ಶಿವಮೊಗ್ಗದ ಕರ್ನಾಟಕ ಸಂಘ ನೀಡುವ ಪಿ ಲಂಕೇಶ ಕಾವ್ಯ ಪ್ರಶಸ್ತಿ ಮತ್ತು ಸಂಗಮಸಾಹಿತ್ಯಾ ಪ್ರಶಸ್ತಿ, ಜೊತೆಗೆ ರಾಜ್ಯ ಕನ್ನಡ ಸಾಹಿತ್ಯ ಪರಿಷತ್ತು ನೀಡುವ ವಾರ್ಷಕ ದತ್ತಿ ಮುದ್ದಣ್ಣ ಕಾವ್ಯ ಪ್ರಶಸ್ತಿಯು ನೂರ್ ಗಜಲ್ ಕೃತಿಗೆ ದೊರಕಿದೆ ಎಂದು ಪರಿಷತ್ತಿನ ಗೌರವ ಕಾರ್ಯದರ್ಶಿ ಸಿ. ಕೆ ರಾಮೇಗೌಡ ಅವರು ಪ್ರಕಟಣೆ ಮೂಲಕ ತಿಳಿಸದ್ದಾg.
ಇದೇ ತಿಂಗಳು ೫ ರಂದು ಜರುಗಿದ ಕರ್ನಾಟಕ ಸಂಘದ ವಾರ್ಷಿಕ ಸಮಾರಂಭದಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರ ಅಧ್ಯಕ್ಷ ಬಂಜಗೇರಿ ಜಯ ಪ್ರಕಾಶ ಅವರು ಅಲ್ಲಾಗಿರಿರಾಜ್ ಕನಕಗಿರಿ ಇವರಿಗೆ ಪಿ ಲಂಕೇಶ ಕಾವ್ಯ ಪ್ರಶಸ್ತಿ ಪ್ರದಾನ ಮಾಡಿದರು. ಇದೇ ದಿನಾಂಕ ೨೦/೦೭/೨೦೧೪ ರಂದು ಹುನುಗುಂದ ದಲ್ಲಿ ಸಂಗಮ ಸಾಹಿತ್ಯ ಪ್ರಶಸ್ತಿಯನ್ನು ಅಲ್ಲಾಗಿರಿರಾಜ್ ಇವರಿಗೆ ಹಿರಿಯ ವಿಮರ್ಶಕ ಡಾ: ಗಿರಡ್ಡಿ ಗೋವಿಂದರಾಜ್ ಪ್ರಶಸ್ತಿ ಪ್ರದಾನ ಮಾಡವರು.
ಜುಲೈ ಕೊನೆ ವಾರದಲ್ಲಿ ಬೆಂಗಳೂರಿನ ಸಾಹಿತ್ಯ ಪರಿಷತ್ತು ಭವನದಲ್ಲಿ ಮುದ್ದಣ ಕಾವ್ಯ ಪ್ರಶಸ್ತಿ ನೀಡಲಾಗಿತ್ತಿದೆ.
ಅಭಿನಂದನೆಗಳು : ಗಜಲ್ ಕಾವ್ಯ ಮೂಲಕ ರಾಜ್ಯದಲ್ಲಿ ಹೊಸ
ಸಂಚಲನ ಮೂಡಿಸುವುದರ ಜೊತೆಗೆ ಅನೇಕ ನಗದು ಪ್ರಶಸ್ತಿಗೆ ಭಾಜನರಾದ ಗಜಲ್ ಕವಿ ಅಲ್ಲಾಗಿರಿರಾಜ್ ಕನಕಗಿರಿ ಇವರಿಗೆ ಡಾ: ಜಾಜಿ ದೇವೇಂದ್ರಪ್ಪ, ಹರಿನಾಥಬಾಬು, ಪವನ ಕುಮಾರ ಗುಂಡುರು.ರಮೇಶ ಗಬ್ಬುರು . ಡಾ ಕುಪ್ಪೇರಾವ್. ಅರಳಿ ನಾಗಭೂಷಣ. ಡಾ.ಶಿವಕುಮಾರ್ ಮಾಲಿಪಾಟೀಲ್. ಡಾ ಶರಣಪ್ಪ ಕೋಲ್ಕಾರ್ .ಸಿ.ಹೆಚ ನಾರನಾಳ್. ಹಾಗು ಕಾವ್ಯ ಲೋಕದ ಬಳಗ ಅಬಿನಂದನೆ ಸಲ್ಲಿಸಿದೆ.
0 comments:
Post a Comment