ಕ್ಷುಲಕ ಕಾರಣಗಳನ್ನು ತೋರಿಸಿ ಪಾಲಿಸ್ತೈನೆ ನಾಗರೀಕರನ್ನು ಕೊಲ್ಲುತ್ತಿರುವ ಇಸ್ರೇಲಿ ವಿರುದ್ಧ ವಿಶ್ವದಾದ್ಯಂತ ಎಡ ಮತ್ತು ಪ್ರಗತೀಪರ ಸಂಘಟನೆಗಳು ಚಳುವಳಿಯನ್ನು ಮಾಡುತ್ತಾ ಬಂದಿದ್ದಾವೆ. ಇವುಗಳಲ್ಲಿ ಪ್ರಮುಖವಾಗಿ ಸೋಸಿಯಲ್ ಅಲೈನ್ಸ್ ಆಸ್ಟ್ರೇಲಿಯಾ, ಸೋಸಿಯಲಿಸ್ಟ್ ಪಾರ್ಟಿ ಆಫ್ ಮಲೇಶಿಯಾ, ಪಾರ್ಟಿಡೋ ಲಕಾಸನ್ಗ ಮಾಸಾ (ಪಿ.ಎಲ್.ಎಂ.) ಫಿಲಿಪ್ಪೀಯನ್ಸ್, ಸೋಸಿಯಲಿಸ್ಟ್ ಓಟೇರಾವೋ ನ್ಯೂಜಿಲ್ಯಾಂಡ್, ಪಾರ್ಟೈ ರಕ್ಯಾತ್ ಪೆಕಾರ್ಜ್ (ವರ್ಕಿಂಗ್ ಪೀಪಲ್ ಪಾರ್ಟಿ) ಇಂಡೋನೆಷಿಯಾ ಜೊತೆಗೆ ಭಾರತ ಕಮ್ಯುನಿಷ್ಟ್ ಪಕ್ಷ (ಮಾರ್ಕ್ಸ್‌ವಾದಿ-ಲೇನಿನ್‌ವಾದಿ) ಲಿಬರೇಷನ್ ಪಕ್ಷಗಳು ಜುಲೈ ೧೪ ರಂದು ವಿಶ್ವದಾದ್ಯಂತ ಪ್ರತಿಭಟನೆಗಳನ್ನು ನಡೆಸಿವೆ. ಪ್ಯಾಲೈಸ್ತೀನ್ ನಾಗರೀಕರ ಹತ್ಯೆಯನ್ನು ವಿಶ್ವದ ಪ್ರತಿಯೊಬ್ಬ ಪ್ರಜ್ಞಾವಂತ ನಾಗರೀಕರು ಖಂಡಿಸಿ, ಪಾಲಿಸ್ತೈನ್‌ರನ್ನು ಬೆಂಬಲಿಸಬೇಕೆಂದು ಸಿ.ಪಿ.ಐ.ಎಂ.ಎಲ್. ಪಕ್ಷದ ರಾಜ್ಯ ಕಾರ್ಯದರ್ಶಿ ಭಾರದ್ವಾಜ್ ಮನವಿ ಮಾಡಿದ್ದಾರೆ.
ಇಸ್ರಾಯೇಲ್ ಕ್ಷುಲಕ ಕಾರಣಗಳನ್ನು ತೋರಿಸಿ ನೂರಾರು ಜನ ಮುಗ್ದ ಪಾಲಿಸ್ತೈನ್‌ರನ್ನು ಕೊಲ್ಲುತ್ತಿರುವುದು ಮತ್ತು ಪಾಲಿಸ್ತೈನ್ ಮೇಲೆ ವೈಮಾನಿಕ ದಾಳಿ ಮಾಡುತ್ತಿರುವುದು ಇಸ್ರೇಲ್‌ನ ಫ್ಯಾಸಿಸ್ಟ್ ಧೋರಣೆಯಾಗಿದೆ. ಐಕ್ಯ ರಾಜ್ಯ ಸಮಿತಿ ಕೂಡಲೇ ಮಧ್ಯ ಪ್ರವೇಶಿಸಿ ಇಸ್ರೇಲ್ ದಾಳಿ ನಿಲ್ಲಿಸುವಂತೆ ತಾಕೀತು ಮಾಡಬೇಕು. ಕರ್ನಾಟಕದ ಪ್ರಜ್ಞಾವಂತ ನಾಗರೀಕರು, ಪ್ಯಾಲಿಸ್ತೈನ್ ಮುಗ್ದ ನಾಗರೀಕರ ಪರ ನಿಂತು ಇಸ್ರೇಲ್ ವಿರುದ್ಧ ಪ್ರತಿಭಟನೆಗಳನ್ನು ಮಾಡಬೇಕೆಂದು ಸಿ.ಪಿ.ಐ.ಎಂ.ಎಲ್. ಪಕ್ಷ ಮನವಿ ಮಾಡುತ್ತದೆ.
0 comments:
Post a Comment