PLEASE LOGIN TO KANNADANET.COM FOR REGULAR NEWS-UPDATES

ದಿನಾಂಕ: ೨೧ ರಂದು ಎ.ವಿ.ಕಣವಿ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ಕೊಪ್ಪಳ ಜಿಲ್ಲಾ ಕೊಪ್ಪಳ ಮತ್ತು ಬಳ್ಳಾರಿ ಜಿಲ್ಲೆಗಳು ಧಾರವಾಡ ಖಾಯಂ ಹೈಕೋರ್ಟ ಪೀಠದಲ್ಲಿ ಮುಂದುವರೆಯಬೇಕು ಯಥಾಸ್ಥಿತಿ ಅಧಿಕಾರ ವ್ಯಾಪ್ತಿ ಇರಬೇಕೆಂದು ಮಾನ್ಯ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಮನೆಬಾಗಿಲಿಗೆ ನ್ಯಾಯಾ ಎಂಬ ಪರಿಕಲ್ಪನೆಯಡಿಯಲ್ಲಿ ಸ್ಥಾಪಿತವಾದ ಧಾರವಾಡ ಹೈಕೋರ್ಟ್ ಪೀಠವು ಕೊಪ್ಪಳ ಹಾಗೂ ಬಳ್ಳಾರಿ ಜಿಲ್ಲೆಯ ಜನತೆಗೆ ಅತ್ಯಂತ ಅನುಕೂಲವಿದ್ದು, ಕಡಿಮೆ ಖರ್ಚು, ಸಮಯದ ಯಾವುದೇ ವಿಳಂಬವಿಲ್ಲದೇ ನ್ಯಾಯಾ ಸಿಗುತ್ತದೆ. ಆ ಹಿನ್ನಲೆಯಲ್ಲಿ ಯಥಾಸ್ಥಿತಿ ಇರಬೇಕೆಂದು ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ವಕೀಲರುಗಳಾದ ಪಿ.ಎಲ್,ಇನಾಮತಿ, ಎಂ.ಸಿ.ಸಜ್ಜನ್, ಬಿ.ಕೆ.ಹಿರೇಮಠ, ಪಿ.ಎಂ.ನಾಯಕ, ಎಸ್.ಎಂ.ಪಾಟೀಲ್, ಡಿ.ರಾಜಣ್ಣ, ಜಿ.ಎಸ್.ಚಕ್ರಸಾಲಿ, ಸತ್ಯನಾರಾಯಣರಾವ್, ವಿ.ಜಿ.ಕಟ್ಟಿಮನಿ, ವಿ.ಲೆ.ಮಾಲಗಿತ್ತಿ, ಸಿ.ಎಂ. ಪೋಲಿಸ್ ಪಾಟೀಲ್, ವಿಶ್ವನಾಥ ಎಲಿಗಾರ,ಪ್ರಕಾಶ ಹಾದಿಮನಿ  ಮೊದಲಾದವರು ಹಾಜರಿದ್ದರು .

Advertisement

0 comments:

Post a Comment

 
Top