ಕೊಪ್ಪಳ ನಗರಸಭೆಯಿಂದ ಅನುಷ್ಠಾನಗೊಳಿಸಲಾಗುವ ವಿವಿಧ ಯೋಜನೆಗಳಿಗಾಗಿ ನಗರಸಭೆ ವ್ಯಾಪ್ತಿಯಲ್ಲಿ ವಾಸಿಸುತ್ತಿರುವ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಸಾಮಾನ್ಯ ವರ್ಗಕ್ಕೆ ಸೇರಿದ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಎಸ್.ಎಫ್.ಸಿ.ನಿಧಿಯ ಶೇ.7.25 ರ ಯೋಜನೆಯಡಿ 2012-13ನೇ ಸಾಲಿನ ಬಾಕಿ ಉಳಿದ ಅನುದಾನದಲ್ಲಿ ಪಿ.ಹೆಚ್.ಡಿ./ಪೋಸ್ಟ್ ಡಾಕ್ಟರೇಟ್ ವ್ಯಾಸಂಗ ಮಾಡುತ್ತಿರುವ ಸಾಮಾನ್ಯ ವರ್ಗಕ್ಕೆ ಸೇರಿದ 05 ಅಭ್ಯರ್ಥಿಗಳಿಗೆ ತಲಾ ರೂ.20,000/- ರಂತೆ ಸಹಾಯಧನ ಒದಗಿಸಲಾಗುವುದು. ಎಸ್.ಎಫ್.ಸಿ. ಶೇ.22.75 ರ 2013-14ನೇ ಸಾಲಿನ ಬಾಕಿ ಉಳಿದ ಅನುದಾನದಲ್ಲಿ ಪಿಯುಸಿ/ಉದ್ಯೋಗಾಧಾರಿತ ಡಿಪ್ಲೋಮಾ ವ್ಯಾಸಂಗದ ಪರಿಶಿಷ್ಟ ಪಂಗಡದ 06 ವಿದ್ಯಾರ್ಥಿಗಳಿಗೆ ತಲಾ ರೂ.3,000/- ರಂತೆ. ಎಸ್.ಎಫ್.ಸಿ. ಶೇ.22.75 ರ 2013-14ನೇ ಸಾಲಿನ ಬಾಕಿ ಉಳಿದ ಅನುದಾನದಲ್ಲಿ ಬಿ.ಎ., ಬಿ.ಎಸ್ಸಿ, ಬಿ.ಕಾಂ ವ್ಯಾಸಂಗ ಮಾಡುವ ಪರಿಶಿಷ್ಟ ಪಂಗಡದ 01 ವಿದ್ಯಾರ್ಥಿಗೆ ರೂ.4,000 ಸಹಾಯಧನ ಮಂಜೂರು ಮಾಡಲಾಗುವುದು.
ಅರ್ಜಿಯೊಂದಿಗೆ ವ್ಯಾಸಂಗ ಮಾಡುತ್ತಿರುವ ಬಗ್ಗೆ ಸಂಬಂಧಪಟ್ಟ ವಿದ್ಯಾಲಯದಿಂದ ಪ್ರಮಾಣ ಪತ್ರ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಕುಟುಂಬದ ಪಡಿತರ ಚೀಟಿ, ಆಧಾರ ಕಾರ್ಡ್, 03 ಭಾವಚಿತ್ರಗಳು, ಚುನಾವಣಾ ಆಯೋಗದ ಗುರುತಿನ ಚೀಟಿಯೊಂದಿಗೆ ಅರ್ಹ ಅಭ್ಯರ್ಥಿಗಳು ಆ.05 ರೊಳಗಾಗಿ ನಗರಸಭೆಗೆ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಕೊಪ್ಪಳ ನಗರಸಭೆ ಪೌರಾಯುಕ್ತರು ತಿಳಿಸಿದ್ದಾರೆ.
0 comments:
Post a Comment