PLEASE LOGIN TO KANNADANET.COM FOR REGULAR NEWS-UPDATES








ಶಾಂತಿ ಮತ್ತು ನ್ಯಾಯಪ್ರಿಯ ಭಾರತೀಯರಾದ ನಾವು ತಮ್ಮ ಮುಂದೆ ಕಳಕಳಿಯ ವಿನಂತಿ ನೀಡುತ್ತಿದ್ದೇವೆ. ಗಾಜಾ ಮೇಲೆ ನಡೆಯುತ್ತಿರುವ ಇಸ್ರೇಲ್ ದಾಳಿಯಲ್ಲಿ ಅಮಾಯಕ ಮಕ್ಕಳು, ಮಹಿಳೆಯರು, ಜನಸಾಮಾನ್ಯರು ಸೇರಿದಂತೆ ಸುಮಾರು ೬೦೦ ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ. ಇದು ಅತಿ ದುಃಖದಾಯಕ ಸಂಗತಿಯಾಗಿದ್ದು ಮತ್ತು ಅತ್ಯಂತ ಖಂಡನೀಯ ದುಷ್ಕೃತ್ಯವಾಗಿದೆ. ವೈಮಾನಿಕ ದಾಳಿ, ಭಿಕರ ಶಸ್ತ್ರಾಸ್ತ್ರಗಳು ಮತ್ತು ಬಾಂಬುಗಳು ಜನವಸತಿ ಪ್ರದೇಶಗಳ ಮೇಲೆ, ಶಾಲೆಗಳ ಮೇಲೆ, ಮಸೀದಿಗಳ ಮೇಲೆ ನಿರಂತರವಾಗಿ ದಾಳಿ ನಡೆಸಲಾಗುತ್ತಿದೆ. ಇದು ಸಾಮೂಹಿಕ ಕೊಲೆ ಹೊರತು ಯಾವುದೇ ಯುದ್ಧವಲ್ಲ. ಇಸ್ರೇಲ್ ದೇಶವು ವಿಶ್ವಸಂಸ್ಥೆಯ ಅನೇಕ ನಿಯಮಗಳನ್ನು ಬದೆಗೊತ್ತಿ ತನ್ನ ಭಯೋತ್ಪಾದಕ ದುಷ್ಕೃತ್ಯವನ್ನು ಗಾಜಾದ ಮೇಲೆ ತೋರಿಸುತ್ತಿದೆ. ಇವೆಲ್ಲವನ್ನು ಕಂಡು ಅಮೇರಿಕ ಹಾಗೂ ವಿಶ್ವಸಂಸ್ಥೆಯ ಇತರ ದೇಶಗಳು ಮೌನವಹಿಸಿರುವುದು ಅತ್ಯಂತ ಬೇಸರದ ಸಂಗತಿ. ಈ ಹಿಂದೆ ಇರಾಕ್ ವಿಶ್ವಸಂಸ್ಥೆಯ (ಯು.ಎನ್) ನ ಕೇವಲ ಎರಡು ನಿಯಮಗಳನ್ನು ಉಲ್ಲಂಘಿಸಿದ್ದಕ್ಕೆ ಅಮೇರಿಕಾ ದಾಳಿ ನಡೆಸಿತ್ತು. ಇದರಿಂದ ಲಕ್ಷಾಂತರ ಇರಾಕ್ ನಾಗರಿಕರು ನಿರ್ಗತಿಕರಾದರು, ಮಕ್ಕಳು ಅನಾಥರಾದರು. ಇದರ ಪರಿಣಾಮವಾಗಿ ಇರಾಕ್‌ನ ಸ್ಥಿತಿ ದಯನೀಯವಾಗಿದೆ. ಆದರೆ ಇಂದು ಇಸ್ರೇಲ್ ವಿಶ್ವಸಂಸ್ಥೆಯ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿದ್ದು ಅದೇ ಅಮೇರಿಕಾ ಈಗ ಮೌನವಹಿಸಿರುವುದು ಖಂಡನೀಯವಾಗಿದೆ ಹಾಗೂ ಕೆಲವು ಅಂತರಾಷ್ಟ್ರೀಯ ಮಾಧ್ಯಮವು ಇಸ್ರೇಲ್ ಪರವಾಗಿ ಗಾಜಾದ ವಿರುದ್ಧ ಸುದ್ದಿಯನ್ನು ತಿರುಚಿ ಪ್ರಕಟಿಸುತ್ತಿರುವುದು ಗಾಜಾದಲ್ಲಿ ಸಾಯುತ್ತಿರುವ ಅಮಾಯಕ ಮಕ್ಕಳ ಧ್ವನಿಯನ್ನು ದಮನಿಸುತ್ತಿದೆ. ಆದ್ದರಿಂದ ಈಗಲಾದರೂ ವಿಶ್ವಸಂಸ್ಥೆ ಎಚ್ಚೆತ್ತುಕೊಂಡು ಗಾಜಾದ ಮೇಲೆ ನಡೆಯುತ್ತಿರುವ ದಾಳಿಯನ್ನು ನಿಲ್ಲಿಸಬೇಕು. ಭಯೋತ್ಪಾದಕ ರಾಷ್ಟ್ರವಾದ ಇಸ್ರೇಲನ್ನು ಬಹಿಷ್ಕರಿಸಬೇಕೆಂದು ಇಂದು ಕೊಪ್ಪಳ ನಗರದ ಅಶೋಕ ಸರ್ಕಲ್ ಹತ್ತಿರ ಜಮಾಅತೆ ಇಸ್ಲಾಮಿ ಹಿಂದ್, ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಝೇಷನ್ (S.I.ಔ.), ಗಲ್ಸ್ ಇಸ್ಲಾಮಿಕ್ ಆರ್ಗನೈಝೇಷನ್ (ಉ.I.ಔ.), ವೆಲ್‌ಫೇರ್ ಪಾರ್ಟಿ ಆಫ್ ಇಂಡಿಯಾ ಹಾಗೂ ಇತರ ಸಂಘಟನೆಗಳು ಪ್ರತಿಭಟನೆ ನಡೆಸಿ ನಂತರ ಜಿಲ್ಲಾಧಿಕಾರಿ ಖಛೇರಿಗೆ ತೆರಳಿ ಜಿಲ್ಲಾಧಿಕಾರಿಗಳ ಮೂಲಕ ಮನವಿಪತ್ರ ಸಲ್ಲಿಸಲಾಯಿತು. 
ಪ್ರತಿಭಟನೆಯಲ್ಲಿ ಜಮಾಅತೆ ಇಸ್ಲಾಮಿಯ ಯೂಸುಫ್ ಕುನ್ನಿ, ಮಹಿಳಾ ಘಟಕದ ಅಧ್ಯಕ್ಷೆಯಾದ ಸಬಿಹಾ ಸುಲ್ತಾನ ಪಟೇಲ್, ಜಿ.ಐ.ಓ. ನ ಸ್ಥಾನೀಯ ಅಧ್ಯಕ್ಷೆಯಾದ ಜಫರುನ್ನಿಸಾ ಉಪಸ್ಥಿತರಿದ್ದರು ಹಾಗೂ ಎಸ್.ಐ.ಓ. ನ ನಗರಘಟಕದ ಅಧ್ಯಕ್ಷರಾದ ಜಕರಿಯಾ ಖಾನ್, ಕಲೀಮುಲ್ಲಾ ಖಾನ್, ರಿಯಾಜ್ ಅಹ್ಮದ್ ಖಾನ್ ಪ್ರತಿಭಟನೆಯ ನೇತೃತ್ವವಹಿಸಿದ್ದರು.

Advertisement

0 comments:

Post a Comment

 
Top