ಕಳೆದ 2012-13 ಹಾಗೂ 2013-14 ನೇ ಸಾಲಿನ ಎಸ್‍ಎಸ್‍ಎಲ್‍ಸಿ ವಾರ್ಷಿಕ ಪರೀಕ್ಷೆಯಲ್ಲಿ ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಅತಿ ಹೆಚ್ಚು ಅಂಕಗಳಿಸಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಜು. 31 ರಂದು ಬೆಳಿಗ್ಗೆ 9 ಗಂಟೆಗೆ ಕೊಪ್ಪಳ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ತಲಾ ಒಂದು ಕಂಪ್ಯೂಟರ್ ಹಾಗೂ ಪ್ರಮಾಣಪತ್ರ ವಿತರಣೆ ಮಾಡಲಾಗುವುದು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಜಿ.ಹೆಚ್. ವೀರಣ್ಣ ಅವರು ತಿಳಿಸಿದ್ದಾರೆ.
ಕೊಪ್ಪಳ ಜಿಲ್ಲೆಯಲ್ಲಿ 2012-13 ಹಾಗೂ 2013-14 ನೇ ಸಾಲಿನಲ್ಲಿ ಜರುಗಿದ ಎಸ್‍ಎಸ್‍ಎಲ್‍ಸಿ ವಾರ್ಷಿಕ ಪರೀಕ್ಷೆಯಲ್ಲಿ ಜಿಲ್ಲಾ ಮಟ್ಟದಲ್ಲಿ ಅತಿ ಹೆಚ್ಚು ಅಂಕಗಳಿಸಿದ ಮೂವರು ವಿದ್ಯಾರ್ಥಿಗಳಿಗೆ ಹಾಗೂ ತಾಲೂಕು ಮಟ್ಟದಲ್ಲಿ ಅತಿ ಹೆಚ್ಚು ಅಂಕಗಳಿಸಿ ಉತ್ತೀರ್ಣರಾದ ತಲಾ ಮೂವರು ವಿದ್ಯಾರ್ಥಿಗಳಿಗೆ ಹೀಗೆ ಒಟ್ಟು 31 ವಿದ್ಯಾರ್ಥಿಗಳಿಗೆ ಸರ್ಕಾರದ ವತಿಯಿಂದ ಕಂಪ್ಯೂಟರ್ ವಿತರಣೆ ಮಾಡಲಾಗುವುದು. 2012-13 ನೇ ಸಾಲಿನಲ್ಲಿ ಜಿಲ್ಲಾ ಮಟ್ಟದಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳು ಹಾಗೂ ಗಳಿಸಿದ ಅಂಕಗಳ ವಿವರ ಇಂತಿದೆ. ಅಕ್ಷತಾ ಹಿರೇಮಠ, ಬಾಲಕಿಯರ ಸ.ಪ್ರೌ.ಶಾಲೆ, ಕುಷ್ಟಗಿ- 597. ಐಶ್ವರ್ಯ ಅರಳೆಲೆಮಠ ಸರ್ಕಾರಿ ಸಂಯುಕ್ತ ಜೂನಿಯರ್ ಕಾಲೇಜು, ಮಂಗಳೂರು- 595. ಅಯ್ಯಪ್ಪ, ಸರ್ಕಾರಿ ಜೂನಿಯರ್ ಕಾಲೇಜು, ಬೇವೂರು- 585. ತಾಲೂಕು ಮಟ್ಟದಲ್ಲಿ ಕೊಪ್ಪಳ ತಾಲೂಕಿನಲ್ಲಿ ಶಿಲ್ಪಾ, ಭಾಗ್ಯನಗರ- 584. ಶ್ವೇತಾ, ಕಿನ್ನಾಳ- 582. ಗವಿಸಿದ್ದಪ್ಪ, ಮುನಿರಾಬಾದ್- 564. ಗಂಗಾವತಿ ತಾಲೂಕಿನಲ್ಲಿ ಶೃತಿ, ಆರ್ಹಾಳ- 575. ಪವನಕುಮಾರ್ ಆರ್.ಎಸ್., ಉಡುಮಕಲ್- 573. ನಂದಿನಿ ಮಾಲಿಪಾಟೀಲ, ಚಿಕ್ಕಡಂಕನಕಲ್- 570. ಕುಷ್ಟಗಿ ತಾಲೂಕಿನಲ್ಲಿ ಸಮರಿನ್, ತಾವರಗೇರಾ- 581. ಅಂಬಿಕಾ ಗೋತಗಿ, ಕುಷ್ಟಗಿ- 566. ಪ್ರವೀಣ ಮಾಸಗತ್ತಿ, ಹನುಮಸಾಗರ- 564. ಯಲಬುರ್ಗಾ ತಾಲೂಕಿನಲ್ಲಿ ನಾಗರತ್ನ, ಸಂಗನಾಳ- 563. ವಾಣಿ, ಬನ್ನಿಕೊಪ್ಪ- 563, ತೇಜಸ್ವಿನಿ, ಭಾನಾಪುರ- 560.
2013-14 ನೇ ಸಾಲಿನಲ್ಲಿ ಜಿಲ್ಲಾ ಮಟ್ಟದಲ್ಲಿ ಗವಿಸಿದ್ದಪ್ಪ, ಸರ್ಕಾರಿ ಪ್ರೌಢಶಾಲೆ, ಅರಳಿಹಳ್ಳಿ, ತಾ: ಯಲಬುರ್ಗಾ- 599. ಕಾವ್ಯ, ಸರ್ಕಾರಿ ಪ್ರೌಢಶಾಲೆ, ಬೆಟಗೇರಿ, ತಾ: ಕೊಪ್ಪಳ- 596. ಐಶ್ವರ್ಯ ಶರಣಪ್ಪ ಎಮ್ಮಿ, ಹನುಮಸಾಗರ, ತಾ: ಕುಷ್ಟಗಿ- 595. ತಾಲೂಕು ಮಟ್ಟದಲ್ಲಿ ಕೊಪ್ಪಳ ತಾಲೂಕಿನಲ್ಲಿ ನವೀನ ಕುಮಾರ, ಕಿನ್ನಾಳ- 583. ಶಕ್ತಿಪ್ರಸಾದ, ಬೆಟಗೇರಿ- 582. ಸಂತೋಷ, ಬೆಟಗೇರಿ- 580. ಗಂಗಾವತಿ ತಾಲೂಕಿನಲ್ಲಿ ಸೀಮಾ ಬೇಗಂ, ಕನಕಗಿರಿ- 548. ಆಯೇಷಾ ಬೇಗಂ, ಕನಕಗಿರಿ- 573. ಆಲಂಬಾಷಾ, ಕನಕಗಿರಿ- 568. ಕುಷ್ಟಗಿ ತಾಲೂಕಿನಲ್ಲಿ ಸ್ಪೂರ್ತಿ ಕೆ.ಎಸ್., ಕುಷ್ಟಗಿ- 591. ಸುನೀತಾ, ಹನುಮಸಾಗರ- 590. ವಿರುಪಾಕ್ಷಪ್ಪ, ಹಿರೇಗೊನ್ನಾಗರ- 583. ಚನ್ನವೀರೇಶ ಪತ್ತಾರ, ಹುಲಿಯಾಪುರ- 583. ಯಲಬುರ್ಗಾ ತಾಲೂಕಿನಲ್ಲಿ ಗೌರಿಶಂಕರ, ತಳಕಲ್- 592. ರವಿಕುಮಾರ ಎನ್., ಬೇವೂರ- 581. ಅನಿಲ, ತಳಕಲ್- 580.
ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹದಾಯಕವಾಗಿ ಕಂಪ್ಯೂಟರ್‍ಗಳನ್ನು ವಿತರಿಸುವ ಜೊತೆಗೆ, ಶೇ. 100 ರಷ್ಟು ಫಲಿತಾಂಶ ಬಂದ ಶಾಲಾ ಮುಖ್ಯೋಪಾಧ್ಯಾಯರಿಗೆ ಪ್ರಶಂಸಾ ಪ್ರಮಾಣ ಪತ್ರವನ್ನು ಇದೇ ಸಂದರ್ಭದಲ್ಲಿ ವಿತರಿಸಲಾಗುವುದು. ಈ ಕಾರ್ಯಕ್ರಮದಲ್ಲಿ ಜಿಲ್ಲೆಯ ಎಲ್ಲಾ ಸರ್ಕಾರಿ, ಅನುದಾನಿತ, ಅನುದಾನರಹಿತ ಪ್ರೌಢಶಾಲೆಗಳ ಮುಖ್ಯೋಪಾಧ್ಯಾಯರು ಖುದ್ದಾಗಿ ಭಾಗವಹಿಸಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಜಿ.ಹೆಚ್. ವೀರಣ್ಣ ತಿಳಿಸಿದ್ದಾರೆ.
0 comments:
Post a Comment