PLEASE LOGIN TO KANNADANET.COM FOR REGULAR NEWS-UPDATES

ರಂಗಭೂಮಿಯಲ್ಲಿ ವಿವಿದ ಪ್ರಯೋಗಗಳಿಗೆ ಒಡ್ಡಿಕೊಂಡಿರುವ ರಂಗ ವಿಜ್ಞಾನಿ ಹಾಲ್ಕುರಿಕೆ ಶಿವಶಂಕರ ಕೊಪ್ಪಳ ದಲ್ಲಿ ೨ ವರ್ಷಗಳಿಂದ ಆದುನಿಕ ರಂಗ ಭೂಮಿಯ ವಿವಿದ ಸ್ವರೂಪಗಳ ಸಾಧ್ಯತೆಗಳನ್ನು ಹುಡುಕುತ್ತಿದ್ದಾರೆ. ಶೂನ್ಯ ಪರಿಕಲ್ಪನೆಯ ಆಧುನಿಕ ಅಭಿನಯ ಸಿದ್ದಾಂತವನ್ನು ಭಾರತೀಯ ರಂಗ ಭೂಮಿಗೆ ಶೋಧಿಸುತಿದ್ದಾರೆ. ಅವರ ವಿಭಿನ್ನ ನಾಟಕ ಪ್ರಯತ್ನವಾಗಿ ವಿಸ್ತಾರ್ ಬಾಂಧವಿ ಸಿಬ್ಬಂದಿ ವರ್ಗಕ್ಕೆ ಕೋರೆಗಾಂವ್ ನಾಟಕ ನಿರ್ದೇಶಿಸುತ್ತಿದ್ದಾರೆ.  
               ಕೋರೆಗಾಂವ್ ನಾಟಕ ಇತಿಹಾಸದಲ್ಲಿ ಮುಚ್ಚಿಹೋದ ಸಾಹಸದ ಘಟನೆ. ಮೂವತ್ತು ಸಾವಿರ ಸೈನಿಕರನ್ನು ಕೇವಲ ಐನೂರು ಜನ ಸೈನಿಕರು ಸೇರಿಕೊಂಡು ಸೋಲಿಸಿದ ಕದನ. ಪೇಶ್ವೆಗಳ ಆಡಳಿತದಲ್ಲಿದ್ದ ಜಾತಿ, ಅಸ್ಪೃಶ್ಯತೆ, ಮೇಲು ಕೀಳುಗಳ ವಿರುದ್ಧ ಸೆಟೆದು ನಿಂತು ಮಾನವೀಯ ಮೌಲ್ಯಗಳನ್ನು ಪಡೆದುಕೊಳ್ಳಲು ಹಂಬಲಿಸುವ ಮಹರ್ ಸೈನಿಕರ ಧೈರ್ಯ ಸಾಹಸ, ಕೆಚ್ಚೆದೆಯ  ಹೋರಾಟವು ಬ್ರಿಟೀಷರಿಗೆ ಗೆಲುವು ತಂದು ಕೊಡುತ್ತದೆ. ಬ್ರಿಟೀಷರು ಮಹರ್ ಸೈನಿಕರನ್ನು ನಡೆಸಿಕೊಳ್ಳುವ ರೀತಿಯು ನಾಟಕದಲ್ಲಿ ವಿಸ್ಮಯವನ್ನು ಮೂಡಿಸುತ್ತದೆ. ಪೇಶ್ವೆ ಮತ್ತು ಬ್ರಿ

ಟೀಷರ ನಡುವಿನ ಯುದ್ಧದಲ್ಲಿ ಮಹರ್ ಸೈನಿಕರು ಅನುಭವಿಸುವ ಕರಾಳತೆಯೇ ನಾಟಕದ ವಸ್ತುವಾಗಿದೆ. ಕೋರೇಗಾಂವ್ ಕದನ ಇತಿಹಾಸದ ಪಠ್ಯದಲ್ಲಿ ಮುಚ್ಚಿಹೋಗಿರುವುದರ ಜೊತೆಗೆ ಅಸ್ಪೃಶ್ಯರ ಸಾಹಸ, ಕೌಶಲ್ಯ, ಸೃಜನಶೀಲತೆಯನ್ನು ಮಣ್ಣುಪಾಲು ಮಾಡಿರುವ ಸನ್ನಿವೇಶಗಳು ಈ ನಾಟಕದಲ್ಲಿ ಬಿಚ್ಚಿಕೊಳ್ಳುತ್ತವೆ. ಬಾಬಾ ಸಾಹೇಬ್ ಡಾ|| ಬಿ. ಆರ್. ಅಂಬೇಡ್ಕರ್ ಕೋರೇಗಾಂವ್ ಘಟನೆಯನ್ನು ಶೋಧಿಸಿ ಬೆಳಕಿಗೆ ತಂದಿದ್ದಾರೆ. ೧೮೧೮ ಜನವರಿ ಒಂದರಂದು ಮಹಾರಾಷ್ಟ್ರದ ಪುಣೆಯ ಕೋರೇಗಾಂವ್‌ನಲ್ಲಿ ಪೇಶ್ವೆ ಮತ್ತು ಬ್ರಿಟೀಷರ ನಡುವೆ ಯುದ್ಧ ನಡೆದು ಮೂವತ್ತು ಸಾವಿರ ಪೇಶ್ವೆ ಸೈನಿಕರು ಸೋತು ಬ್ರಿಟೀಷರ ೫೦೦ ಮಹರ್ ಸೈನಿಕರು ಗೆಲ್ಲುತ್ತಾರೆ. ಈ ಘಟನೆಯನ್ನಿಟ್ಟುಕೊಂಡು ರಂಗ ವಿಜ್ನಾನಿ ಹಾಲ್ಕುರಿಕೆ ಶಿವಶಂಕರ್‌ರವರು ನಾಟಕ ಬರೆದಿದ್ದಾರೆ. ವಿಸ್ತಾರ್ ಥಿಯೇಟರ್ ಇದೇ ಜೂನ ೮ ರಂದು ಕೊಪ್ಪಳದ ಸಾಹಿತ್ಯ ಭವನದಲ್ಲಿ ಸಂಜೆ ೬:೩೦ ಕ್ಕೆ ಪ್ರದರ್ಶನ ಗೊಳಿಸುತ್ತಿದೆ.


Advertisement

0 comments:

Post a Comment

 
Top