PLEASE LOGIN TO KANNADANET.COM FOR REGULAR NEWS-UPDATES

  ಭಾರತ ದೇಶದವನ್ನು ಉಳಿಸಲು ಮತ್ತು ಬೆಳೆಸಲು ನಡೆದ ಲೋಕಸಭಾ ಚುನಾವಣೆಯಲ್ಲಿ ಜನರು ನರೇಂದ್ರ ಮೋದಿಯವರನ್ನು ಪ್ರಧಾನಿಯನ್ನಾಗಿಸಿ ನನ್ನನ್ನು ಈ ಭಾಗದ ಸಂಸದರನ್ನಾಗಿ ಆಯ್ಕೆ ಮಾಡಿದ್ದಾರೆ. ಜನರ ನಿರೀಕ್ಷೆ ಮೀರಿ ಕೊಪ್ಪಳ ಲೋಕಸಭಾ ವ್ಯಾಪ್ತಿಯ ಸರ್ವಾಂಗೀಣ ಅಭಿವೃದ್ಧಿಗಾಗಿ ಕೆಲಸ ಮಾಡುತ್ತೇನೆ ಎಂದು ಕೊಪ್ಪಳ ಲೋಕಸಭಾ ಕ್ಷೇತ್ರದ ನೂತನ ಸಂಸದ ಸಂಗಣ್ಣ ಕರಡಿ ಹೇಳಿದರು.
ಅವರು ನಗರದ ವಾರಕರ್ ಓಣಿ, ಮುಚಿಗಾರ ಓಣಿ, ಖಾಟಿಗೆ ಸಮಾಜ, ಕುರಬರ ಓಣಿಯಲ್ಲಿ ನಡೆದ ಬಿಜೆಪಿ ಕಾರ್ಯಕರ್ತರಿಂದ ಮತದಾರರಿಂದ ಅಭಿಮಾನಿಗಳಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರ ಜೊತೆ ಸೇರಿ ಜನರಲ್ಲಿ ಪ್ರಾಮಾಣಿಕವಾಗಿ ಅಭಿವೃದ್ಧಿ ಕಾರ್ಯಗಳನ್ನು ನಿರ್ವಹಿಸುತ್ತೇನೆ. ಈ ಭಾಗದಲ್ಲಿ ಅತಿಹೆಚ್ಚು ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳುವ ಆತ್ಮವಿಶ್ವಾಸವಿದ್ದು ನಾನು ಯಾವತ್ತು ಜನರಿಂದ ದೂರವಾಗದೇ ಪ್ರತಿಯೊಬ್ಬರ ಸಂಪರ್ಕದಲ್ಲಿದ್ದು ಉತ್ತಮ ಕಾರ್ಯನಿರ್ವಹಿಸುತ್ತೇನೆ ಎಂದರು. ಕೊಪ್ಪಳ ನಗರಾಭಿವೃದ್ಧಿಗೆ ವಿಶೇಷ ಆಸಕ್ತಿವಹಿಸಲಾಗುವುದು. ಕೇಂದ್ರ ನಗರಾಭಿವೃದ್ಧಿ ಸಚಿವರಾದ ವೆಂಕಯ್ಯನಾಯ್ಡುರವರು ತಮಗೆ ಆತ್ಮೀಯರಾಗಿದ್ದು ನನ್ನ ಚುನಾವಣೆಯಲ್ಲಿ ಭಾಗವಹಿಸಿ ನನ್ನ ಪರವಾಗಿ ಮತಯಾಚನೆ ಮಾಡಿ ನನ್ನ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಅವರೊಂದಿಗೆ ನಗರದ ಅಭಿವೃದ್ಧಿ ಕುರಿತು ಚರ್ಚಿಸಿ ಕೇಂದ್ರ ಸರಕಾರದಿಂದ ಹೆಚ್ಚಿನ ಅನುಧಾನ ಪಡೆದು ಕೊಪ್ಪಳ ಲೋಕಸಭಾ ಕ್ಷೇತ್ರವನ್ನು ಅಭಿವೃದ್ಧಿಯಲ್ಲಿ ಮಾದರಿ ಕ್ಷೇತ್ರವನ್ನಾಗಿ ಮಾಡಲು ಶ್ರಮಿಸುವದಾಗಿ ಹೇಳಿದರು.
ಈ ಸಂದರ್ಭದಲ್ಲಿ ಸೂರ್ಯವಂಶ ಕ್ಷತ್ರೀಯ ಖಾಟಿಗ ಸಮಾಜದ ಮುಖಂಡ ನಾಗರಾಜ ದಲಾಲಕರ್, ಅಶೋಕ ಕಲಾಲ, ದೇವರಾಜ, ರಘು, ದೀಪಕ್ ಕಲಾಲ, ಮಹೇಶ, ಸತ್ಯನಾರಾಯಣ, ಪರಂಜಿರಾವ್ ದಲಾಲಕರ್, ಮಂಜು ಮುಂಡರಗಿ, ಸದಾಶಿವಯ್ಯ ಹಿರೇಮಠ, ಬಿಜೆಪಿ ಮಾಧ್ಯಮ ಸಹವಕ್ತಾರ ಪರಮಾನಂದ ಯಾಳಗಿ, ದತ್ತು ವೈದ್ಯ, ಅಮೀತ್ ಕಂಪ್ಲಿಕರ್, ವಿನಾಯಕ, ಈಶಪ್ಪ ಹುಬ್ಬಳ್ಳಿ, ಚನ್ನಪ್ಪ ದಿನ್ನಿ, ರಾಜಶೇಖರ ಸೇರಿದಂತೆ ನೂರಾರು ಕಾರ್ಯಕರ್ತರು ಅಭಿಮಾನಿಗಳು ಉಪಸ್ಥಿತರಿದ್ದರು.

ಯುವ ಕಾರ್ಯಕರ್ತರ ಶ್ರಮದಿಂದಲೇ ಬಿಜೆಪಿ ಗೆಲುವು ಸಾಧಿಸಿದೆ: ಅಶೋಕ ವಕ್ರಾಣಿ
ಕೊಪ್ಪಳ, ಜೂ.೦೪: ದೇಶದಾಧ್ಯಂತ ಗುಜರಾತ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿಯವರ ಅಲೆಯಿಂದಾಗಿ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಯುವಕರ ಪಡೆ ನರೇಂದ್ರ ಮೋದಿಯವರನ್ನು ಪ್ರಧಾನಿಯನ್ನಾಗಿ ಮಾಡಬೇಕು ಎಂಬ ದೃಢ ನಿರ್ಧಾರದಿಂದ ಶಕ್ತಿ ಮೀರಿ ಬಿಜೆಪಿ ಪರವಾಗಿ ಕೆಲಸಮಾಡಿದ್ದರಿಂದ ಇಂದು ಬಿಜೆಪಿಯು ಅಭುತಪೂರ್ವವಾಗಿ ಗೆಲುವುಸಾಧಿಸಿ ದೇಶದ ಆಢಳಿತ ಚುಕ್ಕಾಣಿ ಹಿಡಿದಿದೆ ಎಂದು ರಾಜ್ಯ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಅಶೋಕ ವಕ್ರಾಣಿ ಹೇಳಿದರು.
ಅವರು ನಗರದ ಬಿಜೆಪಿ ಕಾರ್ಯಾಲಯದಲ್ಲಿ ಕೊಪ್ಪಳ ಜಿಲ್ಲಾ ಯುವ ಮೋರ್ಚಾ
ಪದಾಧಿಕಾರಿಗಳ ಸಮಾಲೋಚನಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ಕಳೆದ ೧೦ ವರ್ಷಗಳಲ್ಲಿ ಯುಪಿಎ ನೇತೃತ್ವದ ಕಾಂಗ್ರೆಸ್ ಸರ್ಕಾರದ ವಿರುದ್ಧ ಜನರು ರೋಸಿಹೋಗಿದ್ದು ಬಡವರ ಅಗತ್ಯವಾದ ಪದಾರ್ಥಗಳ ಬೆಲೆ ಏರಿಕೆ ಬಡವರು ಬದುಕಲಾರದಂತಹ ಪರಸ್ಥಿತಿ ನಿರ್ಮಾಣವಾಗಿತ್ತು. ಯುಪಿಎ ಸರಕಾರದ ವಿರುದ್ಧ ಬಿಜೆಪಿ ಕಾರ್ಯಕರ್ತರು ರೊಚ್ಚಿಗೆದ್ದು ದೇಶದಾಧ್ಯಂತ ಪ್ರತಿಭಟನೆಗಳ ಮೂಲಕ ಆಕ್ರೋಶ ವ್ಯಕ್ತಪಡಿಸಿ ಈ ಬಾರಿ ನರೇಂದ್ರ ಮೋದಿಯವರನ್ನು ಪ್ರಧಾನಿಯನ್ನಾಗಿ ಮಾಡಿ ದೇಶವನ್ನು ಅಭಿವೃದ್ಧಿಯತ್ತ ಕೊಂಡೊಯ್ಯಬೇಕು ಎಂಬ ಸಂಕಲ್ಪದೊಂದಿಗೆ ಮನೆ ಮನೆಗೆ ಬಿಜೆಪಿ ನರೆಂದ್ರ ಮೋದಿಯವರ ಅಭಿವೃದ್ಧಿ ವಿಚಾರ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿ ಅದರಲ್ಲು ದೇಶದ ಯುವಕರು ಬಿಜೆಪಿಯತ್ತ ವಾಲಿಸಲು ಅನೇಕ ಜನಪರ ಕಾರ್ಯಕ್ರಮಗಳನ್ನು ಹಾಕಿಕೊಂಡ ಹಿನ್ನೆಯಲ್ಲಿ ಯುವಕರ ಪಡೆಯ ಶ್ರಮದಿಂದ ಇಂದು ಕೇಂದ್ರದಲ್ಲಿ ಮತದಾರ ಬಾಂಧವರು ನರೇಂದ್ರ ಮೋದಿಯವರಿಗೆ ಐತಿಹಾಸಿಕ ವಿಜಯವನ್ನು ಕೊಟ್ಟು ಆಢಳಿತ ಮಾಡಲು ಅವಕಾಶ ನೀಡಿದ್ದಾರೆ. ದೇಶ ಅಭಿವೃದ್ಧಿಯತ್ತ ಮುನ್ನಡೆಯಲು ಯಾವುದೇ ಸಂಶಯವಿಲ್ಲ ಎಂದು ಅಶೋಕ ವಕ್ರಾಣಿ ಹೇಳಿದರು.
ಕೊಪ್ಪಳ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಮಂಜುನಾಥ ಪಾಟೀಲ್ ಅಂದ್ರಾಳ ಮಾತನಾಡಿ, ಕೊಪ್ಪಳ ಜಿಲ್ಲೆಯಲ್ಲಿ ಈ ಸಾರಿ ಬಿಜೆಪಿಗೆ ಉತ್ತಮ ಅಡಿಪಾಯ ದೊರಕ್ಕಿದ್ದು ಯುವಕರ ಪಡೆಯಿಂದ ಜಿಲೆಯಲ್ಲಿ ಹೆಚ್ಚು ಹೆಚ್ಚು ಯುವಕರನ್ನು ಬಿಜೆಪಿಗೆ ಸೇರಿಸಿಕೊಳ್ಳುವುದರ ಮುಖಾಂತರ ಪಕ್ಷದ ಗೆಲುವಿಗಾಗಿ ಶ್ರಮಿಸಲಾಯಿತು. ಜಿಲ್ಲಾ ಯುವ ಮೋರ್ಚಾ ಪದಾಧಿಕಾರಿಗಳು ಲೋಕಸಭಾ ಚುನಾವಣೆಯಲ್ಲಿ ಅವಿರತವಾಗಿ ಪಕ್ಷದ ಅಭ್ಯರ್ಥಿ ಸಂಗಣ್ಣ ಕರಡಿಯವರ ಗೆಲುವಿಗೆ ಕಾರಣರಾಗಿದ್ದಾರೆ ಅಲ್ಲದೇ ಬಾರಿ ಅಂತರದಿಂದ ಗೆಲುವು ಸಾಧಿಸಿದ ಸಂಗಣ್ಣ ಕರಡಿ ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗಾಗಿ ಶ್ರಮಿಸಲಿದ್ದಾರೆ ಅವರೊಂದಿಗೆ ಯುವಮೋರ್ಚಾದ ಪದಾಧಿಕಾರಿಗಳು ಕೈ ಜೋಡಿಸಿ ಅಭಿವೃದ್ಧಿಗೆ ಶ್ರಮಿಸಲಾಗುವುದು ಎಂದು ಹೇಳಿದರು. ಈ ಸಂದರ್ಭದಲ್ಲಿ ಬಳ್ಳಾರಿ ಜಿಲ್ಲಾ ಪ್ರ.ಕಾ. ಸುದೀರ್, ರಾಜ್ಯ ಉಪಾಧ್ಯಕ್ಷ ಬಸವರಾಜ ಬಾಗಲಕೋಟ, ಜಿಲ್ಲಾ ಪ್ರ.ಕಾ.ಚಂದ್ರಶೇಖರ ಮೊಸಾಲಿ, ಮಲ್ಲಿಕಾರ್ಜುನ ಸಾಹುಕಾರ, ಮಹೇಂದ್ರಗೌಡ ಕುರಡಗಿ, ಉಮೇಶ ಸಜ್ಜನ್, ರಫೀಕ್ ಕೊತ್ವಾಲ್, ಬಸಯ್ಯ ಹಿರೇಮಠ, ಶರಣಪ್ಪ ಕೂರನಾಳ ಯಲಬುರ್ಗಾ, ವಿರೇಶ ಗಂಗಾವತಿ, ಕೊಪ್ಪಳ ಜಿಲ್ಲಾ ಬಿಜೆಪಿ ಮಾಧ್ಯಮ ಸಹ ವಕ್ತಾರ ಪರಮಾನಂದ ಯಾಳಗಿ ಸೇರಿದಂತೆ ಜಿಲ್ಲಾ ಯುವ ಮೋರ್ಚಾದ ಪದಾಧಿಕಾರಿಗಳು ಕಾರ್ಯಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.


Advertisement

0 comments:

Post a Comment

 
Top