PLEASE LOGIN TO KANNADANET.COM FOR REGULAR NEWS-UPDATES


ಕೊಪ್ಪಳ: ಇಂದಿನ ಹೆಣ್ಣುಮಕ್ಕಳಲ್ಲಿ ಆಧುನಿಕತೆಯ ಅತಿಯಾದ ವ್ಯಾಮೋಹ ಇರಬಾರದು. ಇದು ಜೀವನದ ಬರ್ಬರತೆಗೆ ದಾರಿ ಮಾಡಿಕೊಡುತ್ತದೆ. ವಿದ್ಯಾರ್ಥಿನಿಗಳಲ್ಲಿ ಸಾಧನೆಯ ಗುರಿ ಇರಲಿ. ಆ ಮಾರ್ಗದಲ್ಲಿ  ಸತತ ಪ್ರಯತ್ನವಿರಲಿ.  ಸಣ್ಣಪುಟ್ಟ ಎಡರುತೊಡರುಗಳಿದ್ದರೂ  ಅದಕ್ಕೆ ಎದೆಗುಂದದೇ  ಗುರಿ ಮುಟ್ಟವತ್ತಾ ಸಾಗಬೇಕು. ನಿಮಗೆ ಎಲ್ಲಾ ಸಮಯದಲ್ಲಿ ಕಾನೂನಿನ ನೆರವನ್ನು ನೀಡಲಾಗುವದೆಂದು  ನಗರದ ಠಾಣೆಯ ಪೋಲಿಸ್ ಇನಸ್ಪೆಕ್ಟರ್  ಮೋಹನ್ ಪ್ರಸಾದ  ನುಡಿದರು.
               ಅವರು ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ  ವಿದ್ಯಾರ್ಥಿನಿಯರಿಗಾಗಿ  ಕಾಲೇಜಿನ ನಿರ್ಭಯ ಸಮಿತಿ ಏರ್ಪಡಿಸಿದ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಮಾತನಾಡಿದರು. ಮುಂದುವರೆದು  ಇತ್ತೀಚಿನ ದಿನಗಳಲ್ಲಿ ಮಹಿಳೆ ಅನೇಕ ಆಪತ್ತಿಗೆ ಒಳಗಾಗುತ್ತಿರುವದನ್ನು ನಾವು ನೋಡುತ್ತಲಿದ್ದೇವೆ. ಅಂತಹ ದುಶ್ಟ ಶಕ್ತಿಗಳನ್ನು ಮಟ್ಟಹಾಕಲು  ನಿಮ್ಮೊಂದಿಗೆ ಪೋಲಿಸ್ ಇಲಾಖೆ  ಸದಾ ಸಿದ್ದವಿದೆ. ಇದಕ್ಕೆ ನಿಮ್ಮ ಸಹಕಾರ ಮತ್ತು ಸಾರ್ವಜನಿಕರ ಸಹಕಾರ ಅತ್ಯಗತ್ಯವಾಗಿದೆ ಎಂದರು.  ಅಧ್ಯಕ್ಷತೆಯನ್ನು ಪ್ರಾಚಾರ್ಯ ಶಿವಪ್ಪ ಶಾಂತಪ್ಪನವರು ವಹಿಸಿ  ಹೆಣ್ಣುಮಕ್ಕಳ  ಹಿತರಕ್ಷಣೆ ಮಾಡುವಲ್ಲಿ ಅನೇಕ ಕಾನೂನನುಗಳಿವೆ  ಅವುಗಳನ್ನು ಉಪಯೋಗಿಸಿಕೊಂಡು ಜಾಗೃತವಾಗುವ ಅಗತ್ಯವಿದೆ ಎಂದರು. ವೇದಿಕೆಯಲ್ಲಿ  ಸಾಂಸ್ಕೃತಿಕ ವಿಭಾಗದ ಕಾರ್ಯದರ್ಶಿ ಶೋಬಾ ಉಪಸ್ಥಿತರಿದ್ದರು. ಪ್ರಾಸ್ತಾವಿಕ ನುಡಿ ಉಪನ್ಯಾಸಕ ಸುರೇಶ ಸೊನ್ನದ,  ಸ್ವಾಗತ  ನಿರ್ಭಯ ಸಮಿತಿ ಸಂಚಾಲಕಿ ಹಾಗೂ ಉಪನ್ಯಾಸಕಿ ಶುಭಾ,  ವಂದನಾರ್ಪಣೆ  ಮಾಜಿ ಪ್ರಾಚಾರ್ಯ ತಿಮ್ಮಾರೆಡ್ಡಿ ಮೇಟಿ, ನಿರೂಪಣೆ ಉಪನ್ಯಾಸಕಿ ಗಾಯತ್ರಿ ಭಾವಿಕಟ್ಟಿ ನೆರವೇರಿಸಿದರು.  ಅಪಾರ ವಿದ್ಯಾರ್ಥಿನಿಗಳು ಭಾಗವಹಿಸಿ ನಗರದ ಠಾಣೆಯ ಪೋಲಿಸ್ ಇನಸ್ಪೆಕ್ಟರ್ ಆದ ಮೋಹನ್ ಪ್ರಸಾದ ಅವರೊಂದಿಗೆ ಆಪ್ತ ಸಮಾಲೋಚನೆ ನಡೆಸಿದರು.ಕಾರ್ಯಕ್ರಮದಲ್ಲಿ   ಉಪನ್ಯಾಸಕರಾz ಮಹೇಶ ಮಮದಾಪುರ, ಶ್ರೀಮತಿ ನಂದಾ, ರಾಘವೇಂದ್ರಾಚಾರ್, ದಾರುಕಾಸ್ವಾಮಿ, ನಟರಾಜ, ವೀರಣ್ಣ ಸಜ್ಜನರ, ರವಿಕುಮಾರ ಹಿರೇಮಠ, ಪ್ರಕಾಶಬಳ್ಳಾರಿ ಹಾಗೂ ಭೋದಕೇತರ ಸಿಬ್ಭಂಧಿ ಭಾಗವಹಿಸಿದ್ದರು. 

Advertisement

0 comments:

Post a Comment

 
Top