PLEASE LOGIN TO KANNADANET.COM FOR REGULAR NEWS-UPDATES


 ಅಧುನಿಕ ಜಗತ್ತಿನಲ್ಲಿ ಇಂದಿನ ಸ್ಪರ್ಧಾತ್ಮಕ ದಿನಗಳಲ್ಲಿ ಮಕ್ಕಳ ಉತ್ತಮ ಶಿಕ್ಷಣಕ್ಕಾಗಿ ಪಾಲಕರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಸಾವಿರಾರು ರೂ. ಗಳ ವೆಚ್ಚದಲ್ಲಿ ದಾಖಲಿಸುತ್ತಿದ್ದಾರೆ ಆದರೆ ಸರಕಾರಿ ಶಾಲೆಗಳು ಕೂಡ ಖಾಸಗಿ ಶಾಲೆಗಳಿಗೆ ಯಾವದಕ್ಕು ಕಡಿಮೆ ಇಲ್ಲದಂತೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡುತ್ತಿದ್ದು ಇದಕ್ಕೆ ಉದಾಹರಣೆ ಈ ಸಾರಿಯ ಶೈಕ್ಷಣಿಕ ವರ್ಷದ ಉತ್ತಮ ಪಲಿತಾಂಶ ಕಾರಣ. ಆದ್ದರಿಂದ ಪಾಲಕರು ಸರಕಾರಿ ಶಾಲೆಗಳಲ್ಲೇ ಮಕ್ಕಳನ್ನು ದಾಖಲಿಸಿ ಉತ್ತಮ ಶಿಕ್ಷಣ ಕೊಡಿಸಬೇಕೆಂದು ಬನಿಕಟ್ಟಿ ಸರಕಾರಿ ಪ್ರೌಢಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಪರಮಾನಂದ ಯಾಳಗಿ ಮನವಿ ಮಾಡಿದರು.
ಅವರು ನಗರದ ಬನ್ನಿಕಟ್ಟಿ ಸರಕಾರಿ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಸರಕಾರದ  ಉಚಿತ ಸಮವಸ್ತ್ರ, ಪಠ್ಯಪುಸ್ತಕ ವಿತರಿಸಿ ಮಾತನಾಡಿದರು.
ಶಿಕ್ಷಣ ಇಲಾಖೆಯು ಶಿಕ್ಷಣದ ಪ್ರಗತಿಗಾಗಿ ಸಾಕಷ್ಟು ಯೋಜನೆಗಳನ್ನು ರೂಪಿಸುತ್ತಿದ್ದು ಕ್ಷೀರ ಭಾಗ್ಯ, ಬಿಸಿಯೂಟ, ಉಚಿತ ಪಠ್ಯಪುಸ್ತಕ ಹಾಗೂ ಸಮವಸ್ತ್ರ, ಬೈಸಿಕಲ್, ಶಿಷ್ಯವೇತನ ಹಾಗೂ ವಿದ್ಯಾರ್ಥಿನಿಯರಿಗೆ ಪ್ರೋತ್ಸಾಧನದಂತಹ ಮುಂತಾದ ಯೋಜನೆಗಳನ್ನು ಜಾರಿಗೆ ತಂದಿದ್ದು ಸಮುದಾಯವು ತಮ್ಮ ಮಕ್ಕಳಿಗೆ ಯೋಜನೆಗಳು ತಲುಪಿಸುವಂತೆ ಮಾಡಲು ತಮ್ಮ ಮಕ್ಕಳನ್ನು ಸರಕಾರಿ ಶಾಲೆಗೆ ದಾಖಲು ಮಾಡುವದರೊಂದಿಗೆ ಶಿಕ್ಷಣ ನೀಡಿ ಉತ್ತಮ ನಾಗರಿಕರನ್ನಾಗಿ ರೂಪಿಸಲು ಪಾಲಕರು ಮುಂದಾಗಬೇಕು. ಬನ್ನಿಕಟ್ಟಿ ಸರಕಾರಿ ಪ್ರೌಢಶಾಲೆಯು ಮಕ್ಕಳ ಸರ್ವಾಂಗೀಣ ಪ್ರಗತಿಗಾಗಿ ನಿರಂತರವಾಗಿ ಪ್ರಯತ್ನಿಸುತ್ತಿದ್ದು ಈ ನಿಟ್ಟಿನಲ್ಲಿ ಶಾಲಾ ಶಿಕ್ಷಕರ ಬಳಗ ನಿರಂತರವಾಗಿ ಶ್ರಮಿಸುತ್ತಿದ್ದಾರೆ ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ಮಕ್ಕಳನ್ನು ನಿರಂತರವಾಗಿ ತೋಡಗಿಸುತ್ತಿದ್ದು ಅಲ್ಲದೇ ಶಾಲೆಯಲ್ಲಿ ಸುಸರ್ಜಿತವಾದ ಕಂಪ್ಯೂಟರ್ ಕೊಠಡಿ, ವಾಚನಾಲಯ, ವಿಜ್ಞಾನ ಕೊಠಡಿ, ಆಟದ ಮೈದಾನ, ವರ್ಗ ಕೊಣೆಗಳು ನಿರಂತರ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಉತ್ತಮ ವಾತಾವರಣ ಹೊಂದಿದ್ದು ಮಕ್ಕಳು ಹಾಗೂ ಪಾಲಕರ ಸಮುದಾಯ ಇದರ ಸದುಪಯೋಗ ಪಡೆದುಕೊಂಡು ತಮ್ಮ ಮಕ್ಕಳನ್ನು ಹೆಚ್ಚಿನ ಪ್ರಮಾಣದಲ್ಲಿ ಸರಕಾರಿ ಶಾಲೆಗಳಿಗೆ ದಾಖಲಿಸುವುದರ ಮೂಲಕ ಉತ್ತಮ ಶಿಕ್ಷಣ ಕೊಡಿಸಿ ದೇಶದ ಉನ್ನತ ಪ್ರಜೆಯನ್ನಾಗಿಸಲು ಶ್ರಮಿಸಬೇಕೆಂದು ಹೇಳಿದರು.
ಶಾಲಾ ಶಿಕ್ಷಕಿ ಮಂಜುಳಾ ನಾಲ್ವಾಡ್ ಮಾತನಾಡಿ, ಶಿಕ್ಷಣ ಬದುಕು ರೂಪಿಸುವ ಶಕ್ತಿಯಾಗಿದೆ. ಅಧುನಿಕ ಜಗತ್ತಿನಲ್ಲಿ ಶೈಕ್ಷಣಿಕವಾಗಿ ಎಷ್ಟೇ ಮುಂದುವರೆದಿದ್ದರೂ ಮಾನವೀಯ ಮೌಲ್ಯಗಳಿಂದ ದೂರ ಸರಿಯುತ್ತಿದ್ದೇವೆ. ಮಕ್ಕಳಿಗೆ ಮೌಲ್ಯಯುತ ಶಿಕ್ಷಣ ನೀಡಲು ಪಾಲಕರು ಮುಂದಾಗಬೇಕು. ವಿದ್ಯಾರ್ಥಿಗಳು ಪ್ರತಿನಿತ್ಯ ಶಾಲೆಗೆ ಬಂದು ಉತ್ತಮ ಶಿಕ್ಷಣ ಪಡೆದು ಉನ್ನತ ಹುದ್ದೆಯಲ್ಲಿ ಸೇರಿ ಪೋಷಕರ ಶ್ರಮಕ್ಕೆ ಹಾಗೂ ಶಿಕ್ಷಕರ ಪ್ರಯತ್ನಕ್ಕೆ ಕೀರ್ತಿ ತರಬೇಕೆಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಮುಖ್ಯೋಪಾಧ್ಯಾಯ ಕರಿಬಸಪ್ಪ ಪಲ್ಲೇದ ವಹಿಸಿದ್ದರು. 
ಕಾರ್ಯಕ್ರಮದಲ್ಲಿ ರಾಮರಡ್ಡೆ, ಜಯರಾಜ ಬೂಸದ್, ಮಂಜುಳಾ ವಿ., ವೀರಯ್ಯ ಒಂಟಿಗೋಡಿ ಮಠ, ಗೋಪಾಲರಾವ್ ಗುಡಿ, ಶೋಭಾ ಗಡದ್, ಶಾರದಮ್ಮ ತಳಬಾಳ ಹಾಗೂ ಶಾಲೆಯ ಎಸ್‌ಡಿಎಂಸಿ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ನಂತರ ವಿದ್ಯಾರ್ಥಿಗಳಿಗೆ ಸಿಹಿಊಟ ವಿತರಸಿವುದರ ಮೂಲಕ ಶಾಲೆಗೆ ಸ್ವಾಗತಿಸಿಕೊಂಡು ಎಲ್ಲಾ ಮಕ್ಕಳಿಗೂ ಸಮವಸ್ತ್ರ ಹಾಗೂ ಪಠ್ಯಪುಸ್ತಕ ವಿತರಿಸಲಾಯಿತು.

Advertisement

0 comments:

Post a Comment

 
Top