PLEASE LOGIN TO KANNADANET.COM FOR REGULAR NEWS-UPDATES

ಕರ್ನಾಟಕದಲ್ಲಿ ಕಳೆದ ೧೦ ದಿನಗಳಲ್ಲಿ ೬೦ ಕ್ಕೂ ಹೆಚ್ಚು ಅತ್ಯಾಚಾರ ಪ್ರಕರಣಗಳು ವರದಿಯಾಗಿರುವುದು ಇಡೀ ನಾಗರೀಕ ಮಾಜವು ತಲೆತಗ್ಗಿಸುವ ವಿಚಾರವಾಗಿದೆ. ಮಹಿಳೆಯರು ಮತ್ತು ಪುಟ್ಟ ಕಂದಮ್ಮಗಳ ಮೇಲೆ ನಡೆಯುತ್ತಿರುವ ಈ ದುಷ್ಕರ್ಮಗಳನ್ನು ಪಿ ಯು ಸಿ ಎಲ್, ಸಮತಾ ವೇದಿಕೆ ಮತ್ತು ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ ಅತ್ಯುಗ್ರವಾಗಿ ಖಂಡಿಸುತ್ತೇವೆ. ಬೆಂಗಳೂರಿನ ಮಾರತ್ ಹಳ್ಳಿಯ ವಿಬ್ಗಯಾರ್ ಶಾಲೆಯಲ್ಲಿ ಆರು ವರ್ಷದ ಹೆಣ್ಣು ಮಗಳ ಮೇಲೆ ನಡೆದ ಲೈಂಗಿಕ ದೌರ್ಜನ್ಯದ ನೇರ ಜವಾಬ್ದಾರಿ ಆ ಶಾಲೆಯ ಆಡಳಿತ ಮಂಡಳಿಯದೇ ಆಗಿದೆ. ಘಟನೆ ನಡೆದು ೧೮ ದಿನಗಳು ಕಳೆದರೂ ಮತ್ತು ಪೋಲೀಸರು ದೂರು ದಾಖಲಿಸಿ ಆರು ದಿನಗಳು ಕಳೆದರೂ ಆರೋಪಿಯನ್ನು ಬಂಧಿಲಾಗದ ಪೋಲೀಸರು ಖಂಡನಾರ್ಹರು. ಈ ನಿಷ್ಕ್ರಿಯತೆ ಮತ್ತು ಉದಾಸೀನತೆಗೆ ಪೋಲೀಸರ ಅಸೂಕ್ಷ್ಮ ತೆಯೇ ಕಾರಣವೆಂದು ನಾವು ಅಭಿಪ್ರಾಯಪಡುತ್ತೇವೆ. ವಿಬ್ಗಯರ್ ಶಾಲೆಯಲ್ಲಿ ಮಗುವಿಗೆ ಶಿಕ್ಷೆ ಕೊಡಲು ಕತ್ತಲೆ ಕೋಣೆಗೆ ಕೂಡಿಟ್ಟ ಶಿಕ್ಷಕಿಯೂ ಇದಕ್ಕೆ ಹೊuಗಾರಳು. ವಿಶಾಲ ಜನತೆಯ ಆಕ್ರೋಶದ ನಂತರವೇ ಸರ್ಕಾರ ಮತ್ತು ಪೋಲೀಸರು ಕಾರ್ಯೋನ್ಮು ಖರಾದದ್ದು, ಇಂದಿನ ವ್ಯವಸ್ಥೆ ಕುಸಿದಿರುವುದಕ್ಕೆ ಹಿಡಿದ ಕೈಗನ್ನಡಿಯಾಗಿದೆ.
ದೆಹಲಿಯ ನಿರ್ಭಯಳ ಅತ್ಯಾಚಾರ ಮತ್ತು ಕೊಲೆಯ ನಂತರ ಬಂದ ವರ್ಮಾ ಆಯೋಗದ   ಆಧರಿತ ಕಠಿಣ ಕಾನೂನು ಜಾರಿಯಾದರೂ ಅತ್ಯಾ ಚಾರಿಗಳು ಕ್ಯಾರೇ ಎನ್ನುವ ಪರಿಸ್ಥಿತಿ ಮುಂದುವರೆದಿರುವುದು ಗಮನಾರ್ಹ. ಬದೌನಿ , ವಿಬ್ಗಯಾರ್ ಘಟನೆಗಳು ಇದಕ್ಕೆ ಸಾಕ್ಷಿ. ಅಸಹಾಯಕ ಹೆಣ್ಣು ಮಕ್ಕಳು ಮತ್ತು ಅಪ್ರಾಪ್ತರು ಇದಕ್ಕೆ ಬಲಿಯಗುತ್ತಿದ್ದಾರೆ. ಒಟ್ಟಾರೆ ಇಡೀ ಸಮಾಜ ತನ್ನ ಸೂಕ್ಷ್ಮತೆ ಕಳೆದುಕೊಂಡಿದೆ ಎಂದು ನಾವು ಅಭಿಪ್ರಾಯ ಪಡುತ್ತೇವೆ. ಜvಗೆ ಶಿಕ್ಷಣ ಸಂಸ್ಥೆಗಳ ಬೇಜವಾಬುದಾರಿತನ ಇದಕ್ಕೆ ಪೂರಕವಾಗುತ್ತಿದೆ. ಶಿಕ್ಷಣವನ್ನು ವ್ಯಾಪಾರ ಮಡಿಕೊಂಡ ಸಂಸ್ಥೆಗಳು ಮಕ್ಕಳಿಗೆ ರಕ್ಷಣೆ ನೀಡಲು ಮುಂದಾಗದಿರುವುದು ಗಮನಿಸಬೇಕಾದ ಅಂಶವಾಗಿದೆ. ಇಂತಹ ಘಟನೆಗಳೂ ಶಿಕ್ಷಣ ಸಂಸ್ಥೆಗಳಲ್ಲಿ ನಡೆದಾಗ ಆಡಳಿತ ವರ್ಗವನ್ನೂ ಆರೋಪಿಗಳೆಂದೇ ಪರಿಗಣಿಸಬೇಕು. ಸಿಬ್ಬಂದಿಗಳ ಸರಿಯಾದ ಪೂರ್ವಾಪರಗಳ ತನಿಖೆ ಮತ್ತು ಅವರ ಮೇಲೆ ನಿಗಾ ಅತ್ಯವಶ್ಯವಾಗಿದೆ, ಎಕೆಂದರೆ ಶಾಲೆಗಳಂತಹ ರಕ್ಷಿತ ವಲಯದಲ್ಲೇ ದುಷ್ಕರ್ಮಗಳು ನಡೆಯುತ್ತಲಿವೆ.
ಎಲ್ಲಿಯವರೆಗೂ ಈ ಮಾಜ ಹೆಣ್ಣುಗಳ ಮತ್ತು ಮಕ್ಕ ಳ ರಕ್ಷಣೆ ತಮ್ಮ ಪ್ರಥಮ ಕರ್ತವ್ಯವೆಂದು ಪರಿಗಣಿಸುವುದಿಲ್ಲವೋ ಅಲ್ಲಿಯವರೆಗೆ ಇಂತಹ ಘಟನೆಗಳು ಮರುಕಳಿಸುತ್ತವೆ ಎಂದು ನಾವು ಅಭಿಪ್ರಾಯ ಪಡುತ್ತೇವೆ. 

ಡಾ. ವಿ ಲಕ್ಷ್ಮೀನಾರಾಯಣ                            ಮೀರ ನಾಯಕ್.                        ಸುಮನ /  ಇ. ರತಿ ರಾವ್
ರಾಜ್ಯ ಕಾರ್ಯದರ್ಶಿ. ಪಿ ಯು ಸಿ ಎಲ್           ಸಮತಾ ವೇದಿಕೆ                ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ

Advertisement

0 comments:

Post a Comment

 
Top