ಕೊಪ್ಪಳ:- ೨೧ ಗೃಹಖಾತೆಯನ್ನು ಸಮರ್ಪಕವಾಗಿ ನಿರ್ವಹಿಸದೆ, ರಾಜ್ಯದಲ್ಲಿ ಕಾನೂನು sಸುವ್ಯಸಸ್ಥೆ ಹದಗೆಟ್ಟು ಅರಾಜಕತೆ ನಿರ್ಮಾಣಕ್ಕೆ ಕಾರಣವಾಗಿರುವ ಗೃಹ ಸಚಿವ ಕೆ.ಜೆ.ಜಾರ್ಜ ಕೂಡಲೇ ರಾಜೀನಾಮೆ ನೀಡಬೇಕೆಂದು ಬಿಜೆಪಿ ಜಿಲ್ಲಾ ಘಟಕ ಒತ್ತಾಯಿಸಿದೆ.
ನಗರದ sಸೋಮುವಾರದಂದು ಬಿಜೆಪಿ ಕಾರ್ಯಲಯದಿಂದ ಮೆರವಣಿಗೆ ಹೊರಟು ಅಶೋಕ ವೃತ್ತದಲ್ಲಿ ತಹಸಿಲ್ದಾರ ಮುಖಾಂತರ ರಾಜ್ಯ ಪಾಲರಿಗೆ ಮನವಿ ಪತ್ರ ಅರ್ಪಿಸಿ.ರಾಜ್ಯದಲ್ಲಿ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೇಸ್ ಸರಕಾರ ಅಧಿಕಾರ ಮಹಿಸಿಕೊಂಡಾಗಿನಿಂದ ಅತ್ಯಾಚಾರದಂತಹ ಪ್ರಕರಣಗಳು ಹೆಚ್ಚಾಗಿವೆ. ಅದರಲ್ಲೂ ಮಹಿಳೆಯರ ಮತ್ತು ಮಕ್ಕಳ ಮೇಲಿನ ಅತ್ಯಚಾರ, ದೌರ್ಜನ್ಯಗಳು ಗಣನೀಯವಾಗಿ ಹೆಚ್ಚಾಗಿವೆ. ೨೦೧೩ನೇ ಇಸವಿಯಲ್ಲಿ ೧೦೩೦ ಅತ್ಯಚಾರ ಪ್ರಕರಣಗಳು, ೧೮೩೬ ಅಪಹರಣ ಪ್ರಕರಣಗಳು ದಾಖಲಾಗಿವೆ. ಪ್ರಸಕ್ತ ವರ್ಷ೨೦೧೪ರಲ್ಲಿ ಜನವರಿಯಿಂದ ಜೂನ್ ಅಂತ್ಯದವರಗೆ ೫೨೫ ಅತ್ಯಾಚಾರ ಪ್ರಕರಣಗಳು, ೨೩೫೭ ಲೈಂಗಿಕ ದೌರ್ಜನ್ಯ ಪ್ರಕರಣಗಳು ೧೫೨೨ ವರದಕ್ಷಣೆ ಪ್ರಕರಣಗಳೂ ದಾಖಲಾಗಿ ರಾಜ್ಯವನ್ನು ತಲ್ಲಣಗೊಳಿಸಿದೆ. ಇಡೀ ರಾಜ್ಯದಲ್ಲಿ ಮಹಿಳೆಯರು ಸುರಕ್ಷಿತವಾಗಿ ಓಡಾಡುವ ಪರಸ್ಥಿತಿ ಇಲ್ಲವಾಗಿದೆ ಹಾಡುಹಗಲೇ ಕೊಲೆ ಪ್ರಕರಣಗಳು ನಡೆಯುತ್ತಿವೆ.
ರಾಜ್ಯದಲ್ಲಿ ಗೃಹಖಾತೆಯ ಹೊಣೆ ಹೊತ್ತಿರುವ ಕೆ.ಜೆ.ಜಾರ್ಜರವರ ಅಸಮರ್ಥ ಕಾರ್ಯವೈಖರಿಯೇ ಕಾರಣ ಎಂಬುದು ಸ್ಪಷ್ಟವಾಗಿದೆ, ರಾಜ್ಯದಲ್ಲಿ ಕಾಂಗ್ರೇಸ್ ಪಕ್ಷ ಅಧಿಕಾರ ವಹಿಸಿಕೊಂಡು ಪಕ್ಷಪಾತ ಧೊರಣೆಯನ್ನು ತನ್ನ ಆಡಳಿತದಲ್ಲಿ ಅಳವಡಿಸಿಕೊಂಡು ಸಚಿವರು ಪೋಲೀಸ್ ಅಧಿಕಾರಿಗಳನ್ನು ವಿಶ್ವಾಸಕ್ಕೆ ತೆಗೆದಿಕೊಂಡು ರಾಜ್ಯದಲ್ಲಿ ಸುರಕ್ಷಿತ ಆಡಳಿತ ನೀಡುವಲ್ಲಿ ಸಂಪೂರ್ಣ ವಿಫಲವಾಗಿದೆ.
ಸ್ವಯಂ ಕಾಂಗ್ರೇಸ್ ಶಾಸಕರು, ಮುಖಂಡರುಗಳ ಪುತ್ರರು, ಸಂಬಂಧಿಕರು ಅಪರಾಧ ಪ್ರಕರಣಗಳಲ್ಲಿ ಸಿಲಿಕಿದ್ದರೂ ನಿಷ್ಪಕ್ಷಪಾತ ತನಿಖೆ ನಡೆಸಿ, ಶಿಕ್ಷಿಸುವುದಕ್ಕೆ ಅಗತ್ಯವಾದ ಸೆರ್ಯವನ್ನು ಪೋಲೀಸರಿಗೆ ತುಂಬುವಲ್ಲಿ ಗೃಹ ಸಚಿವರು ಸಂಪೂರ್ಣವಾಗಿ ವಿಫಲವಾಗಿದ್ದಾರೆ.
ಗೃಹ ಸಚಿವರ ಕಾರ್ಯವೈಖರಿಯಿಂದಾಗಿ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಮಹಿಳೆಯರ ಮೇಲಿನ ದೌರ್ಜನ್ಯ ಅತ್ಯಾಚಾರ ಪ್ರಕರಣಗಳು ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಹಾಡು ಹಗಲೇ ಕೊಲೆ ಮಾಡಿ ಕಾನೂನು ಕೈಯಿಂದ ತಪ್ಪಿಸಿಕೊಂಡು ಅಪರಾಧಿಗಳು ನಿರ್ಭಯವಾಗಿ ಓಡಾಡುತ್ತಿದ್ದಾರೆ. ಇವರ ಅಸಹಾಯಕತೆಯನ್ನು ದುರುಪಯೋಗಪಡಿಸಿಕೊಳ್ಳುತ್ತಿರುವ ಕಾಂಗ್ರೇಸ್ ಮುಖಂಡರು ಪೋಲೀಸ್ ಅಧಿಕಾರಿಗಳನ್ನೇ ನಿಯಂತ್ರದಲ್ಲಿಟ್ಟುಕೊಂಡು ಅಪರಾಧಿ ಕೃತ್ಯಗಳಲ್ಲಿ ತೊಡಗಿದ್ದಾರೆ. ಇಲಾಖೇಯಲ್ಲಿ ಸಮರ್ಪಕವಾಗಿ ನಿರ್ವಹಿಸದ ಗೃಹ ಸಚಿವರು ಕೂಡಲೇ ರಾಜೀನಾಮೆ ನೀಡಬೇಕೆಂಬ ಆಗ್ರಹವನ್ನು ಬಿಜೆಪಿ ಒತ್ತಾಯಿಸಿ ಇವರು ರಾಜೀನಾಮೆ ನೀಡದಿದ್ದಲ್ಲಿ ರಾಜ್ಯದ ಹಿತದೃಷ್ಠಿಯಿಂದ ಮುಖ್ಯಂತ್ರಿಗಳೇ ಗೃಹಸಚಿವರನ್ನು ಸಂಪುಟದಿಂದ ಕೈಬಿಡಬೇಕೆಂದು ಬಿಜಿಪಿ ಪಕ್ಷ ಒತ್ತಾಯಿಸಿದೆ.
ಪ್ರತಿಭಟನೆಯಲ್ಲಿ ಪಕ್ಷದ ಮುಖಂಡರಾದ ಸಿದ್ದಲಿಂಗಯ್ಯಸ್ವಾಮಿ ಹಿರೇಮಠ, ಗವಿಸಿದ್ದಪ್ಪ ಕಂದಾರಿ, ಪೀರಾಹುಸೇನ್ ಹೊಸಳ್ಳಿ, ಡಾ|| ಕೊಟ್ರೇಶ್ ಶೆಮ್ಡಿ ನರಸಿಂಗರಾವ್ ಕುಲಕರ್ಣಿ, ರಾಜು ಬಾಕಳೆ, ಪ್ರಾಣೇಶ ಮಾದನೂರ, ಬಸವರಾಜ ನೀರಲಗಿ, ಉಮೇಶ ಕುರಡಿಕರ, ಸದಾಶಿವಯ್ಯ ಹಿರೇಮಠ, ದೇವರಾಜ ಹಾಲಸಮುದ್ರ, ಚಂದ್ರಶೇಖರಗೌಡ ಹಲಗೇರಿ, ಡಿ.ಮಲ್ಲಣ್ಣ ಮಹಾಂತೇಶ ಮೈನಳ್ಳಿ ಮಧ್ಯಾಮ ಪ್ರತಿನಿಧಿ ಪರಮಾನಂದ ಯಾಳಗಿ ಮುದಿಯಪ್ಪ ತಿಗರಿ, ಬಸವರಾಜ ಮಿಠಾಯಿ, ಹೇಮಲತಾ ನಾಯಕ್, ಶ್ಯಾಮಲಾ ಕೊನಾಪುರ, ವಾಣಿಶ್ರೀ ಹಿರೇಮಠ, ಶೋಭಾ ನಗರಿ. ಹೇಮಕ್ಕ ಮಂಗಳೂರು ಸಿದ್ದರಡ್ಡಿ ಡಂಬ್ರಳ್ಳಿ ಮರಿಶಾಂತವೀರಸ್ವಾಮಿ ನಾಮದೇವ ಜಕ್ಕಲಿ, ನಾಗರಾಜ ಚಿತ್ರಗಾರ, ಗವಿಸಿದ್ದಪ್ಪ ಚಿನ್ನೂರ, ಡಾ| ಜ್ಞಾನಸುಂದರ, ಸುರೇಶ ಮುದೊಳ, ಚಂದ್ರಕಾಂತ ಮಹಾಂತಯ್ಯನಮಠ, ಗವಿಸಿದ್ದಪ್ಪ ಮೆತಗಲ್, ದತ್ತು ವೈದ್ಯ ಮುಂತಾದವರು ಪಾಲೊಂಡಿದ್ದರು.
0 comments:
Post a Comment