PLEASE LOGIN TO KANNADANET.COM FOR REGULAR NEWS-UPDATES

 ಕೋರೆಗಾಂವ್ ಕದನ ಭಾರತ ಇತಿಹಾಸದಲ್ಲಿ ಮುಚ್ಚಿಹೋದ ಕದನ, ಅಸ್ಪೃಶ್ಯರ, ದಲಿತರ ಹೋರಾಟಗಳಿ ಅದೆಷ್ಟು ಮುಚ್ಚಿಹೋಗಿವೆ ಎಂಬುದು ಕೋರೆಗಾಂವ್ ನಾಟಕದ ಮೂಲಕ ಅರ್ಥವಾಗುಇತ್ತದೆ ಎಂದು ಬಂಡಾಯ ಸಾಹಿತಿ ವಿಠ್ಠಪ್ಪ ಗೋರಂಟ್ಲಿಯವರು ಅಭಿಪ್ರಾಯ ಪಟ್ಟರು. ಇತ್ತಿಚಿಗೆ ಕೊಪ್ಪಳದ ಸಾಹಿತ್ಯ ಭವನದಲ್ಲಿ ವಿಸ್ತಾರ್ ಥಿಯೇಟರ್ ಆಯೋಜಿಸಿದ್ದ ರಂಗವಿಜ್ಞಾನಿ ಹಾಲ್ಕುರಿಕೆ ಶಿವಶಂಕರ ರಚಿಸಿ ನಿರ್ದೇಶಿಸಿದ ಕೋರೆಗಾಂವ್ ನಾಟಕ ಪ್ರದರ್ಶನದ ಉದ್ಘಾಟನೆಯ ಅಧ್ಯಕ್ಷತೆಯನ್ನು ವಹಿಸಿ ಮಾತಾನಾಡಿದ ಆವರು ಆಧುನಿಕ ರಂಗಕಲೆಯು ಇಂದು ಹೆಚ್ಚು ಪ್ರಖರಗೊಳ್ಳಬೇಕಾಗಿದೆ, ನಾಟಕವು ಚಿಕಿತ್ಸೆ ರೂಪದಲ್ಲಿ ಮನುಷ್ಯನಿಗೆ ನೆರವಿಗೆ ಬರುತ್ತದೆ ಎಂದರು, ರಂಗವಿಜ್ಞಾನಿ ಹಾಲ್ಕುರಿಕೆ ಶಿವಶಂಕರ ಆಶಯ ಭಾಷಣ ಮಾಡುತ್ತಾ ಇಂದು ಇಂಡಿಯಾವು ಸಾಂಸ್ಕೃತಿಕ ದಿವಾಳಿತನ ಅನುಭವಿಸುತ್ತಿದೆ, ಹೋರಾಟಗಳು ತಮ್ಮಲ್ಲಿನ ತಾತ್ವಿಕತೆಯನ್ನು ಉಳಿಸಿಕೊಂಡಿಲ್ಲ. ಚಳುವಳಿ ಹೋರಾಟಗಳಿಗೆ ಸಾಂಸ್ಕೃತಿಕ ಸ್ಪರ್ಶ ಅಗತ್ಯವಾಗಿದೆ ಎಂದರು.
ಪ್ರೇಕ್ಷಕರಲ್ಲಿ ಬೆರಗು ಮೂಡುಸಿದ ಕೋರೆಗಾಂವ್ ನಾಟಕ:-
ಪ್ರದರ್ಶನದಂದು ಕೊಪ್ಪಳದ ಸಾಹಿತ್ಯಭವನ ತುಂಬಿ ತುಳಿಕುತ್ತಿತ್ತು, ಸಾವಿರಾರು ಗಟ್ಟಲೇ ಪ್ರೇಕ್ಷಕರುನಾಟಕ ನೋಡಲು ಜಮಾಯಿಸಿದ್ದರು, ಮನಮೋಹಕ ದೃಶ್ಯಗಳು ನಿಬ್ಬೇರಗಾಗುವ ಸಂಭಾಷಣೆಗಳು, ಬೆಳಕಿನ ಬಣ್ಣಗಳಲ್ಲಿ ಪಾತ್ರಗಳು ಝೈಂಕರಿಸುತ್ತಿದ್ದವು, ೩೦ಸಾವಿರ ಪೇಶ್ವೆ ಸೈನಿಕರನ್ನು ೫೦೦ಜನ ಮಹರ್ ಸೈನಿಕರು ಸೋಲಿಸಿದ, ಸಾಹಸದ ಘಟನೆಗಳು ದೃಶ್ಯಗಳಾಗಿ ರಂಗದ ಮೇಲೆ ಅರಳಿಕೊಂಡಾಗ ಪ್ರೇಕದಷರ ಎದೆಯಲ್ಲಿ ಉತ್ಸಾಹದ ಚಿಲುಮೆ ಹರಿಯುತ್ತಿತ್ತು, ನಿರ್ದೇಶಕರಾದ ರಂಗವಿಜ್ಞಾನಿ ಹಾಲ್ಕುರಿಕೆ ಶಿವಶಂಕರ ರವರ ಭೌದ್ದಿಕತೆ, ಸೃಜನಾತ್ಮಕ ಕಾಲ್ಪನಿಕ ಶಕ್ತಿಗಳು ನಟರ ಮೂಲಕ ಹೊರಹೊಮ್ಮುತ್ತಿದ್ದವು, ಕೊಪ್ಪಳದ ರಂಗ ಇತಿಹಾಸದಲ್ಲಿಯೇ ಈ ಒಂದು ಪ್ರದರ್ಶನವು ಚಾರಿತ್ರಿಕವಾಗಿ ಬಿಟ್ಟಿತು. ಸಂಗೀತ ಪ್ರಸಾದನ, ವಸ್ತ್ರ ವಿನ್ಯಾಸ, ಬೆಳಕು, ಪಾತ್ರಗಳ ಚಲನವಲನ ಎಲ್ಲವೂ ಹೊಸ ಆಶಯದೊಂದಿಗೆ ಮೈದಾಳಿದ್ದವು, ಅಂಬೇಡ್ಕರ್ ಪಾತ್ರಧಾರಿ ಶೀಲಾ ಹಾಲ್ಕುರಿಕೆರವರ ನಟನೆ ವೃತ್ತಿ ಪರತೆಯಿಂದ ಕೂಡಿತ್ತು, ಪೇಶ್ವೆರಾಜನ ಪಾತ್ರಧಾರಿ ನಾಜರ್ ಅಭಿನಯವು ಪೇಶ್ವೆಯ ಕ್ರೂರತ್ವವನ್ನು ಹೊರಚೆಲ್ಲಲುತ್ತಿತ್ತು, ಮಹರ್ ಸೈನಿಕರಾಗಿ ರಾಜು ರಾಥೋಡ್, ಯೋಸೆಫ್, ಕರಿಯಪ್ಪ, ಪ್ರಕಾಶ, ಸುಧಾಕರ, ಇವರು ದಿಟ್ಟತನದಿಂದ ನಿರ್ವಹಿಸಿದ್ರು. ಶರಣಪ್ಪ ಗೊಂಡಬಾಳರವರ ಬ್ರಾಹ್ಮಣ ಪಾತ್ರವು ಹಿಂದೂ ಧರ್ಮದ ಕ್ರೂರತ್ವವನ್ನು ಗೋಚರಿಸುತ್ತಿತ್ತು, ಬ್ರಿಟೀಷ್ ಅಧಿಕಾರಿಗಳಾಗಿ ಸುಭಾಷ್ ಚಂದ್ರ ಮತ್ತು ಸುಂಕಪ್ಪ ಮೀಸೆ ಅಚ್ಚುಕಟ್ಟಾಗಿ ನಿರ್ವಹಿಸಿದರು ಮಂತ್ರಿ ಮತ್ತು ಸೈನ್ಯಾಧಿಕಾರಿಗಳಾಗಿ ರೇಣುಕಾ ಹಾಲವರ್ತಿ ಮತ್ತು ಮೀನಾಕ್ಷಿ ಹೆಣ್ಣಾಗಿದ್ದರೂ ಗಂಡಿನ ಪಾತ್ರಗಳನ್ನು ಜಬರ್ ದಸ್ತಾಗಿ ನಿರ್ವಹಿಸಿದ್ರು. ವಿಚಿತ್ರ ಪಾತ್ರಗಳಾದ ಶಕುಂತಲಾ, ಅಂಬಮ್ಮ, ರೇಣುಕಾ, ಇವರ ಅಭಿನಯದ ಚಲನೆಯು ಪ್ರೇಕ್ಷಕರನ್ನು ಮಂತ್ರ ಮಗ್ನರನಾಗಿಸಿತ್ತು, ಬಸವರಾಜ ಮತ್ತು ಶೀವಪ್ಪರ ಆಬಿನಯದಲ್ಲಿ ಚುರುಕುತನ ವಿತ್ತು. ಸಂಗೀತದಲ್ಲಿ ಆಲಾಪಗಳನ್ನು ಹಾಡಿದ ಮರಿಯಮ್ಮ ಚೂಡಿಯವರ ದ್ವನಿಯು ರಂಗದ ತುಂಬಾ ಮಾರ್ದನಿಸಿತ್ತು, ಬೆಳಕಿನ ವಿನ್ಯಾಸ ಮಾಡಿದ ದೀಮಂತ್ ರವರ ಬೆಳಕಿನ ವಿನ್ಯಾಸದಲ್ಲಿ ಪಾತ್ರಗಳು ಬಣ್ಣಗಳಲ್ಲಿ ಮುಳುಗು ಏಳುತ್ತಿದ್ದವು. ಒಟ್ಟಾರೆ ಈ ಕೋರೆಗಾಂವ್ ನಾಟಕ ಪ್ರಯೋಗವು ಯಶಸ್ವಿ ಪ್ರದರ್ಶನವಾಗಿತ್ತು.

Advertisement

0 comments:

Post a Comment

 
Top