PLEASE LOGIN TO KANNADANET.COM FOR REGULAR NEWS-UPDATES

 ಧಾರವಾಡ ಹೈಕೋರ್ಟ ವ್ಯಾಪ್ತಿಯಲ್ಲಿರುವ ಕೊಪ್ಪಳ ಜಿಲ್ಲಾ ಸತ್ರ ನ್ಯಾಯಾಲಯವನ್ನು ಗುಲಬರ್ಗಾ ಹೈ ಕೋರ್ಟ ವ್ಯಾಪ್ತಿಗೆ ನೀಡದಿರುವಂತೆ ಕೇಂದ್ರ ಕಾನೂನು ಸಚಿವರೊಂದಿಗೆ ಚರ್ಚಿಸುವದಾಗಿ ಸಂಸದ ಸಂಗಣ್ಣ ಕರಡಿ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿ, ಪ್ರಸ್ತುತ ಕೊಪ್ಪಳ ಜಿಲ್ಲೆಯು ಧಾರವಾಡ ಹೈ ಕೋರ್ಟ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು ಸಾರ್ವಜನಿಕರ ಕಕ್ಷಿದಾರರ ಮತ್ತು ನ್ಯಾಯವಾದಿಗಳ ಹಿತದೃಷ್ಟಿಯಿಂದ ಧಾರವಾಡ ಹೈಕೋರ್ಟದಲ್ಲಿ ಮುಂದಯವರೆಸಬೇಕು. ಕೊಪ್ಪಳ ಜಿಲ್ಲೆಯ ಬೌಗೊಳಿಕವಾಗಿ ಹೈ.ಕ. ಪ್ರದೇಶಕ್ಕೆ ಓಳಪಟ್ಟಿದ್ದರು ಸಾರ್ವಜನಿಕರಿಗೆ ಗುಲಬರ್ಗಕ್ಕೆ ಹೋಗಿ ಬರಲು ಸುಮಾರ ೨ ದಿನಗಳು ಬೇಕಾಗುವದರಿಂದ ಮತ್ತು ಸಮಯ ವ್ಯಯವಾಗುವದರಿಂದ ಸಾರ್ವಜನಿಕರಿಗೆ ತೊಂದರೆಯಾಗುತಿದೆ. ಧಾರವಾಡ ಹೈಕೋರ್ಟ ಕೊಪ್ಪಳಕ್ಕೆ ತುಂಬ ಹತ್ತಿರವಾಗಿದ್ದು ಈಗಾಗಲೇ ಸಾಕಷ್ಟು ಅನುಕೂಲವಾಗಿರುತ್ತದೆ. ಆದ ಕಾರಣ ಕೊಪ್ಪಳ ಜಿಲ್ಲೆಯನ್ನು ಧಾರವಾಡ ಹೈ ಕೋರ್ಟನಲ್ಲಿ ಮುಂದುವರೆಸಲು ಕೇಂದ್ರ ಕಾನೂನು ಸಚಿವರೊಂದಿಗೆ ಚರ್ಚಿಸಿ ವಾಸ್ಥವ ಸಂಗತಿ ತಿಳಿಸಿ ಮನವರಿಕೆ ಮಾಡಿಕೊಡಲಾಗುವುದು ಎಂದು ಸಂಸದ ಸಂಗಣ್ಣ ಕರಡಿ ತಿಳಿಸಿದ್ದಾರೆ.

Advertisement

0 comments:

Post a Comment

 
Top