PLEASE LOGIN TO KANNADANET.COM FOR REGULAR NEWS-UPDATES

ಗೋವಾದ ಬೈನಾ ಸಂತ್ರಸ಼ರಿಗೆ ಗೋವಾ ಸರಕಾರ ಮತ್ತು ಕನಾಟಕ ಸರಕಾರ ಕೂಡಲೇ ನೆಲೆ ಒದಗಸಿ ಅವರ ಉಪಜೀವನಕ್ಕೆ ಅವಕಾಶ ಮಾಡಿಕೊಡಬೇಕೆಂದು ಆಗ್ರಹಿಸಿ (ನಾರಾಯಣಗೌಡರ ಬಣ) ಕಾರ್ಯಕರ್ತರು ನಗರದ ಅಶೋಕ ವೃತ್ತದಲ್ಲಿ ಪ್ರತಿಭಟಿಸಿ ಗೋವಾ ಮತ್ತು ಕರ್ನಾಟಕ ಸರಕಾರಗಳ ವಿರುದ್ಧ ಆಕ್ರೊಶ ವ್ಯಕ್ತಪಡಿಸಿದರು. 
ಬೈನಾ ಸಂತ್ರಸ್ತರಿಗೆ ಕರ್ನಾಟಕ ಬಹಳಷ್ಟು ಜನ ಸ್ವಾಮಿಗಳು ಮತ್ತು ಸಂಘ ಸಂಸ್ಥೆಗಳು ಈಗಾಗಲೇ ಸಹಾಯ ಹಸ್ತ ಚಾಚಿವೆ. ಆದರೆ ಗೋವಾ ಮತ್ತು ಕರ್ನಾಟಕ ಸರಕಾರಗಳು ಸಂತ್ರಸ್ಥರ ನೆರವಿಗೆ ಬಾರದಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ ಎಂದು ಹೇಳಿದರು. ಗೋವಾ ಮತ್ತು ಕರ್ನಾಟಕ ಸರಕಾರ ಬೈನಾ ಸಂತ್ರಸ್ತರಿಗೆ ಶಾಶ್ವತ ಪರಿಹಾರ ಮಾಡಿಕೊಡಬೇಕೆಂದು ಕರವೇ ತಾಲೂಕ ಅಧ್ಯಕ್ಷ ಪ್ರವೀಣ ಬ್ಯಾಹಟ್ಟಿ (ಕವಲೂರ) ಆಗ್ರಹಿಸಿದರು. 
ಈ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷ ಬಸನಗೌಡ ಪೋಲಿಸಪಾಟೀಲ, ತಾಲೂಕ ಅಧ್ಯಕ್ಷ ಪ್ರವೀಣ ಬ್ಯಾಹಟ್ಟಿ, ಪ್ರಧಾನ ಕಾರ್ಯದರ್ಶಿ ಗವಿಸಿದ್ದಪ್ಪ ಹಂಡಿ, ಪ್ಲಥ್ವಿರಾಜ್ ಚಾಕಲಬ್ಬಿ, ಶಿವು ಕ, ಶಶಿ ಹೂಗಾರ, ಮಂಜುನಾಥ ಯಲಬುರ್ಗಾ, ಕಳಕಪ್ಪ ಗೆಜ್ಜಿ, ತಾಲೂಕ ಅಧ್ಯಕ್ಷ ಪ್ರವೀಣ ಬ್ಯಾಹಟ್ಟಿ ಇನ್ನಿತರ ಕಾರ್ಯಕರ್ತರು ಉಪಸ್ಥಿತರಿದ್ದರು 


Advertisement

0 comments:

Post a Comment

 
Top