PLEASE LOGIN TO KANNADANET.COM FOR REGULAR NEWS-UPDATES

ಗೃಹ ಸಚಿವ ಜಾರ್ಜ ರಾಜೀನಾಮೆ ಒತ್ತಾಯಿಸಿ 
ಕೊಪ್ಪಳ,ಜು. ೨೨:  ಗೃಹಖಾತೆಯನ್ನು ಸಮರ್ಪಕವಾಗಿ ನಿರ್ವಹಿಸದೆ, ರಾಜ್ಯದಲ್ಲಿ ಕಾನೂನು sಸುವ್ಯವಸ್ಥೆ ಹದೆಗೆಡಲು,  ಹರಾಜಕತೆ ನಿರ್ಮಾಣವಾಗಲೂ ಕಾರಣವಾಗಿರುವ ಗೃಹ ಸಚಿವ ಕೆ.ಜೆ.ಜಾರ್ಜ ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಬಿಜೆಪಿ ಜಿಲ್ಲಾ ಯುವ ಮೋರ್ಚಾ ಘಟಕ ಒತ್ತಾಯಿಸಿದೆ. 
ಈ ಕುರಿತು  ಮಂಗಳವಾರದಂದು ಯುವ ಮೋರ್ಚಾ ಘಟಕವು ಅಶೋಕ ವೃತ್ತದಲ್ಲಿ ಪ್ರತಿಭಟನೆ ನಡೆಸಿ ತಹಶೀಲ್ದಾರ ಮುಖಾಂತರ ರಾಜ್ಯಪಾಲರಿಗೆ ಮನವಿ ಪತ್ರ ರವಾನಿಸಲಾಯಿತು. ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದ ಸರಕಾರ ಅಧಿಕಾರ ಮಹಿಸಿಕೊಂಡಾಗಿನಿಂದ ಅತ್ಯಾಚಾರದಂತಹ ಪ್ರಕರಣಗಳು  ದಿನೇ ದಿನೇ ಹೆಚ್ಚುತ್ತಲಿವೆ. ಮಹಿಳೆಯರಿಗೆ ಸೂಕ್ತ ರಕ್ಷಣೆ ಇಲ್ಲದಂತಾಗಿದೆ.  ವರದಕ್ಷಣೆ ಕಿರುಕುಳ, ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಸೇರಿದಂತೆ ಸಾಮೂಹಿಕ ಅತ್ಯಾಚಾರ ಪ್ರಕರಣಗಳು ಜನರನ್ನು  ತಲ್ಲಣಗೊಳಿಸಿವೆ. ಇಡೀ ರಾಜ್ಯದಲ್ಲಿ ಮಹಿಳೆಯರು ಸುರಕ್ಷಿತವಾಗಿ ಓಡಾಡುವ ಪರಸ್ಥಿತಿ ಇಲ್ಲವಾಗಿದೆ ಹಾಡುಹಗಲೇ ಕೊಲೆ ಪ್ರಕರಣಗಳು ನಡೆಯುತ್ತಿವೆ.
ರಾಜ್ಯದಲ್ಲಿ ಗೃಹಖಾತೆಯ ಹೊಣೆ ಹೊತ್ತಿರುವ ಕೆ.ಜೆ.ಜಾರ್ಜರವರ ಅಸಮರ್ಥ ಕಾರ್ಯವೈಖರಿಯೇ ಕಾರಣ ಎಂಬುದು ಸ್ಪಷ್ಟವಾಗಿದೆ, ರಾಜ್ಯದಲ್ಲಿ ಕಾಂಗ್ರೇಸ್ ಪಕ್ಷ ಅಧಿಕಾರ ವಹಿಸಿಕೊಂಡು ಪಕ್ಷಪಾತ ಧೊರಣೆಯನ್ನು ತನ್ನ ಆಡಳಿತದಲ್ಲಿ  ಅಳವಡಿಸಿಕೊಂಡು ಸಚಿವರು ಪೋಲೀಸ್ ಅಧಿಕಾರಿಗಳನ್ನು ವಿಶ್ವಾಸಕ್ಕೆ ತೆಗೆದಿಕೊಂಡು ರಾಜ್ಯದಲ್ಲಿ ಸುರಕ್ಷಿತ ಆಡಳಿತ ನೀಡುವಲ್ಲಿ  ಸಂಪೂರ್ಣ ವಿಫಲವಾಗಿದೆ.
ಸ್ವಯಂ ಕಾಂಗ್ರೇಸ್ ಶಾಸಕರು, ಮುಖಂಡರುಗಳ ಪುತ್ರರು, ಸಂಬಂಧಿಕರು ಅಪರಾಧ ಪ್ರಕರಣಗಳಲ್ಲಿ ಸಿಲಿಕಿದ್ದರೂ ನಿಷ್ಪಕ್ಷಪಾತ ತನಿಖೆ ನಡೆಸಿ, ಶಿಕ್ಷಿಸುವುದಕ್ಕೆ ಅಗತ್ಯವಾದ ಸೆರ್ಯವನ್ನು ಪೋಲೀಸರಿಗೆ ತುಂಬುವಲ್ಲಿ ಗೃಹ ಸಚಿವರು ಸಂಪೂರ್ಣವಾಗಿ ವಿಫಲವಾಗಿದ್ದಾರೆ.
  ಹಾಡು ಹಗಲೇ ಕೊಲೆ ಮಾಡಿ ಕಾನೂನು ಕೈಯಿಂದ ತಪ್ಪಿಸಿಕೊಂಡು ಅಪರಾಧಿಗಳು ನಿರ್ಭಯವಾಗಿ ಓಡಾಡುತ್ತಿದ್ದಾರೆ. ಇವರ ಅಸಹಾಯಕತೆಯನ್ನು ದುರುಪಯೋಗಪಡಿಸಿಕೊಳ್ಳುತ್ತಿರುವ ಕಾಂಗ್ರೇಸ್ ಮುಖಂಡರು ಪೋಲೀಸ್ ಅಧಿಕಾರಿಗಳನ್ನೇ ನಿಯಂತ್ರದಲ್ಲಿಟ್ಟುಕೊಂಡು ಅಪರಾಧಿ ಕೃತ್ಯಗಳಲ್ಲಿ  ತೊಡಗಿದ್ದಾರೆ. ಇಲಾಖೆಯನ್ನು ಸಮರ್ಪಕವಾಗಿ ನಿರ್ವಹಿಸದ ಗೃಹ ಸಚಿವರು ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ಬಿಜೆಪಿ ಯುವ ಮೋರ್ಚ ಜಿಲ್ಲಾ ಘಟಕ ಒತ್ತಾಯಿಸಿ ಇವರು ರಾಜೀನಾಮೆ  ನೀಡದಿದ್ದಲ್ಲಿ ರಾಜ್ಯದ ಹಿತದೃಷ್ಠಿಯಿಂದ ಮುಖ್ಯಂತ್ರಿಗಳೇ ಗೃಹಸಚಿವರನ್ನು ಸಂಪುಟದಿಂದ ಕೈಬಿಡಬೇಕೆಂದು ಒತ್ತಾಯಿಸಲಾಯಿತು. 
ಪ್ರತಿಭಟನೆ ಜಿಲ್ಲಾಧ್ಯಕ್ಷ ಮಂಜುನಾಥ ಹಂದ್ರಾಳ, ನೇತೃತ್ವದಲ್ಲಿ ಅಪ್ಪಣ್ಣ ಪದಕಿ, ರಾಜು ಬಾಕಳೆ, ಸಿದ್ದಲಿಂಗಯ್ಯ ಸ್ವಾಮಿ ಹಿರೇಮಠ,  ಶಾಮಲಾ ಕೊನಾಪುರ, ಪೃಥ್ವಿರಾಜ ಚಾಕಲಬ್ಬಿ, ಪ್ರಶಾಂತ ದಿನ್ನಿ, ದೇವರಾಜ ಹಾಲಸಮುದ್ರ, ಪರಮಾನಂದ ಯಾಳಗಿ, ಗವಿಸಿದ್ದಪ್ಪ ಹಂಡಿ, ನಾಗರಾಜ ಬಿ.ಕೆ., ಹರ್ಷ ಕುಕನೂರು, ಶಿವಕುಮಾರ ಕಟಗರ, ಮಂಜುನಾಥ ಯಲಬುರ್ಗಾ, ಶಶಿ ಹೂಗಾರ, ಕಾಸಿಂಸಾಬ, ಪರಶುರಾಮ ತೆಳಗಡೆ, ನೂರಪಾಷಾ, ಬಸವರಾಜ ಜಮೇದಾರ, ನಾಗರಾಜ ಚಿತ್ರಗಾರ, ದತ್ತುವೈದ್ಯ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

Advertisement

0 comments:

Post a Comment

 
Top