PLEASE LOGIN TO KANNADANET.COM FOR REGULAR NEWS-UPDATES

 ತಲೆ ಮೇಲೆ ಮಲ ಹೋರುವ ಅನಿಷ್ಟ ಪದ್ದತಿ ಅಂದರೆ ಮ್ಯಾನ್ಯುವಲ್ ಸ್ಕ್ಯಾವೆಂಜಿಂಗ್ ಆಚರಣೆಯನ್ನು ಸಂಪೂರ್ಣ ನಿಷೇಧಿಸಲಾಗಿದ್ದು, ಇದಕ್ಕೆ ಕಾರಣರಾದವರು ಮತ್ತು ಈ ಪದ್ದತಿಯನ್ನು ಮಾಡುತ್ತಿರುವವರು ಅಪರಾಧಿಗಳಾಗುತ್ತಾರೆ. ಈ ನಿಯಮದನ್ವಯ ಒಣ ಶೌಚಾಲಯಗಳನ್ನು ಹೊಂದುವುದಾಗಲಿ, ತಲೆ ಮೇಲೆ ಮಲ ಹೊರುವುದಾಗಲಿ ಹಾಗೂ ಮಲ ಹೊರುವ ಪದ್ದತಿಗೆ ಪ್ರಚೋದನೆ ನೀಡುವುದನ್ನು ನಿಷೇಧಿಸಲಾಗಿದೆ ಎಂದು ಕೊಪ್ಪಳ ನಗರಸಭೆ ಪೌರಾಯುಕ್ತರು ತಿಳಿಸಿದ್ದಾರೆ.
ಇನ್ನು ಮುಂದೆ ಶೌಚಾಲಯದ ಗುಂಡಿಗಳನ್ನು ಯಾವುದೇ ವ್ಯಕ್ತಿಗಳು ಸ್ವಚ್ಚಮಾಡದೆ ಸಕ್ಕಿಂಗ್ ಯಂತ್ರದ ಮೂಲಕವೇ ಸ್ವಚ್ಚಗೊಳಿಸಬೇಕು. ಇಲ್ಲವಾದಲಿ ಕಾನೂನಿನನ್ವಯ ನಿರ್ದಾಕ್ಷ್ಯಿಣ್ಯ ಕ್ರಮ ಕೈಗೊಳ್ಳಲಾಗುವುದು.   ಮ್ಯಾನ್ಯುವಲ್ ಸ್ಕ್ಯಾವೆಂಜರ್‍ಗಳು ಅಥವಾ ಅವರ ಕುಟುಂಬದವರು/ಅವಲಂಬಿತರು ಇದ್ದಲ್ಲಿ ಖುದ್ದಾಗಿ ಬಂದು ಸ್ವಘೋಷಣೆಯನ್ನು ಆ. 12 ರೊಳಗಾಗಿ ಮಾಡಿಕೊಳ್ಳುವಂತೆ ಕೊಪ್ಪಳ ನಗರಸಭೆ ಪೌರಾಯುಕ್ತರು  ತಿಳಿಸಿದ್ದಾರೆ.

Advertisement

0 comments:

Post a Comment

 
Top