ಕೊಪ್ಪಳ-೧೯ ನಗರದ ಜಿಲ್ಲಾ ಕಾಂಗ್ರೇಸ್ ಕಾರ್ಯಾಲಯದಲ್ಲಿ ನಡೆದ ಜಿಲ್ಲಾ ಕಾಂಗ್ರೇಸ್ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ ಸಚಿವರು ಲೋಕಸಭಾ ಚುನಾವಣೆಯ ಫಲಿತಾಂಶಕ್ಕೆ ಪಕ್ಷದ ಮುಖಂಡರಾಗಲಿ, ಪದಾಧಿಕಾರಿಗಳಾಗಲಿ, ಕಾರ್ಯಕರ್ತರಾಗಲಿ ಸೋಲಿಗೆ ಎದೆಗುಂದದಿರಿ ಚುನಾವಣಾ ಸಮಯದಲ್ಲಿ ಕೆಲವು ಸೂತ್ರಗಳು ಹಾಗೂ ಕೇಲವು ಲೆಕ್ಕಾಚಾರಗಳ ತಪ್ಪು ಗ್ರಹಿಕೆಯಿಂದ ನಮಗೆ ಸೋಲಾಗಿದೆ. ಈ ಸೋಲನ್ನು ನಾವು ಸವಾಲಾಗಿ ಸ್ವೀಕರಿಸಿ ಮುಂಬರುವ ಯಾವುದೇ ಚುನಾವಣೆಯಲ್ಲಿ ನಾವು ಸನ್ನದರಾಗಿ ಎದುರಾಳಿಯನ್ನು ಎದುರಿಸಿ ಕಾಂಗ್ರೇಸ್ ಪಕ್ಷವನ್ನು ಜಯಭೇರಿಗೊಳಿಸೋಣ ಎಂದು ಹೇಳಿದರು.
ಅಚ್ಚೇ ದಿನ್ ಆಯೆಂಗೆ ಎಂದು ಪ್ರಧಾನಿ ಗದ್ದುಗೆ ಏರಿರುವ ಮೋದಿಯವರು ಇವರ ಅಧಿಕಾರದ ಕೇವಲ ೪೦ ದಿನಗಳಲ್ಲಿಯೇ ದೇಶದ ಅರ್ಥವ್ಯವಸ್ಥೆ ಹಾಳಾಗಿ ಬೆಲೆಗಳು ಗಗನಕ್ಕೇರಿವೆ ಶ್ರೀಸಾಮಾನ್ಯರಿಗೆ ಜೀವನ ಬಾರ ಕಷ್ಟವಾಗಿ ಮೋದಿಕ್ಕೆ ಬುರೇ ದಿನ್ ಗಳ ಬಗ್ಗೆ ಶ್ರೀಸಾಮಾನ್ಯ ಲೆಕ್ಕಾಚಾರ ಮಾಡುತ್ತಿದ್ದಾರೆ. ಕೇಂದ್ರದ ರೈಲ್ವೆ ಮಂತ್ರಿಗಳಾದ ಸದಾನಂದಗೌಡ್ರ ಹೈದ್ರಾಬಾದ ಕರ್ನಾಟಕದ ಮಹಾತ್ವಾಕಾಂಕ್ಷಿ ಯೋಜನೆಗಳಾದ ಗಿಣಗೇರಾ-ಮಹೇಬೂಬನಗರ, ಗದಗ-ವಾಡಿ, ಯೋಜನೆಗಳಿಗೆ ಯಾವುದೇ ಅನುದಾನ ನೀಡದೇ ಮಲತಾಯಿ ದೋರಣೆ ನೀಲುವು ಇವರ ಅಚ್ಚೇ ದಿನ್ನ್ನ ಸಂಕೇಂತವಾಗಿದೆ ಎಂದು ಎನ್‌ಡಿಎ ಸರಕಾರದ ವಿರುದ್ದ ಕಿಡಿಕಾರಿದರು.
ಈ ಸಂದರ್ಭದಲ್ಲಿ ಶಾಸಕರಾದ ಬಸವರಾಜ ರಾಯರಡ್ಡಿ , ಜಿಲ್ಲಾ ಅಧ್ಯಕ್ಷರಾದ ಕೆ. ಬಸವರಾಜ ಹಿಟ್ನಾಳ, ಮಾಜಿ ಸಚಿವರುಗಳಾದ ಮಲ್ಲಿಕಾರ್ಜುನ ನಾಗಪ್ಪ, ಸಾಲೋಣಿ ನಾಗಪ್ಪ, ಹಸನಸಾಬ ದೋಟಿಹಾಳ, ಎಸ್.ಬಿ. ನಾಗರಳ್ಳಿ, ಜುಲ್ಲುಖಾದ್ರಿ, ಬಸಲಿಂಗಪ್ಪ ಭೂತೆ, ಬಿ. ಎಂ. ಶಿರೂರು, ರಡ್ಡಿ ಶ್ರೀನಿವಾಸ, ಹನಮಂತಪ್ಪ ನಾಯಕ, ಭೀಮಶೆಪ್ಪ ಹಳ್ಳಿ, ಬಾಬುಸಾಬ, ಡಾಗಿ ರುದ್ರೇಶ, ಶ್ರೀಮತಿ ಇಂದಿರಾ ಬಾವಿಕಟ್ಟಿ, ಡಾ|| ಕೆ.ಎನ್. ಪಾಟೀಲ್, ಶಿವಶಂಕರ ರಡ್ಡಿ,ಕೃಷ್ಣಾ ಇಟ್ಟಂಗಿ, ರಘುನಾಥ ಪವಾರ, ಬಸವರಾಜ ಸ್ವಾಮಿ ಮಳಿಮಠ, ಸುರೇಶ ಕಡಿವಾಲ ಇನ್ನೂ ಅನೇಕ ಜಿಲ್ಲಾ ಕಾಂಗ್ರೇಸ್ ಸಮಿತಿಯ ಪದಾಧಿಕಾರಿಗಳು ಮತ್ತು ಸದಸ್ಯರು ಪಕ್ಷದ ವಕ್ತಾರರಾದ ಅಕ್ಬರಪಾಷ ಪಲ್ಟನ್ಉಪಸ್ಥಿತರಿದ್ದರು.
0 comments:
Post a Comment