PLEASE LOGIN TO KANNADANET.COM FOR REGULAR NEWS-UPDATES

 ೦೨-೦೭-೨೦೧೪ ರ ಬುಧವಾರದಂದು ಯಲಬುರ್ಗಾ ತಾಲೂಕಿನ ರೇವಣಕಿ ಗ್ರಾಮದಲ್ಲಿ ತಾಲೂಕಾ ಜಲಾನಯನ ಅಭಿವೃದ್ಧಿ ಇಲಾಖೆ, ಯಲಬುರ್ಗಾ ಮತು ಪಶು ಸಂಗೋಪನೆ ಇಲಾಖೆ ಯಲಬುರ್ಗಾ  ಇವರ ಸಹಭಾಗಿತ್ವದಲ್ಲಿ ಸಮಗ್ರ ಜಲಾನಯನ ನಿರ್ವಹಣೆ ಕಾರ್ಯಕ್ರಮ ೫ನೇ ಹಂತದ ಪ್ರಾರಂಭಿಕ ಚಟುವಟಿಕೆಯಾದ ಗ್ರಾಮದ ಜಾನುವಾರುಗಳಿಗೆ ಉಚಿತ ಆರೋಗ್ಯ ತಪಾಸಣಾ  ಶಿಬಿರವನ್ನು ಏರ್ಪಡಿಸಲಾಗಿತ್ತು. ಶಿಬಿರದಲ್ಲಿ ಜಾನುವಾರುಗಳಿಗೆ ಬರುವ ಖಾಯಿಲೆಗಳ ಬಗ್ಗೆ ಮುಂಜಾಗ್ರತಾ ಕ್ರಮವಾಗಿ ಲಸಿಕೆ, ಸಾಮಾನ್ಯ ಖಾಯಿಲೆಗಳಿಗೆ ಚಿಕಿತ್ಸೆ ಹಾಗೂ ಔಷಧಿಗಳನ್ನು ವಿತರಿಸಲಾಯಿತು. ಅಲ್ಲದೆ ದನ-ಕರುಗಳಿಗೆ ಕಾಲು ಬೇನೆ ಬಾಯಿಬೇನೆ ರೋಗದ ಚಿಕಿತ್ಸೆ, ಬರಡು ದನಗಳಿಗೆ ಕೃತಕ ಗರ್ಭಧಾರಣೆ ಮತು ಕುರಿ-ಮೇಕೆಗಳಿಗೆ  ಜಂತುನಾಶಕ ಔಷಧಿಗಳನ್ನು ಉಚಿತವಾಗಿ ವಿತರಿಸಲಾಯಿತು.
      ಈ ಉಚಿತ ಆರೋಗ್ಯ ಶಿಬಿರದಲ್ಲಿ ತಾಲೂಕಾ ಜಲಾನಯನ ಅಭಿವೃದ್ಧಿ ಅಧಿಕಾರಿಗಳಾದ   ಯಂಕಪ್ಪ ಮತ್ತು ಸಹಾಯಕ ನಿರ್ದೇಶಕರಾದ ಡಾ|| ತಿಪ್ಪಣ್ಣ ತಳಕಲ್ ಹಾಗೂ ಪಶು ಇಲಾಖೆಯ ಸಿಬ್ಬಂಧಿಯಾದ              ಬಾಬುಲಾಲ ಚವ್ವಾಳಿ ಗ್ರಾಮ ಪಂಚಾಯತಿ ಸದಸ್ಯರು,  ಗ್ರಾಮದ ರೈತ ಬಾಂದವರು ಭಾಗವಹಿಸಿ ಶಿಬಿರವನ್ನು ಯಶಸ್ವಿಗೊಳಿಸಿದರು.

Advertisement

0 comments:

Post a Comment

 
Top