ಕೊಪ್ಪಳ ಹಾಗೂ ಯಲಬುರ್ಗಾ ತಾಲೂಕಿ ೩೦ ಹಳ್ಳಿಗಳಲ್ಲಿ ಸಮತ ಟ್ರಸ್ಟ್ ವತಿಯಿಂದ ೨೦೧೪-೧೫ನೇ ಸಾಲಿನ ೪ನೇ ವರ್ಷದ ಶಾಲಾ ದಾಖಲಾತಿ ಆಂದೋಲನ ಜೂನ್ ೧ನೇ ತಾರೀಕಿನಿಂದ ಜುಲೈ ೨೧ರವರೆಗೆ ಬೀದಿನಾಟಕದ ಮುಖಾಂತರ ಗ್ರಾಮೀಣ ಪ್ರದೇಶದ ಪಾಲಕರಲ್ಲಿ ಶಿಕ್ಷಣದ ಜಾಗೃತಿ ಮೂಡಿಸಲಾಯಿತು. ೧ನೇ ತರಗತಿಯಿಂದ ೧೦ನೇ ತರಗತಿವರೆಗಿನ ಶಾಲಾ ಬಿಟ್ಟ ಮಕ್ಕಳನ್ನು ಗುರುತಿಸಿ ಹಾಗೂ ೫ನೇ ತರಗತಿಯಿಂದ ಪದವಿವರಗಿನ ಮಕ್ಕಳನ್ನು ಸರ್ವೆ ಮಾಡಿ ಗುರುತಿಸಿ ಹಾಸ್ಟೆಲ್ ಹಾಗೂ ಶಾಲೆಗೆ ೧೨೨ ಮಕ್ಕಳನ್ನು ಸೇರಿಸಲಾಗಿದೆ. ಈ ಕಾರ್ಯಕ್ರಮದ ಸಮಾರೋಪ ಸಮಾರಂಭವನ್ನು ಹುಲಿಗಿ ಗ್ರಾಮದಲ್ಲಿ ನಡೆಯಿತು.
ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಮತ ಟ್ರಸ್ಟ್‌ನ ಮ್ಯಾನೇಜಿಂಗ್ ಟ್ರಸ್ಟಿ ಚಂದ್ರಶೇಖರ ಹೆಚ್.ಆರ್. ಪ್ರತಿಯೊಬ್ಬ ತಂದೆ ತಾಯಿಗಳು ಹೆಣ್ಣು ಗಂಡು ಎಂಬ ಭೇದಬಾವ ಮಾಡದೇ ಪ್ರತಿಯೊಬ್ಬ ಮಕ್ಕಳಿಗೆ ಶಿಕ್ಷಣ ನೀಡಬೇಕಾಗುತ್ತದೆ. ಇದರಿಂದ ದೇಶದ ಆರ್ಥಿಕ ಪ್ರಗತಿ ಹೆಚ್ಚುತ್ತದೆ ಎಂದರು.
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದ ಮೈಲಪ್ಪ ಎಂ. ಬಿಸರಳ್ಳಿ, ದಲಿತ ಹಾಗೂ ಹಿಂದುಳಿದ ಅಲ್ಪಸಂಖ್ಯಾತರಲ್ಲಿ ಶೇ. ೪೦ರಷ್ಟು ಮಕ್ಕಳು ಶಾಲೆಯಿಂದ ವಂಚಿರಾಗಿ ವಿವಿಧ ಕ್ಷೇತ್ರಗಳಲ್ಲಿ ಬಾಲ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದಾರೆ. ಇದೊಂದು ಮಕ್ಕಳ ಹಕ್ಕು ಉಲ್ಘಂಘನೆಯಾಗುತ್ತದೆ. ಆದ್ದರಿಂದ ಪ್ರತಿಯೊಬ್ಬರು ತಮ್ಮ ಮಕ್ಕಳನ್ನು ಕೆಲಸಕ್ಕೆ ಕಳಿಸದೇ ಶಾಲೆಗೆ ಕಳಿಸಬೇಕೆಂದು ಮನವಿ ಮಾಡಿದರು.
ಮುಖ್ಯ ಅತಿಥಿಗಳಾಗಿ ಹನುಮಂತಪ್ಪ ಮೇಳಗಮನಿ, ಬಸವರಾಜ ಪೂಜಾರ ಹಾಗೂ ಕಾರ್ಯಕರ್ತರಾದ ಸೌಭಾಗ್ಯ ಹೆಚ್., ಸೌಭಾಗ್ಯ ಗುಡ್ಲಾನೂರು, ಮೀನಾಕ್ಷಿ ಮಠದ, ಕಮಲಾಕ್ಷಿ ದೊಡ್ಡಮನಿ, ದೇವರಾಜ, ದುರ್ಗಮ್ಮ, ಹನುಮವ್ವ ಮತ್ತಿತರರು ಭಾಗವಹಿಸಿದ್ದರು.
ಕಾರ್ಯಕ್ರಮದ
ನಿರೂಪಣೆಯನ್ನು ನಾಗರಾಜ ನಿಟ್ಟಾಲಿ ನೆರವೇರಿಸಿದರು. ಸ್ವಾಗತ ಮಲ್ಲಿಕಾರ್ಜುನ ಬಂಗ್ಲಿ ಮಾಡಿದರು. ವಂದನಾರ್ಪಣೆಯನ್ನು ಧನರಾಜ್ ದೊಡ್ಡಮನಿ ಮಾಡಿದರು.
0 comments:
Post a Comment