ಕೊಪ್ಪಳ ಜಿಲ್ಲಾ ಯುವ ಒಕ್ಕೂಟ ರಚನೆಯ ಪೂರ್ವಭಾವಿ ಸಭೆಯನ್ನು ನಗರದ ಡಾ|| ಕೆ. ಜಿ. ಕುಲಕರ್ಣಿ ಆಸ್ಪತ್ರೆಯ ಆವರಣದಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ರಾಜ್ಯ ಯುವ ಪ್ರಶಸ್ತಿ ಪುರಸ್ಕೃತರು, ನೆಹರು ಯುವ ಕೇಂದ್ರದ ಸಲಹಾ ಸಮಿತಿಯ ಸದಸ್ಯರಾದ ಅಕ್ಬರ್ ಸಿ. ಕಾಲಿಮಿರ್ಚಿಯವರು ವಹಿಸಿ, ಜಿಲ್ಲೆಯಲ್ಲಿಯ ಯುವ ಸಂಘ ಸಂಸ್ಥೆಗಳನ್ನು ಒಗ್ಗೂಡಿಸಿ, ಅವುಗಳಲ್ಲಿ ಚೈತನ್ಯಶಕ್ತಿ ತುಂಬುವ ಕಾರ್ಯವು ಆಗಬೇಕು. ಯುವ ಸಂಘಗಳು ನಾಡಿನ ಕಲೆ, ಸಾಹಿತ್ಯ, ಸಂಗೀತ, ಸಾಂಸ್ಕೃತಿಕ ಕಲೆಗಳನ್ನು ಸರ್ವತೋಮುಖವಾಗಿ ಬೆಳೆಸಲು ಪ್ರಮುಖ ಪಾತ್ರ ವಹಿಸುತ್ತದೆ. ಸಂಘದ ಪ್ರತಿ ಯುವಕರಲ್ಲಿ ತ್ಯಾಗ, ಪ್ರೀತಿ, ಪ್ರೇಮ, ಸ್ನೇಹ, ಇತರೆ ಗುಣಗಳು ಇದ್ದಾಗ ಮಾತ್ರ ರಾಷ್ಟ್ರದ ಐಕ್ಯತೆ, ಸಮಗ್ರತೆ, ಏಕತೆ ಸಾಧ್ಯವಾಗುತ್ತದೆ. ಆದ್ದರಿಂದ ಯುವ ಸಂಘಗಳಲ್ಲಿ ಚೈತನ್ಯ ಶಕ್ತಿ ತುಂಬಬೇಕಾದರೆ, ಕೊಪ್ಪಳ ಜಿಲ್ಲಾ ಯುವ ಒಕ್ಕೂಟ ರಚನೆಯು ಆಗಲೇ ಆಗಬೇಕು ಎಂಬ ಸಲಹೆಯನ್ನು ನೀಡಿದರು. ಅಲ್ಲದೇ ಜಿಲ್ಲೆಯ ಯುವಕ/ಯುವತಿ ಸಂಘದವರು ಕೊಪ್ಪಳ ಜಿಲ್ಲಾ ಒಕ್ಕೂಟ ರಚನೆಗೆ ಸರ್ವಾನುಮತದಿಂದ ಒಪ್ಪಿಗೆ ಸೂಚಿಸಿದರು.
ಸಭೆಯಲ್ಲಿ ಪ್ರಾಸ್ತಾವಿಕವಾಗಿ ಜಿಲ್ಲಾಯುವ ಪ್ರಶಸ್ತಿ ಪುರಸ್ಕೃತ ರಾಕೇಶ ಕಾಂಬ್ಳೇಕರ್, ವಂದನಾರ್ಪಣೆಯನ್ನು ರಾಜ್ಯ ಯುವ ಪ್ರಶಸ್ತಿ ಪುರಸ್ಕೃತ ಜಗದಯ್ಯ ಸಾಲಿಮಠ, ಸ್ವಾಗತವನ್ನು ಜಿಲ್ಲಾ ಯುವ ಪ್ರಶಸ್ತಿ ಪುರಸ್ಕೃತ ಅಂದಪ್ಪ ಮಾರನಾಳ ನೇರವೇರಿಸಿದರು.
ಸಭೆಯಲ್ಲಿ ರಾಜ್ಯ ಯುವ ಪುರಸ್ಕೃತರಾದ ಶ್ರೀನಿವಾಸ ಕಂಟ್ಲೆ, ಮಂಜುನಾಥ ಗೊಂಡಬಾಳ ಮತ್ತು ಯುವಕ ಸಂಘಗಳ ಪದಾಧಿಕಾರಿಗಳಾದ ಸುಭಾಷ ಕಲಾಲ, ವಿಜಯ ರಜಪೂತ, ಸುರೇಶ ಕುಂಬಾರ, ಗಣೇಶ ಯತ್ನಟ್ಟಿ ಹಾಗೂ ಜಿಲ್ಲೆಯ ವಿವಿಧ ಯುವ ಸಂಘಗಳ ಅಧ್ಯಕ್ಷರು & ಕಾರ್ಯದರ್ಶಿಗಳು ಭಾಗವಹಿಸಿ ಸಲಹೆ ಸೂಚನೆ ನೀಡಿ ಸಭೆಯನ್ನು ಯಸ್ವಿಗೊಳಿಸಿದರು.
0 comments:
Post a Comment