ಕೊಪ್ಪಳ : ಇತ್ತೀಚಿಗೆ ಭಾಗ್ಯನಗರ ರಸ್ತೆಯ ಪಾನಘಂಟಿ ಕಲ್ಯಾಣ ಮಂಟಪದಲ್ಲಿ ನಡೆದ ಅದ್ದೂರಿ ಕಾರ್ಯಕ್ರಮದಲ್ಲಿ ಲಯನ್ಸ್ ಕ್ಲಬ್ ನೂತನ ಅಧ್ಯಕ್ಷರಾಗಿ ವಾಣಿಜ್ಯೋಧ್ಯಮಿ ಶ್ರೀನಿವಾಸ ಗುಪ್ತಾ ಅಧಿಕಾರ ಸ್ವೀಕರಿಸಿದರು. ಕ್ಲಬ್‌ನ ಕಾರ್ಯದರ್ಶಿಯಾಗಿ ಲಯನ್ ಲಲಿತ್ ಜೈನ್ ಮತ್ತು ಖಜಾಂಚಿಯಾಗಿ ಲಯನ್ ಅರವಿಂದ ಅಗಡಿ ಸಹಿತ ಅಧಿಕಾರ ಸ್ವೀಕರಿಸಿದರು.
ಲಯನ್ ಪ್ರಭು ಹೆಬ್ಬಾಳ ಇವರಿಂದ ಶ್ರೀನಿವಾಸ ಗುಪ್ತಾರಿಗೆ ಅಧಿಕಾರ ಹಸ್ತಾಂತರಿಸಿ ಮಾತನಾಡಿದ ಹುಬ್ಬಳ್ಳಿಯ ಲಯನ್ ಮದನ್ ಬಿ.ದೇಸಾಯಿ ಸಾಮಾಜಿಕ ಕಾರ್ಯಗಳಲ್ಲಿ ಎಲ್ಲರೂ ಹೆಚ್ಚಿನ ಶ್ರದ್ದೆಯಿಂದ ದುಡಿಯಬೇಕು. ಲಯನ್ಸ್ ಕ್ಲಬ್ ಇಂತಹ ಸೇವಾ ಮನೋಭಾವನೆ ಹೊಂದಿದ್ದು ಕೊಪ್ಪಳ ಲಯನ್ಸ್ ಕ್ಲಬ್‌ನ ಈವರೆಗಿನ ಕೆಲಸಗಳು ಶ್ಲಾಘನೀಯವಾಗಿದ್ದು ಶ್ರೀನಿವಾಸ ಗುಪ್ತಾ ಇದನ್ನು ಮುಂದುವರೆಸಿಕೊಂಡು ಹೋಗಬೇಕೆಂದು ಕರೆನೀಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಹುಬ್ಬಳ್ಳಿಯ ವಿವೇಕಾನಂದ ಆಸ್ಪತ್ರೆಯ ಉಪಾಧ್ಯಕ್ಷರಾದ ಲಯನ್ ಡಾ.ಮುರುಳಿಧರ ರಾವ್ ಲಯನ್ಸ್ ಕ್ಲಬ್ ನ ಧೇಯೋದ್ಧೇಶಗಳನ್ನು ಸೇವಾ ಕಾರ್ಯಗಳನ್ನು ತಿಳಿಸಿ ಆರೋಗ್ಯಕ್ಕೆ ಸಂಬಂಧಿಸಿದ ಸಲಹೆಗಳನ್ನು ನೀಡಿದರು. ಅಧಿಕಾರ ಸ್ವೀಕರಿಸಿ ಮಾತನಾಡಿದ ಲಯನ್ ಶ್ರೀನಿವಾಸ ಗುಪ್ತಾ ತಮ್ಮ ಅವಧಿಯಲ್ಲಿ ಲಯನ್ಸ್ ಕ್ಲಬ್‌ನ ಯೋಜನೆಗಳಿಗನುಗುಣವಾಗಿ ಕಾರ್ಯನಿರ್ವಹಿಸುವ ಭರವಸೆ ನೀಡಿದರು. ಮತ್ತು ತಮ್ಮನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ ಎಲ್ಲ ಸದಸ್ಯರಿಗೆ ಅಭಿನಂದನೆಗಳನ್ನು ಸಲ್ಲಿಸಿದರು.
ಇದೇ ಸಂದರ್ಭದಲ್ಲಿ ಹಿರಿಯ ಲಯನ್ ಚಂಪಾಲಾಲಜಿ ಮೆಹತಾ ಇವರಿಗೆ ಗೌರವಪೂರ್ವಕ ಸನ್ಮಾನ ಮಾಡಲಾಯಿತು. ವೇದಿಕೆಯ ಮೇಲೆ ಲಯನ ಪ್ರಭು ಹೆಬ್ಬಾಳ, ಲಯನ್ ಚಂದ್ರಕಾಂತ ತಾಲೇಡಾ,ಲಯನ್ ಪರಮೇಶಪ್ಪ ಕೊಪ್ಪಳ,ಲಯನ್ ಬಸವರಾಜ ಬಳ್ಳೊಳ್ಳಿ,ಲಯನ್ ಲೇಡಿ ಅನುರಾಧಾ,ಲಯನ್ ಲೇಡಿ ಆರತಿ ಹಾಗೂ ಶ್ರೀಮತಿ ಮಾಧವಿ ಗುಪ್ತಾ,ಶ್ರೀಮತಿ ರೂಪಾ ಹೆಬ್ಬಾಳ ಉಪಸ್ಥಿತರಿದ್ದರು. ಲಯನ್ಸ್ ಕ್ಲಬ್ ನ ಹಿರಿಯರಾದ ಚಂಪಾಲಾಲಜಿ ಮೆಹತಾ ಇವರ ಸಾಧನೆ ಕುರಿತು ಲಯನ್ ಎಸ್.ಮಲ್ಲಿಕಾರ್ಜುನ್ ಮತ್ತು ಲಯನ್ ಜವಾಹರ್ ಜೈನ್ ಮಾತನಾಡಿದರು. ವಿವೇಕಾನಂದ ಶಾಲೆಯ ಪ್ರತಿಭಾವಂತ ಮಕ್ಕಳಿಗೆ ಪ್ರಶಸ್ತಿ ವಿತರಣೆ ಮಾಡಲಾಯಿತು.
ಕಾರ‍್ಯಕ್ರಮದಲ್ಲಿ ನಗರದ ಗಣ್ಯರು,ಲಯನ್ಸ್ ಕ್ಲಬ್‌ನ ಸದಸ್ಯರು ಭಾಗವಹಿಸಿದ್ದರು. ಆರಂಭದಲ್ಲಿ ವಿವೇಕಾನಂದ ಶಾಲೆಯ ಮಕ್ಕಳಿಂದ ಪ್ರಾರ್ಥನಾಗೀತೆ ನೆರವೇರಿತು. ಲಯನ್ ಪ್ರಭು ಹೆಬ್ಬಾಳ ಸ್ವಾಗತಿಸಿದರೆ ವಂದನಾರ್ಪಣೆಯನ್ನು ಲಯನ್ ಲಲಿತ್ ಜೈನ್ ಮಾಡಿದರು. ಕಾರ‍್ಯಕ್ರಮದ ನಿರೂಪಣೆಯನ್ನು ಮಹೇಶ ಬಳ್ಳಾರಿ,ವಿರೇಶ ಕೊಪ್ಪಳ,ಅಮೃತಾ ಕುಲಕರ್ಣಿ ಮತ್ತು ರಂಜಿತಾ ಜಾಗೀರದಾರ ಮಾಡಿದರು.
0 comments:
Post a Comment