PLEASE LOGIN TO KANNADANET.COM FOR REGULAR NEWS-UPDATES

  ಕೊಪ್ಪಳ, ಜು.೧೦:  ವಾರದಿಂದ ವಾರಕ್ಕೆ ಪ್ರಸಿದ್ಧ ಕೂಕನಪಳ್ಳಿ ಸಂತೆ ಹೆಚ್ಚು ಆಕರ್ಷಿಸುತ್ತಿದ್ದು  ನಿರೀಕ್ಷೆಗೂ ಮೀರಿದ ವ್ಯಾಪಾರಸ್ಥರು ಹಾಗೂ ಜನತೆ ಹೆಚ್ಚಳವಾಗುತ್ತಿರುವುದು ಸಾರ್ವಜನಿಕರಲ್ಲಿ ಆಶ್ಚರ್ಯ ಮೂಡಿಸಿದೆ ಎಂದು  ಕೂಕನಪಳ್ಳಿಯ ಶ್ರೀ ಬೆಟ್ಟದಲಿಂಗೇಶ್ವರ ಸೇವಾ ಸಮಿತಿ ಹಾಗೂ ದಲಿತ ಸಂಘರ್ಷ ಸಮಿತಿ ಇರಕಲ್‌ಗಡಾ ಹೋಬಳಿ ಘಟಕ   ತಿಳಿಸಿವೆ.
  ಜಾತ್ರೆಯನ್ನೇ ಮೀರಿಸುವ ರೀತಿಯಲ್ಲಿ ಸಂತೆ ನಡೆಯುತ್ತಿದೆ. ಕುರಿಗಾಹಿಗಳು, ವ್ಯಾಪಾರಸ್ಥರು, ಕುರಿ ಹಾಗೂ ಜಾನುವಾರಗಳ ಸಂತೆ ಸೇರಿದಂತೆ ಜನತೆಯ ತರಕಾರಿ ಸಂತೆಯು ಕೂಡ ಬಾರಿ ಹೆಚ್ಚಳಗೊಂಡಿರುವುದು ಜನತೆಯಲ್ಲಿ ದಿನೇ ದಿನೇ ಕೂತುಹಲ ಹೆಚ್ಚಿಸಿದೆ. ಗ್ರಾಮದ ಹಿರಿಯರು ಹಾಗೂ ಸುತ್ತಲಿನ ಗ್ರಾಮಗಳ ಸಹಕಾರ ಸಹಯೋಗದಿಂದ ಸಂತೆ ಯಶಸ್ಸಿಗೆ ಕಾರಣವಾಗಿರುವುದಲ್ಲದೇ ಸಂತೆಯಲ್ಲಿ ಈ ಹಿಂದಿನಂತೆ ಅಂತರಾಜ್ಯ ವ್ಯಾಪಾರಸ್ಥರು ಹೆಚ್ಚು ಹೆಚ್ಚಾಗಿ ಸಂತೆಯಲ್ಲಿ ಪಾಲ್ಗೊಳ್ಳುತ್ತಿರುವುದು ವಿಶೇಷ. ಅದರಲ್ಲೂ ವ್ಯಾಪಾರವು ಕೂಡ ಹಿಂದೆದಿಂಗಿಂತಲೂ ದ್ವೀಗಣಗೊಂಡಿರುವುದೇ ಈ ಎಲ್ಲಾ ವಿಶೇಷಕ್ಕೆ ಕಾರಣವೆಂಬುದು ಚಿಂತಕರ ಅಭಿಪ್ರಾಯವಾಗಿದೆ. ಈ ಎಲ್ಲಾ ಯಶಸ್ಸಿಗೆ ಜನಪ್ರತಿನಿಧಿಗಳು ಸಹಕಾರ  ಜಿಲ್ಲಾಧಿಕಾರಿಗಳ ಆದೇಶ ಕೃಷಿ ಉತ್ಪನ್ನ ಮಾರುಕಟ್ಟೆ ಮಾರ್ಗದರ್ಶನವೇ ಕಾರಣವೆಂಬುದನ್ನು ಅಲ್ಲಗಳೆಯುವಂತಿಲ್ಲವೆಂದು ದಲಿತ ಸಂಘರ್ಷ ಸಮಿತಿ ಇರಕಲ್‌ಗಡಾ ಹೋಬಳಿ ಘಟಕದ ಅಧ್ಯಕ್ಷ ಚಂದ್ರಪ್ಪ ಹೆಚ್. ಹಿಟ್ನಾಳ, ನಾಗರಾಜ ಹೊಸಮನಿ

 ತಿಳಿಸಿದ್ದಾರೆ.

Advertisement

0 comments:

Post a Comment

 
Top