PLEASE LOGIN TO KANNADANET.COM FOR REGULAR NEWS-UPDATES



ಕೊಪ್ಪಳ:-೧೬, ಮುಖ್ಯಮಂತ್ರಿ ಸಿದ್ದರಾಮಯ್ಯ  ನೇತೃತ್ವದ ಕಾಂಗ್ರೇಸ್ ಸರ್ಕಾರ ರಾಜ್ಯದಲ್ಲಿ ಅಹಿಂದ ಹೆಸರಿನಲ್ಲಿ ಅಧೀಕಾರಕ್ಕೆ ಬಂದು ಕೇವಲ ಒಂದು ಜಾತಿಗೆ ಸಿಮೀತವಾಗಿ ಹಿಂದುಳಿದ ವರ್ಗಗಳ ಜನರಿಗೆ ದ್ರೋಹ ಬಗೆಯುತ್ತಿದ್ದಾರೆ ಎಂದು ಹಿಂದುಳಿದ ವರ್ಗಗಳ ಮಾಜಿ ಅದ್ಯಕ್ಷ ಎನ್. ಶಂಕ್ರಪ್ಪ ಹೇಳಿದರು.
ಅವರು ಬುಧವಾರ ನಗರದ ಪ್ರಮೋದ ಮಂದಿರದಲ್ಲಿ ಏರ್ಪಡಿಸಿದ ಹಿಂದುಳಿದ ವರ್ಗ ಎಸ್ಸಿ , ಎಸ್ಟಿ  ಮತ್ತು ಸ್ಲಂ ಮೋರ್ಚಾಗಳ ವಿಧಾನಸೌದ ಮುತ್ತಿಗೆ ಕಾರ್ಯಕ್ರಮ   ಪೂರ್ವಭಾವಿ ಸಿದ್ದತಾ ಸಭೆಯನ್ನು ಉದ್ದೇಸಿಸಿ ಮಾತನಾಡಿದರು.
ರಾಜ್ಯದಲ್ಲಿ ಕಾಂಗ್ರೇಸ್ ಸರ್ಕಾರ ಹಿಂದುಳಿದ ಜನರಿಗೆ ಮಾಡಿರುವ ಅನ್ಯಾಯವನ್ನು ಪ್ರತಿಭಟಿಸಿ ಜುಲೈ ೨೨ರಂದು ಬೆಂಗಳೂರಿನಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಪಕ್ಷದ ವತಿಯಿಂದ ವಿರೋಧ ಪಕ್ಷದ ನಾಯಕ ಈಶ್ವರಪ್ಪರವರ  ನೇತೃತ್ವದಲ್ಲಿ ವಿಧಾನಸಭೆ ಮುತ್ತಿಗೆ ಕಾರ್ಯಕ್ರಮದಲ್ಲಿ ಜಿಲ್ಲೆಯಿಂದ ಸಾವಿರಾರು ಸಂಖ್ಯೆಯಲ್ಲಿ ಪದಾಧೀಕಾರಿಗಳು ಕಾರ್ಯಕರ್ತರು ಹೆಚ್ಚಿನಾ ಸಂಖ್ಯೆಯಲ್ಲಿ ಭಾಗದವಹಿಸಬೇಕೆಂದು ಕರೆ ನೀಡಿದ ಅವರು ಕಳೆದ ಬಿಜೆಪಿ ಸರ್ಕಾರದಲ್ಲಿ ಬಸವ ವಸತಿ ಯೋಜನೆಯಲ್ಲಿ ಬಡಜನರಿಗಾಗಿ ಸುಮಾರು ೩.೨೫.೦೦೦ ಮನೆಗಳನ್ನು ಹಂಚಲಾಗಿದ್ದು  ಈಗಿನ ಕಾಂಗ್ರೇಸ್ ಸರ್ಕಾರ  ದ್ವೇಷದ ರಾಜಕಾರಣದಿಂದ  ಈ ಮನೆಗಳ ನಿರ್ಮಾಣಕ್ಕೆ ಇದುವರಿಗೂ ನಿರ್ಮಾಣಕ್ಕೆ ಹಣ ಬಿಡುಗಡೆ ಮಾಡಿರುವದಿಲ್ಲ. ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ೬ ರಿಂದ ೮ ಸಾವಿರ ಮನೆಗಳನ್ನು ನೀಡಲಾಗಿತ್ತು, ಆದರೆ ಈಗಿನ ಸರ್ಕಾರ ಕೇವಲ ೫೦೦ ಮನೆಗಳನ್ನು ನೀಡುತ್ತಿದ್ದು ಸ್ಲಂ ನಿವಾಸಿಗಳಿಗೆ ಇದುವರಿಗೂ ಹಕ್ಕುಪತ್ರ ಸಹ ನಿಡುತ್ತಿಲ್ಲಾ ಇದರಿಂದ ಜನಸಾಮಾನ್ಯರು ತಿವೃತೊಂದರೆ ಒಳಗಾಗಿದ್ದಾರೆ ಈ ವಿಷಯದ ಕುರಿತು ಸರ್ಕಾರದ ಗಮನಕ್ಕು ತಂದರೂ ಯಾವುದೇ ಪ್ರಯೋಜನವಾಗಿಲ್ಲ ಹಿಂದುಳಿದ ಜನಾಂಗ ಸಮಾಜವನ್ನು ಮುಖ್ಯವಾಹಿನಿಗೆ ತರಲು ಬಿಜೆಪಿ ಪಕ್ಷ ಶ್ರಮಿಸುತ್ತಿದೆ ಎಂದರು.
ಎಸ್ಸಿ, ಎಸ್ಟಿ ಮೊರ್ಚಾ ರಾಜ್ಯಾದ್ಯಕ್ಷ ಮಾಜಿ ಶಾಸಕ ಸೊಮಲಿಂಗಪ್ಪ ಮಾತನಾಡಿ ಹಿಂದಿನ ಬಿಜೆಪಿ ಸರ್ಕಾರ ಹಿಂದುಳಿದ ಜನಾಂಗ ಪರ ಮಾಡಿರುವ ಸಾಧನೆ ಹಾಗೂ ರಾಜ್ಯ ಕಾಂಗ್ರೇಸ್ ಸರ್ಕಾರ ಅಹಿಂದ ಎಂದು ಹೇಳುತ್ತಾ ಮುಖ್ಯಮಂತ್ರಿಯಾದ ಸಿದ್ದರಾಮಯ್ಯನವರ ಸಾಧನೆ ಏನು ಎಂಬುದನ್ನು ಜನತೆ ತಿಳಿದುಕೊಳ್ಳಬೇಕು ಎಂದ ಅವರು ಬಿಜೆಪಿ ಪಕ್ಷವು ಕೇವಲ ಒಂದು ಜಾತಿಗೆ ಸಿಮೀತವಾಗದೆ ಎಲ್ಲಾ ೪೨ ಜಾತಿಗಳ ಪಕ್ಷವಾಗಿದೆ, ಅನ್ನಭಾಗ್ಯ, ಗಣಿ, ಆಶ್ರಯ, ಮರಳು, ದಂದೆಯಲ್ಲಿ ಬ್ರಷ್ಠಾಚಾರ ಎಸಗಿ ಕಾಂಗ್ರೇಸ್ ಸರ್ಕಾರ ರಾಜ್ಯದಲ್ಲಿ ಆಡಳಿತ ನಡೆಸಲು ವಿಫಲವಾಗಿದೆ ಆದರಿಂದ ಸರ್ಕಾರಕ್ಕೆ ಎಚ್ಚರಗೊಳಿಸಲು ವಿಧಾನಸಭೆ ಮುತ್ತಿಗೆ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಕಾರ್ಯಕರ್ತರಲ್ಲಿ ಮನವಿಮಾಡಿದರು.
ಇದೇ ಂದರ್ಭದಲ್ಲಿ ಮಾಜಿ ಶಾಸಕ ಪರಣ್ಣ ಮುನವಳ್ಳಿ, ಹಿಂದುಳುದ ವರ್ಗಗಳ ರಾಜ್ಯ ಪ್ರಧಾನ ಕಾರ್ಯದರ್ಶಿ, ಅಶೋಕ ಗಸ್ತಿ, ರಾಜ್ಯ ಉಪಾಧ್ಯಾಕ್ಷ ಬಿ. ನಾಗೇಂದ್ರ ಮಾತನಾಡಿದರು.
ವೇದಿಕೆಯ ಮೇಲೆ ಡಾ|| ಅರುಣಕುಮಾರ, ಬಂಡೇಶ್, ನಗರಾಧ್ಯಕ್ಷ ಚಂದ್ರಶೇಖರ ಕವಲೂರ, ಗ್ರಾಮೀಣಧ್ಯಕ್ಷ ಕೊಟ್ರೇಶ ಶೇಡ್ಮಿ, ರಾಘವೇಂದ್ರ ಪಾನಘಂಟಿ, ಮಹಿಳಾ ಅಧ್ಯಕ್ಷೆ ಹೇಮಲತಾ ನಾಯಕ್, ಮಾರೇಶ, ಉಮೇಶ ಸಜ್ಜನ, ಶಂಕರ ಕರಪಡಿ, ರಾಜು ಭಾಕಳೆ, ಅಪ್ಪಣ್ಣ ಪಧಕಿ, ಹಾಲೇಶ ಕಂದಾರಿ, ಪರಮಾನಂದ ಯಾಳಗಿ ಉಮೇಶ ಕುರಡಿಕರ್ ದೇವರಾಜ್ ಹಾಲಸಮುದ್ರ, ಮಲ್ಲಪ್ಪ ಬೇಲೇರಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು

Advertisement

0 comments:

Post a Comment

 
Top