಸಿಯ ಕ್ರೀಡೆ. ಮೊದಮೊದಲು ನಾವು ಇದನ್ನು ನಿರ್ಲಕ್ಷಿಸಿದ್ದೆವು.  ಈಗ ಮತ್ತೆ ಇದಕ್ಕೆ  ಮರು ಜೀವ ಬಂದಿರುದು ಸಂತೋಷ. ಇತ್ತೀಚಿಗೆ ಬೆಂಗಳೂರಿನಲ್ಲಿ ದೊಡ್ಡ ಮಟ್ಟದಲ್ಲಿ ಇದನ್ನು ಆಯೋಜನೆ ಮಾಡಿರುವದು ನಿಜಕ್ಕು ಹರ್ಷದಾಯಕ. ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳು ಯಶಸ್ಸಿಗೆ ಕಾರಣವಾಗುತ್ತವೆ. ನಾನು ಅತ್ಯಂತ ಹರ್ಷದಿಂದ ಈ ಕಬಡ್ಡಿ ಆಟವನ್ನು ಉದ್ಘಾಟಿಸಿರುವೆನೆಂದರು. ಪ್ರಾಚಾರ್ಯ ಶಿವಪ್ಪ ಸಾಂತಪ್ಪನವರು . ಉಪನ್ಯಾಸಕರಾದ ತಿಮ್ಮಾರೆಡ್ಡಿ ಮೇಟಿ, ದೈಹಿಕ ನಿರ್ದೇಶಕಿ ಶೋಭಾ ಕೆ.ಎಸ್, ಪ್ರಕಾಶಗೌಡರ,  ರಾಘವೇಂದ್ರಾಚಾರ್ಯ, ದಾರುಕಾಸ್ವಾಮಿ, ಮಹೇಶಮಮದಾಪುರ,  ಶುಭಾ, ನಂದಾ, ಗಾಯತ್ರಿ, ಡಾ.ಗಿರಿಜಾ, ಸುಧಾ ಟಿ, ಪುನೀತಾ, ಡಾ. ಪ್ರಕಾಶಬಳ್ಳಾರಿ, ವೀರಣ್ಣ ಸಜ್ಜನರ, ರವಿಕುಮಾರ ಹಿರೇಮಠ, ಡಾ.ತುಕಾರಾಂ ನಾಯಕ್, ಅಶೋಕ ಎಕಸಲಾಪುರ, ಎಂ.ಶಿವಣ್ಣ ,  ಶರಣಪ್ಪ,  ಗೋಣಿಬಸಪ್ಪ ಮೊದಲಾದವರು ಹಾಗೂ ಕ್ರೀಡಾಪಟುಗಳು ಭಾಗವಹಿಸಿದ್ದರು.

Advertisement

0 comments:

Post a Comment

 
Top