ಕೊಪ್ಪಳ .- ಪರಿಸರ ಸಂರಕ್ಷಣೆ ನಮ್ಮೆಲ್ಲರ ಕರ್ತವ್ಯ ಮತ್ತು ಹಾಗೆಯೇ ಕೇವಲ ಕಾರ್ಯಕ್ರಮಮಾಡಿ ಮಾತಾಡಿದರೆ ಸಾಲದು ಗಿಡವನ್ನು ಪೋಷಿಸಿ ಬೆಳೆಸುವದು ಪ್ರತಿಯೋಬ್ಬ ವಿಧ್ಯಾರ್ಥಿಯ ಕರ್ತವ್ಯ ಎಂದು ಶ್ರೀನಿವಾಸ ಗುಪ್ತ ಹೇಳಿದರು.
ಅವರು ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ದ
೭ ರಂದು ಕೊಪ್ಪಳ ತಾಲೂಕಿನ ಭಾಗ್ಯನಗರದ ಜ್ಞಾನ ಬಂಧು ವಸತಿ ಶಾಲೆಯಲ್ಲಿ ವನಮಹೋತ್ಸವ ಕಾರ್ಯಕ್ರಮ ದಲ್ಲಿ ಬಾಗವಹಿಸಿ ಮಾತನಾಡುತ್ತಿದ್ದರು
ಈ ಸಂದರ್ಬದಲ್ಲಿ ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಕೃಷ್ಣ ಮೂರ್ತಿ ಮಾತನಾಡಿ ಹಸಿರೇ ಉಸಿರು, ಉಸಿರಿಗಾಗಿ ಸುತ್ತಲಿನ ಪರಿಸರವನ್ನು ಸಂರಕ್ಷಿಸಿಸೋಣ ಪರಿಸರ ಸಂರಕ್ಷಣೆಗೆ ಮಕ್ಕಳೇ ಮುಖ್ಯವಾಹಿನಿಗಳು ಎಂದು ವರ್ಣಿಸಿದರು
ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ತಾಲೂಕ ಪಂಚಾಯತ ಸದಸ್ಯಶ್ರೀನಿವಾಸ ಹ್ಯಾಟಿ, ಗ್ರಾಮಪಂಚಾಯಿತಿ ಅಧ್ಯಕ್ಷ ಹೊನ್ನೂರಸಾಬ ಭೈರಾಪೂರ, ಮತ್ತು ಉಪನ್ಯಾಸಕ ಡಿ, ಎಂ ಬಡಿಗೇರ ಮತ್ತು ಅಧ್ಯಕ್ಷರಾದ ದಾನಪ್ಪ .ಜಿ. ಕವಲೂರ ಮತ್ತು ಮುಖ್ಯೋಪಧ್ಯಾಯ ಶಶಾಂಕ ಹೆಗಡೆ ರವರು ಸಸಿಗಳನ್ನು ನೆಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಕಾರ್ಯಕ್ರಮವನ್ನು ಮಂಗಳಾ ನಿರೂಪಿಸಿದರು. ಶಿವರಾಜ ಸ್ವಾಗತಿಸಿದರು. ರೇಖಾ ಬೆದವಟ್ಟಿ ವಂದಿಸಿದರು.
0 comments:
Post a Comment