ಜಿಲ್ಲಾ ಕೇಂದ್ರವಾದ ಕೊಪ್ಪಳ ರೈಲ್ವೆ ನಿಲ್ದಾಣದಲ್ಲಿ ವೇಗದ ರೈಲುಗಳಾದ ಯಶವಂತಪುರ ಅಜ್ಮೀರ ಸಂಖ್ಯೆ ೧೬೫೩೨, ಅಜ್ಮೀರ ಯಶವಂತಪುರ ಸಂಖ್ಯೆ ೧೬೫೩೧. ಯಶವಂತಪುರ ಜೋಧಪುರ ಸಂಖ್ಯೆ ೧೬೫೩೪, ಜೋಧಪುರ ಯಶವಂತಪುರ ಸಂಖ್ಯೆ ೧೬೫೩೩, ಹೌರಾ ವಾಸ್ಕೋಡಗಾಮಾ ಸಂಖ್ಯೆ ೧೮೦೪೭, ವಾಸ್ಕೋಡಗಾಮಾ ಹೌರಾ ೧೮೦೪೮ ಸದರಿ ರೈಲುಗಳು ಇತ್ತೀಚಿನ ಮೂರು ವರ್ಷಗಳಿಂದ ತಾತ್ಕಾಲಿಕ ನಿಲುಗಡೆಯಾಗುತ್ತಿದ್ದರಿಂದ ಕೊಪ್ಪಳ ಸುತ್ತಲಿನ ತಾಲೂಕಗಳ ಜನರಿಗೆ ತುಂಬ ಅನುಕುಲವಾಗಿವೆ. ಇನ್ನೂವರೆಗೆ ೩ ತಿಂಗಳಂತೆ ಸಂಸದರ ಕೋರಿಕೆ ಮೇರೆಗೆ ನಿಲುಗಡೆ ಮಾಡುತ್ತಾ ಬಂದಿದೆ. ಆದರೆ ಈಗ ಕೇಂದ್ರ ರೈಲ್ವೆ ಇಲಾಖೆಯಲ್ಲಿ ದೂರದ ಪ್ರಯಾಣಿಕರಿಗೆ ತೊಂದರೆಯಾಗುತ್ತದೆ, ತಾತ್ಕಾಲಿಕ ನಿಲುಗಡೆಯಿಂದ ನಷ್ಟು ಹೆಚ್ಚು, ಲಾಭ ಕಡಿಮೆ ಎಂದು ದೇಶದಲ್ಲಿಯ ಎಲ್ಲ ತಾತ್ಕಾಲಿಕ ನಿಲುಗಡೆ ರದ್ದು ಮಾಡಲು ಹೋರಟಿರುವ ರೈಲ್ವೆ ಇಲಾಖೆಯ ಕ್ರಮ ಕಾರ್ಪೋರೇಟ್ ಕಂಪನಿಗಳ ಮತ್ತು ಶ್ರೀಮಂತರ ಪರವಾದ ನಿಲುವು ತಾಳುತ್ತಿದೆ. ಮೊನ್ನೆಯ ರೈಲ್ವೆ ಬಜೆಟ್‌ನಲ್ಲಿ ಕೊಪ್ಪಳ ಭಾಗಕ್ಕೆ ಸಂಪೂರ್ಣ ನಿರ್ಲಕ್ಷ್ಯಿಸಲಾಗಿದೆ. ಅದರಂತೆ ವೇಗದ ರೈಲುಗಳ ತಾತ್ಕಾಲಿಕ ನಿಲುಗಡೆ ರದ್ದು ಮಾಡಲು ಹೊರಟಿದೆ. ತಾವು ತಕ್ಷಣ ಪರಿಶೀಲಿಸಿ ನಮ್ಮ ಕೊಪ್ಪಳ ರೈಲ್ವೆ ನಿಲ್ದಾಣದಲ್ಲಿ ವೇಗದ ರೈಲುಗಳನ್ನು ಖಾಯಂ ೨ ನಿಮೀಷ ನಿಲುಗಡೆ ಮಾಡುವಂತೆ ಆದೇಶ ನೀಡಬೇಕು.
ಕೊಪ್ಪಳ ಜಿಲ್ಲೆಯ ರೈಲ್ವೆ ಗೇಟ್‌ಗಳಿಗೆ ಸೇತುವೆಗಳು ನಿರ್ಮಿಸಿ : ಭಾನಾಪೂರ ರೈಲ್ವೆ ಗೇಟ್-೫೬, ಭಾಗ್ಯನಗರ ರೈಲ್ವೆ ಗೇಟ್-೬೨, ಕಿನ್ನಾಳ ರೈಲ್ವೆ ಗೇಟ್-೬೪ ಕುಷ್ಟಗಿ ರೈಲ್ವೆ ಗೇಟ್-೬೬, ಕಿಡದಾಳ ರೈಲ್ವೆ ಗೇಟ್-೬೮, ಗಿಣಿಗೇರಾ ರೈಲ್ವೆ ಗೇಟ್-೭೫ ಹಿಟ್ನಾಳ ರೈಲ್ವೆ ಗೇಟ್-೭೭ ಮುನಿರಾಬಾದ್ (ಹುಲಿಗಿ) ರೈಲ್ವೆ ಗೇಟ್- ೭೯ ಇವುಗಳ ಮೇಲು/ಕೆಳ ಸೇತುವೆಗಳನ್ನು ತಕ್ಷಣ ನಿರ್ಮಿಸಬೇಕು.
ಇಚ್ಚಾಶಕ್ತಿಗೆ ಸಣ್ಣ ಸವಾಲ : ಪಂಡರಾಪುರ, ಗದಗ ರೈಲನ್ನು ಬಳ್ಳಾರಿವರೆಗೆ, ಬೆಂಗಳೂರ ಹೊಸಪೇಟೆ ರೈಲನ್ನು ಗದಗವರೆಗೆ ವಿಸ್ತಾರಿಸಿ, ಹುಬ್ಬಳ್ಳಿ ವಿಜಯವಾಡ ರೈಲು ಯುಪಿಎ ಸರ್ಕಾರದ ಕೊನೆಯ ರೈಲ್ವೆ ಬಜೆಟ್‌ನಲ್ಲಿ ಡೈಲಿ ರೈಲನ್ನಾಗಿ ಸಂಚಾರಿಸುತ್ತದೆ ಎಂದು ಘೋಷಿಸಲಾಗಿತ್ತು. ತಾವು ಸಹ ಯುಪಿಎ ಸರ್ಕಾರದ ಘೋಷಣೆಗಳು ಮುಂದುವರೆಸಲಾಗುತ್ತದೆಂದು ಹೇಳಿದ್ದು, ಹುಬ್ಬಳ್ಳಿ ವಿಜಯವಾಡ ರೈಲನ್ನು ದಿನ ಸಂಚರಿಸಲು ಕ್ರಮಕೈಗೊಳ್ಳಬೇಕು.
ಹುಬ್ಬಳ್ಳಿ ಹತ್ತಿರದ ಹೆಬಸುರದಿಂದ ಹೊಸಪೇಟೆವರೆಗೆ ರೈಲು ಜೋಡಿ ಮಾರ್ಗ ಆಮೆಗತಿಯಲ್ಲಿ ನಡೆಯುತ್ತಿದೆ, ಅಗತ್ಯ ಅನುದಾನ ಬಿಡುಗಡೆ ಮಾಡುವ ಮೂಲಕ ಕಾಮಗಾರಿ ತೀವ್ರಗೊಳಿಸಬೇಕು, ಕೊಪ್ಪಳ ರೈಲ್ವೆ ನಿಲ್ದಾಣದಲ್ಲಿಯ ಪ್ಲಾಟ್ ಫಾರ್ಮ್ ೨ ಮತ್ತು ೩ರ ಕಾಮಗಾರಿ ತಕ್ಷಣ ಪ್ರಾರಂಭಿಸಲು ಕ್ರಮಕೈಗೊಳ್ಳಬೇಕು, ಕೊಪ್ಪಳ ರೈಲ್ವೆ ನಿಲ್ದಾಣ ’ಸಿ’ ದರ್ಜೆಯಿಂದ ’ಬಿ’ ಮೇಲ್ದರ್ಜೆಗೆರಿಸಿದ್ದು, ತಕ್ಷಣ ತಕ್ಕ ಸಿಬ್ಬಂದಿ ಒದಗಿಸಬೇಕು.
ದಿ. ೨೩ ರಂದು ನಗರದ ರೈಲ್ವೆ ನಿಲ್ದಾಣ ಎದುರಿಗೆ ರೈಲ್ವೆ ನಿಲ್ದಾಣದ ಉಪ ಪ್ರಬಂಧಕರು ಆರ್. ಗುರುಮೂರ್ತಿ ಅವರಿಗೆ ರೈಲ್ವೆ ಜನಪರ ಹೋರಾಟ ಸಮಿತಿಯ ಅಧ್ಯಕ್ಷ ಎಸ್.ಎ. ಗಫಾರ್ ಮನವಿ ಪತ್ರ ಅರ್ಪಿಸಿದರು. ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘದ ಜಿಲ್ಲಾಧ್ಯಕ್ಷ ರಮೇಶ ಪಿ. ಚಿಕೇನಕೊಪ್ಪ, ಶಿವಮ್ಮ ಕಾಮನೂರು, ಬಸವರಾಜ ಹೊಸಮನಿ, ದಲಿತ ವಿಮೋಚನೆಯ ಮಾನವ ಹಕ್ಕುಗಳ ವೇದಿಕೆಯ ಜಿಲ್ಲಾ ಸಂಘಟನಾ ಸಂಚಾಲಕ ಮೈಲಪ್ಪ ಬಿಸರಳ್ಳಿ, ವೀರಕನ್ನಡಿಗ ಯುವಕ ಸಂಘದ ಅಧ್ಯಕ್ಷ ಶಿವಾನಂದ ಹೊದ್ಲೂರ, ಆಟೋ ಸಂಘಟನೆಯ ಮುಖಂಡ ಮಖಬೂಲ ರಾಯಚೂರ, ಅಖಿಲ ಭಾರತ ಯುವಜನ ಒಕ್ಕೂಟದ ಜಿಲ್ಲಾ ಸಂಚಾಲಕ ಗಾಳೇಪ್ಪ ಮುಂಗೋಲಿ, ಶಿವಪ್ಪ ಹಡಪದ, ಸಲೀಂ ಭಾನಾಪೂರ ಮತ್ತೀತರರು ಭಾಗವಹಿಸಿದ್ದರು.
0 comments:
Post a Comment