PLEASE LOGIN TO KANNADANET.COM FOR REGULAR NEWS-UPDATES


ಕೊಪ್ಪಳ,ಜು,೦೭: ಮಕ್ಕಳು ಸಮಾಜದ, ದೇಶದ ಭವಿಷ್ಯವಾಗಿರುವಾಗ ಮಕ್ಕಳಿಗೆ ಗುಣಮಟ್ಟದ ಹಾಗೂ ಮೌಲ್ಯಯುತ ಶಿಕ್ಷಣ ಕೊಡುವುದು ಬಹಳ ಅವಶ್ಯಕವಾಗಿದೆ ಎಂದು ೧೨ನೇ ವಾರ್ಡಿನ ನಗರಸಭೆ ಸದಸ್ಯೆ ಶ್ರೀಮತಿ ಸರಿತಾ ಸುಧಾಕರ ಹೊಸಮನಿ ಯವರು ಅಭಿಪ್ರಾಯಪಟ್ಟರು.
ಇಂದು ದಲಿತ ಜ್ಯೋತಿ ಡಾ ಬಿ.ಆರ್.ಅಂಬೇಡ್ಕರ ಗ್ರಾಮೀಣಾಭಿವೃದ್ಧಿ ಮತ್ತು ಶಿಕ್ಷಣ ಸಂಸ್ಥೆ (ರಿ) ವತಿಯಿಂದ ನೂತನ ವಾಗಿ ಆರಂಭವಾಗ ರಮಾಬಾಯಿ ಬೇಬಿ ಸಿಟ್ಟಿಂಗ್ ಶಾಲೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಶೈಕ್ಷಣಿಕ ಪ್ರಗತಿಗೆ ಮತ್ತು ಗುಣಮಟ್ಟದ ಶಿಕ್ಷಣ ಶಿಕ್ಷಕರನ್ನು ಅವಲಂಬಿಸಿದ್ದು, ಶಿಕ್ಷಕರು ಒಂದು ಹೊಸ ಪೀಳಿಗೆಯನ್ನು ನಿರ್ಮಾಣ ಮಾಡುವ ಶಕ್ತಿಯನ್ನು ಹೊಂದಿರುತ್ತಾರೆ. ಇದರೊಂದಿಗೆ ಸಮುದಾಯಿಕ ಸಹಕಾರವು ಶಿಕ್ಷಣ ಕ್ಷೇತ್ರ ತೀರಾ ಅನಿವಾರ್ಯವಾಗಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಡಾ.ಬಾಬು ಜಗಜೀವನ್ ರಾಂ ಯುವಕ ಮಂಡಳಿ ಅಧ್ಯಕ್ಷ ಗವಿಸಿದ್ದಪ್ಪ ಗಿಣಿಗೇರಿ, ನೂತನ ಶಾಲೆಗಳಲ್ಲಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡುವುದರ ಜೊತೆಗೆ ಪಠ್ಯೇತರ ಚಟುವಟಿಕೆಗಳ ಬಗ್ಗೆಯು ಶಾಲೆಯ ಆಡಳಿತ ಮಂಡಳಿ ಮತ್ತು ಶಿಕ್ಷಕರು ಕಾಳಜಿ ವಹಿಸಬೇಕು ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ದಲಿತ ಜ್ಯೋತಿ ಡಾ.ಬಿ.ಆರ್. ಅಂಬೇಡ್ಕರ ಸಂಸ್ಥೆಯ ಅಧ್ಯಕ್ಷ ನಿಂಗಪ್ಪ ದೊಡ್ಡಮನಿ, ಪತ್ರಕರ್ತರಾದ ಎಂ. ಸಾದಿಕ್ ಅಲಿ, ವೈ.ಬಿ.ಜೂಡಿ, ಹರೀಶ್ ಹೆಚ್.ಎಸ್. ಎಂ.ಎಸ್.ಡಬ್ಲೂ ಕಾಲೇಜಿನ ಪ್ರಾಂಶುಪಾಲ ಕೆ. ರಾಮು, ಮುಖಂಡರಾದ ಸುಧಾಕರ ಹೊಸಮನಿ, ರಮೇಶ ಗಿಣಿಗೇರಿ, ಮಂಜುನಾಥ ಹಳ್ಳಿಕೇರಿ, ಹುಲಗಪ್ಪ, ಎಂ. ನಾಗರಾಜ್, ಶೇಖರಪ್ಪ ಚಾಕ್ರಿ ಸೇರಿದಂತೆ ವಿದ್ಯಾರ್ಥಿಗಳು, ಪಾಲಕರು ಪಾಲ್ಗೊಂಡಿದ್ದರು. 

Advertisement

0 comments:

Post a Comment

 
Top