ನಗರದ ಮಹಿಳಾ ಪದವಿ ಕಾಲೇಜಿನಲ್ಲಿ ಬೆಳಗ್ಗೆ ೧೦.೦೦ ಗಂಟೆಗೆ ಸರಸ್ವತಿ ಪೂ
ಜಾ ಸಮಾರಂಭದ ಉದ್ಘಾಟಕರಾಗಿ ಮಾತನಾಡಿದ ಅವರು ಹೆಣ್ಣು ಮಕ್ಕಳು ಉನ್ನತ್ತ ಶಿಕ್ಷಣ ಪಡೆಯುವುದರಿಂದ ಸ್ವಾವಲಂಬನ ಜೀವನ ಮಾಡಲು ಶಿಕ್ಷಣ ಸಹಾಯಕವಾಗುತ್ತದೆ. ಪ್ರತಿಯೊಬ್ಬ ಮಹಿಳೆಯು ಕೂಡಾ ಆಧುನಿಕ ಶಿಕ್ಷಣವನ್ನು ಕಡ್ಡಾಯವಾಗಿ ಪಡೆಯಬೇಕು ಒಬ್ಬ ಶಿಕ್ಷಣವಂತ ಸ್ತ್ರೀ ನೂರು ಶಿಕ್ಷಕರಿಗೆ ಸಮಾನ. ಸಾಧನೆಗೆ ಗುರಿ ಮುಖ್ಯ ಸಮಸ್ಯಗಳಲ್ಲ ದೇಶದ ಜನಪ್ರಿಯ ಪ್ರಧಾನ ಮಂತ್ರಿಗಳಾದ ಲಾಲಬಹದ್ದೂರು ಶಾಸ್ತ್ರಿಯವರು ಶಿಕ್ಷಣ ಪಡೆಯುವುದಕ್ಕಾಗಿ ನದಿಯಲ್ಲಿ ಈಜಿ ಶಾಲೆಗೆ ಹೊಗುತ್ತಿದ್ದರು. ಅವರು ಶಿಕ್ಷಣ ಪಡೆಯುವುದಕ್ಕೆ ತಮ್ಮ ಬಡತನವನ್ನು ಸಮಸ್ಯ ಮಾಡಿಕೊಳ್ಳದೇ ಶಿಕ್ಷಣ ಪಡೆಯುವುದೇ ತಮ್ಮ ಗುರಿ ಎಂದು ಭಾವಿಸಿ ಸಾಧನೆ ಮಾಡಿದ ಮಹಾಪುರುಷರು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ತಮ್ಮ ಅನುದಾನದ ನಿಧಿಯಿಂದ ರೂ. ೪.೦೦ ಲಕ್ಷಗಳನ್ನು ನೀಡುವುದರ ಮೂಲಕ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಮುತುವರ್ಜಿವಹಿಸುತ್ತೇನೆಂದು ಹೇಳಿದರು.
ಈ ಸಂದರ್ಭದಲ್ಲಿ ಗುರುರಾಜ ಹಲಗೇರಿ, ಶಿವಮೂರ್ತಿ ಗುತ್ತೂರು, ಶಿವಾನಂದ ಹೊದ್ಲೂರು, ಯಮನೂರಪ್ಪ ನಾಯಕ, ರವೀಚಿದ್ರಗೌಡ್ರ ವಕೀಲರು, ಶಿಕ್ಷಕರಾದ ಶಂಭುಲಿಂಗನಗೌಡ, ಶಿವಪ್ಪ ಶಾಂತಪ್ಪನ್ನವರ, ಎಂ.ಎಂ. ಕಂಭಾಳಿಮಠ, ರಮೇಶ ಆರ್. ಮೆಣಸಗೇರಿ, ಪ್ರಾಚಾರ್ಯರಾದ ಪ್ರಬುರಾಜ ನಾಯಕ ಉಪಸ್ಥಿತರಿದ್ದರು. ಕಾರ್ಯಕ್ರಮ ನಿರೂಪಣೆಯನ್ನು ಕು. ಲಕ್ಷ್ಮೀ ಬೆಟ್ಟದೂರು ನಿರ್ವಹಿಸಿದರು. ಕು. ಜ್ಯೋತಿಕಾ ವಂದಿಸಿದರು
0 comments:
Post a Comment