ಇತ್ತೀಚಿಗೆ ನಿಧನರಾದ ಜಾನಪದ ವಿದ್ವಾಂಸ ಮತ್ತು ಬಯಲಾಟದ ದಿಗ್ಗಜರೆಂದು ಹೆಸರಾಗಿದ್ದ ಡಾ. ಬಸವರಾಜ ಮಲ್ಲಶೆಟ್ಟಿ ಇವರ ಇವರ ಗೌರವಾರ್ಥ ’ನುಡಿ-ನಮನ’ ಕಾರ್ಯಕ್ರಮವನ್ನು ದಿ. ೨೦-೦೭-೨೦೧೪, ರವಿವಾರ, ಬೆಳಿಗ್ಗೆ ೧೦ ರಿಂದ ಸಾಯಂಕಾಲ ೪ ಗಂಟೆಯವರೆಗೆ, ಹೊಸಪೇಟೆಯ ಪಟೇಲ್ ನಗರದಲ್ಲಿರುವ ಶ್ರೀ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿದೆ. ಡಾ. ಸಂಗನಬಸವ ಶ್ರೀಗಳು, ಹೊಸಪೇಟೆ ಮತ್ತು ಶ್ರೀ ಪ್ರಭುಮಹಾ ಸ್ವಾಮಿಗಳು ಸಂಡೂರು ಇವರು ಕಾರ್ಯಕ್ರಮದ ಸಾನಿಧ್ಯ ವಹಿಸಿಕೊಳ್ಳಲಿದ್ದಾರೆ.
ವೀರಶೈವ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಅಲ್ಲಂ ಗುರುಬಸವರಾಜ, ಕನ್ನಡ ವಿ.ವಿ. ಹಂಪಿ ಕುಲಪತಿಗಳಾದ ಡಾ. ಹಿ.ಚಿ. ಬೋರಲಿಂಗಯ್ಯ ಸೇರಿದಂತೆ ಡಾ. ಎಸ್. ಶಿವಾನಂದ, ಡಾ. ರಾಮಕೃಷ್ಣ ಮರಾಠೆ, ದತ್ತಾತ್ರೇಯ ಜೋಶಿ, ಡಾ. ಬಾಳಣ್ಣ ಶೀಗಿಹಳ್ಳಿ, ಮೇಟಿ ಕೊಟ್ರಪ್ಪ, ಹುರಕಡ್ಲಿ ಶಿವಕುಮಾರ, ಕೆ. ಉಮಾಪತಿಗೌಡ, ಶ್ರೀಮತಿ ರಜನಿ ಗರುಡ, ಬಸವರಾಜ ಬಳ್ಳೊಳ್ಳಿ, ಶ್ರೀಮತಿ ಶಾರದಾ ಮಲಶೆಟ್ಟಿ, ಶ್ರೀಮತಿ ಪಲ್ಲವಿ ಮಲಶೆಟ್ಟಿ ಇವರು ವೇದಿಕೆಯ ಮೇಲೆ ಉಪಸ್ಥಿತರಿರುತ್ತಾರೆ. ಶ್ರೀಮತಿ ಸವಿತಾ ನುಗಡೋಣಿ ಮತ್ತು ಶ್ರೀಮತಿ ಪುಷ್ಪ ವೀರೇಶ ಹಿಟ್ನಾಳ
ರಿಂದ ವಚನ ಸಂಗೀತ, ಶ್ರೀಮತಿ ಸುಭದ್ರಮ್ಮ ಮನ್ಸೂರರಿಂದ ರಂಗಗೀತೆಗಳು, ಸೂರೆಪ್ಪ ಶಿವಪ್ಪ ಇವರ ಚೌಡಿಕೆ ಮೇಳ, ಅಮರೇಶ್ವರ ಭಜನಾ ಮಂಡಳಿಯರಿಂದ ಭಜನಾ ಮೇಳದ ಕಾರ್ಯಕ್ರಮಗಳು ನಡೆಯುತ್ತವೆ.
ಈ ನುಡಿ ನಮನ ಕಾರ್ಯಕ್ರಮದಲ್ಲಿ ಡಾ. ಬಸವರಾಜ ಮಲಶೆಟ್ಟಿ ಇವರು ಅಭಿಮಾನಿಗಳು, ಹಿತೈಷಿಗಳು, ಶಿಷ್ಯವರ್ಗ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಅವರಿಗೆ ಗೌರವಾರ್ಪಿಸಬೇಕೆಂದು ಮಲಶೆಟ್ಟಿ ಕುಟುಂಬದವರ ಪರವಾಗಿ ಮತ್ತು ಅಭಿಮಾನಿಗಳ ಪರವಾಗಿ ಬಸವರಾಜ ಬಳ್ಳೊಳ್ಳಿ ಮತ್ತು ಮಹೇಶ ಬಳ್ಳಾರಿ ವಿನಂತಿಸಿದ್ದಾರೆ.
0 comments:
Post a Comment