PLEASE LOGIN TO KANNADANET.COM FOR REGULAR NEWS-UPDATES

 ಶಿಕ್ಷಣ ಕ್ಷೇತ್ರದಲ್ಲಿನ ಸೇವೆ ಅದರಲ್ಲೂ ಪ್ರಾಥಮಿಕ ಶಿಕ್ಷಣ ಸೇವೆ ಅತ್ಯಂತ ಮಹತ್ವದಾಗಿದೆ. ಇದೊಂದು ಪವಿತ್ರವಾದ ವೃತ್ತಿ ಇಲ್ಲಿ ಸೇವೆಸಲ್ಲಿಸುವ ಪ್ರತಿಯೊಬ್ಬರು ಪ್ರತಿ ವಿದ್ಯಾರ್ಥಿಗಳ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿಯುತ್ತಾರೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಉಮೇಶ ಪೂಜಾರ ತಿಳಿಸಿದರು.
ಅವರು ಸೋಮವಾರ ಇಲ್ಲಿನ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕಛೇರಿ ವ್ಯವಸ್ಥಾಪಕ ಡಿ.ಎಂ. ದೊಡ್ಡಮನಿಯವರ ವಯೋನಿವೃತ್ತಿಯ ಬಿಳ್ಕೋಡುಗೆ ಸಮಾರಂಭದ ಅಧ್ಯಕ್ಷತೆವಹಿಸಿ ಮಾತನಾಡಿದರು. ಡಿ.ಎಂ. ದೊಡ್ಡಮನಿ ಅತ್ಯಂತ ಸರಳ ಸಜ್ಜನಿಕೆಯ ಸೌಮ್ಯ ವ್ಯಕ್ತಿ. ಅಷ್ಟೇ ಕೋಪಿಷ್ಟರಾದರೂ ಕ್ಷಣಾರ್ಧದಲ್ಲಿ ಅವರ ಕೋಪ ತಣ್ಣಗಾಗುತ್ತಿತ್ತು. ಅವರ ಸಮರಸ ಆರೋಗ್ಯಕರವಾಗಿದ್ದುದ್ದಲ್ಲದೇ ಇತರರಿಗೆ ಮಾದರಿ ಅವರು ಎಂತಃ ಕ್ಲೀಷ್ಟಕರ ಸಮಸ್ಯೆಗಳನ್ನು ಅಷ್ಟೇ ಸರಳವಾಗಿ ಪರಿಹರಿಸುತ್ತಿದ್ದರು. ಅಷ್ಟೇ ಪ್ರಾಮಾಣಿಕರು ಎಂದು ಗುಣಗಾನ ಮಡಿದ ಅವರು,  ನಿವೃತ್ತರ ಸೇವೆಯ ಜವಬ್ದಾರಿಗಳು ಎಲ್ಲರಿಗೂ ಮಾರ್ಗದರ್ಶನವಾಗಬೇಕಿದೆ ಅವರ ಕೊರತೆ ನನಗೆ ತುಂಬಲಾರದ ನಷ್ಟವೆಂಬಂತಾಗಿದೆ ಎಂದು ಭಾವುಕರಾಗಿ ಮಾತನಾಡಿದರು.
ಈ ಸಂದರ್ಭದಲ್ಲಿ ಕೊಪ್ಪಳ ತಾಲೂಕ ಶಾಲಾ ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷ ಮಂಜುನಾಥ, ಜಿಲ್ಲಾ ಸರಕಾರಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಶಿವಪ್ಪ ಜೋಗಿ, ತಾಲೂಕ ಪ್ರೌಢ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಸ್.ಬಿ. ಕುರಿ ಮತ್ತು ಕಾರ್ಯದರ್ಶಿ ಮಾರ್ತಂಡರಾವ್, ತಾಲೂಕ ಲಿಪಿಕ ನೌಕರರ ಸಂಘದ ಕಾರ್ಯದರ್ಶಿ ಮಂಜುನಾಥ ಅಬ್ಬಿಗೇರಿ, ಯಲಬುರ್ಗಾ ಕ್ಷೇತ್ರ ಶಿಕ್ಷಣಾಧಿಕಾರಿ ಕಛೇರಿಯ ವ್ಯವಸ್ಥಾಪಕ ವಿರುಪಾಕ್ಷಯ್ಯ ಹಿರೇಮಠ, ಹೊಸಪೇಟೆ ಕ್ಷೇತ್ರ ಶಿಕ್ಷಣಾಧಿಕಾರಿ ಸಿಬ್ಬಂದಿ ಸೂರ್ಯನಾರಾಯಣ, ಎಚ್ಚೇರಪ್ಪ, ಭರಮಣ್ಣ ಶಿಕ್ಷಕರು,  ಕೊಪ್ಪಳ ಉಪನಿರ್ದೇಶಕರ ಕಛೇರಿಯ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಸಿಬ್ಬಂದಿ ಹಾಗೂ ಬಿಆರ್‌ಸಿ ಕಛೇರಿ ಸಿಬ್ಬಂದಿ ಮತ್ತು ವಿವಿಧ ಶಿಕ್ಷಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
॒॒॒॒॒॒॒॒॒॒॒॒॒॒॒॒॒॒॒॒॒॒॒॒॒॒॒॒॒॒॒॒॒

Advertisement

0 comments:

Post a Comment

 
Top