PLEASE LOGIN TO KANNADANET.COM FOR REGULAR NEWS-UPDATES

 ಕೊಪ್ಪಳ ಜಿಲ್ಲೆಯಾಗಿ ಹಲವಾರು ವರ್ಷಗಳು ಕಳೆದರೂ ಇನ್ನೂ ಮೂಲಭೂತ ಸೌಲಭ್ಯಗಳನ್ನು ಪಡೆಯುವಲ್ಲಿ ವಿಫಲವಾಗಿದೆ. ಬಡವರ ಮೇಲಿನ ಶೋಷಣೆ ನಿರಂತರವಾಗಿ ನಡೆದಿದೆ. ಮಾನವ ಹಕ್ಕುಗಳ ಉಲ್ಲಂಘನೆಯಂತೂ ಕಣ್ಣೆದುರಿಗೆ ನಡೆಯುತ್ತಿದೆ.
    ಕೊಪ್ಪಳ ಜಿಲ್ಲೆಯಲ್ಲಿ ಜೀತ ಪದ್ದತಿ ಇನ್ನೂ ಜೀವಂತವಾಗಿದೆ ಎಂದು ಯುನಿಸೆಫ್ ಸಮೀಕ್ಷೆಯಿಂದ ಬಹಿರಂಗವಾಗಿದೆ. ಜಿಲ್ಲಾಡಳಿತಕ್ಕೆ ಯುನಿಸೆಪ್ ಸಲ್ಲಿಸಿದ ವರದಿಯ ಪ್ರಕಾರ ಜಿಲ್ಲೆಯಲ್ಲಿ ೧೪೦ ಜೀತದಾಳುಗಳಿದ್ದಾರೆ.  ವರದಿ ಸಲ್ಲಿಸಿ ಒಂದು ವರ್ಷ ಕಳೆದರೂ ಸಹ ಜಿಲ್ಲಾಡಳಿತ ಯಾವುದೇ ಕ್ರಮ ಕೈಗೊಂಡಿಲ್ಲ.
    ೨೦೧೩ರಲ್ಲಿ ಜಿಲ್ಲಾಧಿಕಾರಿಗಳ ಆದೇಶದಂತೆ ಯುನಿಸೆಫ್ ನಡೆಸಿದ ಮೂರು ತಿಂಗಳ ಸಮೀಕ್ಷೆಯಿಂದ ಜಿಲ್ಲೆಯಲ್ಲಿ ೧೪೦ ಜೀತದಾಳುಗಳು ಪತ್ತೆಯಾಗಿದ್ದಾರೆ. ಕೊಪ್ಪಳದಲ್ಲಿ ೮ , ಯಲಬುರ್ಗಾ ತಾಲೂಕಿನಲ್ಲಿ ೭ ಜೀತದಾಳು,ಕುಷ್ಟಗಿಯಲ್ಲಿ ೨೬ ಮತ್ತು ಅತೀ ಹೆಚ್ಚು ಗಂಗಾವತಿಯಲ್ಲಿ ೯೯ ಜೀತದಾಳುಗಳು ಪತ್ತೆಯಾಗಿದ್ದಾರೆ. ಈ ಪೈಕಿ ೨೬ ಮಹಿಳೆಯರು ಮತ್ತುಉ ೧೨ ಮಕ್ಕಳೂ ಸೇರಿದ್ದಾರೆ. ೭ ವರ್ಷದ ಮಕ್ಕಳಿಂದ ಹಿಡಿದ ೭೦ ವರ್ಷದ ವೃದ್ದರೂ ಸಹ ಜೀತದಾಳುಗಾಳಿದ್ದಾರೆ.
    ಮಾಲೀಕರಿಂದ ಕೇವಲ ೨ ಸಾವಿರ ರೂಪಾಯಿಗಳಿಂದ ೬೦ ಸಾವಿರದವರೆಗೆ ಸಾಲ ಪಡೆದಿರುವ ಇವರು ದಿನದ ೧೨ಗಂಟೆಗೂ ಹೆಚ್ಚಿನ ಕಾಲ ದುಡಿಯುತ್ತಿದ್ದಾರೆ. ಮಾಲೀಕರ ದೈಹಿಕ ಹಾಗೂ ಮಾನಸಿಕ ಹಿಂಸೆಯನ್ನು ಅನುಭವಿಸುತ್ತಿದ್ದಾರೆ. ನಿರಂತವಾಗಿ ಮಾನವ ಹಕ್ಕುಗಳ ಉಲ್ಲಂಘನೆ ನಡೆಯುತ್ತಿದೆ. ಜೀತ ಪದ್ದತಿಯ ಬಗ್ಗೆ ಹಲವಾರು ಪತ್ರಿಕೆಗಳಲ್ಲೂ ಸಹ ವರದಿ ಪ್ರಕಟವಾಗಿದೆ.
    ಇದರ ವಿರುದ್ದ ಸೂಕ್ತ ಮತ್ತು ಕಠಿಣ ಕ್ರಮ ಕೈಗೊಳ್ಳಬೇಕು ಮತ್ತು ಈ ಅನಿಷ್ಟ ಪದ್ದತಿಯನ್ನು ನಿರ್ಮೂಲನೆ ಮಾಡುವುದಕ್ಕೆ ಜಿಲ್ಲಾಡಳಿತ ಮುಂದಾಗಬೇಕೆಂದು ಆಗ್ರಹಿಸುತ್ತೆವೆ. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ನಮ್ಮ ಸಂಘಟನೆಯ ವತಿಯಿಂದ ಮಾನವ ಹಕ್ಕುಗಳ ಉಲ್ಲಂಘನೆಯ ವಿರುದ್ದ ತೀವ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಪಿಯುಸಿಎಲ್ ಸಂಘಟನೆಯ ಎಚ್ಚರಿಕೆ ನೀಡಿದೆ. ಪ್ರಭಾರಿ ಜಿಲ್ಲಾಧಿಕಾರಿ ಸುರೇಶ ಹಿಟ್ನಾಳರಿಗೆ ಈ ಬಗ್ಗೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಅಧ್ಯಕ್ಷರಾದ ವಿಠ್ಠಪಪ ಗೋರಂಟ್ಲಿ, ಕಾರ್ಯದರ್ಶಿ ಸಿರಾಜ್ ಬಿಸರಳ್ಳಿ ಸದಸ್ಯರಾದ ರಾಜಾಬಕ್ಷಿ ಎಚ್.ವಿ.  ಹಾಗೂ ರಾಜಶೇಖರ ಮುಳುಗುಂದ ಉಪಸ್ಥಿತರಿದ್ದರು.

Advertisement

0 comments:

Post a Comment

 
Top