ಕಾವು ಪಡೆದುಕೊಂಡ ಶಿಕ್ಷಕರ ಪ್ರಕರಣ
ಜವಾಬ್ದಾರಿ ನಿರ್ವಹಿಸುವಲ್ಲಿ ಬಿಇಓ ಬಸವರಾಜಸ್ವಾಮಿ ಹಿರೇಮಠ ಸಂಪೂರ್ಣ ವಿಫಲ
ಶಾಲೆಗೆ ರಜೆ ಹಾಕದೇ ಮನವಿ ಸಲ್ಲಿಸಲು ಸಾಲುಗಟ್ಟಿದ ಶಿಕ್ಷಕರು
ಯಲಬುರ್ಗಾ,ಜೂ.೧೧: ಯಲಬುರ್ಗಾ ತಾಲೂಕಿನ ಕುಕನೂರ ಮಾದ್ಯಮಿಕ ಶಾಲೆಯಲ್ಲಿ ಸೋಮವಾರ ಜರುಗಿದ ಶಿಕ್ಷಕರಿಬ್ಬರ ಮಾರಾ ಮಾರಿ ಪ್ರಕರಣ ಹಲವು ಶಿಕ್ಷಕರಿಗೆ ಮನವಿ ಕೊಡುವ ನೆಪದಲ್ಲಿ ತಾಲೂಕಾ ಕೇಂದ್ರದಲ್ಲಿ ಬೀಡು ಬಿಡಲು ನೆರವಾಗಿದೆ. ಶಾಲೆಗೆ ರಜೆ ಹಾಕದೇ ಕರ್ತವ್ಯ ಪ್ರಜ್ಞೆ ಮರೆತು ವಿದ್ಯಾರ್ಥಿಗಳ ಜೀವನದೊಂದಿಗೆ ಚೆಲ್ಲಾಟವಾಡುತ್ತಿರುವ ಶಿಕ್ಷಕರು ಪರಸ್ಪರ ಬಡಿದಾಡಿಕೊಂಡು ಜಗಳವಾಡಿರುವ ಶಿಕ್ಷರಿಬ್ಬರ ಪ್ರಕರಣದ ಕುರಿತು ನ್ಯಾ ಒದಗಿಸಿಕೊಡಲು ಬಿಇಓ ಕಚೇರಿಗೆ ಮನವಿ ಸಲ್ಲಿಸಲು ಸಾಲುಗಟ್ಟಿ ಬಂದ ಶಿಕ್ಷಕರ ಒಂದು ದಿನದ ವೇತನವನ್ನು ಖಡಿತಗೊಳಿಸುವಂತೆ ಆಗ್ರಹಿಸಿ ಶಿವರಾಮೇಗೌಡ ಬಣದ ಕರವೇ ಕಾರ್ಯಕರ್ತರು ಬುಧವಾರ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ಮನವಿ ಸಲ್ಲಿಸಿದರು.
ಪ್ರಕರಣ ಜರುಗಿ ಸುಮಾರು ಮೂರು ದಿನಗಳು ಗತಿಸಿದರೂ ಬಿಇಓ ಬಸವರಾಜಸ್ವಾಮಿ ಹಿರೇಮಠ ರವರು ಮಾತ್ರ ಕಚೇರಿಯತ್ತ ಸುಳಿದಿಲ್ಲ. ಪ್ರಕರಣದ ತನಿಖೆ ಜವಾಬ್ದಾರಿಯಿಂದ ನುಣಿಚಿಕೊಳ್ಳಲು ಯತ್ನಿಸುತ್ತಿರುವ ಬಿಇಓ ವಾತಾವರಣ ತಿಳಿಗೊಳಿಸುವಲ್ಲಿ ಎಡವಿದ್ದಾರೆ. ಇಡೀ ರಾಜ್ಯವೇ ಯಲಬುರ್ಗಾದತ್ತ ಬೆರಳು ಮಾಡಿ ತೋರಿಸುತ್ತಿರುವ ಸಂದರ್ಭದಲ್ಲಿ ಜವಾಬ್ದಾರಿ ಸ್ಥಾನದಲ್ಲಿರುವ ಅಧಿಕಾರಿಯೊಬ್ಬರು ರಜಾ ಮೇಲೆ ತೆರಳಿರುವದು ಎಷ್ಟರಮಟ್ಟಿಗೆ ಸರಿ ಎಂಬುದು ಬುದ್ದಿ ಜೀವಿಗಳ ವಾದವಾಗಿದೆ. ಇದಕ್ಕೆ ಕಡಿವಾಣ ಹಾಕಬೇಕಾಗಿರುವ ಕ್ಷೇತ್ರ ಶಿಕ್ಷಣಾಧಿಕಾರಿ ಬಸವರಾಜಸ್ವಾಮಿ ಹಿರೇಮಠ ಕಚೇರಿ ಕಡೆಗೆ ಮನಸ್ಸು ಮಾಡದೇ ರಜೆ ಹಾಕುವ ಮೂಲಕ ಪ್ರಕರಣ ಬಗ್ಗೆ ತೆಪೆ ಹಚ್ಚು ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿರುವ ಕರವೇ ಕಾರ್ಯಕರ್ತರು ಪ್ರಕರಣದ ಸೂಕ್ತ ತನಿಖೆಗೆ ಒತ್ತಾಯಿಸಿದ್ದಾರೆ.
ಸಂದರ್ಭದಲ್ಲಿ ಮಾತನಾಡಿದ ಕರವೇ ತಾಲೂಕಾ ಅದ್ಯಕ್ಷ ರಾಜಶೇಖರ್ ಶ್ಯಾಗೋಟಿ, ವಿವಾದಿತ ಕೇಂದ್ರ ಬಿಂದುವಾಗಿರುವ ಶಿಕ್ಷರಿಬ್ಬರ ವಿರುದ್ಧ ಈಗಾಗಲೇ ಕುಕನೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ರಜಾ ಹಾಕದೇ ಬಿಇಒ ಕಚೇರಿಯಲ್ಲಿ ಬಿಡಾರ ಹೂಡಿರುವದು ಶಿಕ್ಷಕರು ಶಿಕ್ಷಣ ಪ್ರೇಮಿಗಳ ಹಾಗೂ ವಿದ್ಯಾರ್ಥಿಗಳ ಪಾಲಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಶಾಲೆಯಲ್ಲಿ ಉತ್ತಮ ವಾತಾವರಣ ನಿರ್ಮಾಣ ಮಾಡುವ ಮೂಲಕ ವಿದ್ಯಾರ್ಥಿಗಳನ್ನು ಉತ್ತಮ ಪ್ರಜೆಗಳನ್ನಾಗಿ ರೂಪಿಸಬೇಕಾದ ಶಿಕ್ಷಕರು ಈ ತರನಾಗಿ ವರ್ತಿಸುವದು ತರವಲ್ಲ, ಕಾರಣ ಸದರಿ ಘಟನೆ ಕುರಿತು ಉನ್ನತ ಮಟ್ಟದ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಶಿಕ್ಷಣ ಇಲಾಖೆ ಶಿಸ್ತು ಕ್ರಮಕ್ಕೆ ಮುಂದಾಗಬೇಕು ಎಂದು ನಗರ ಘಟಕದ ಅದ್ಯಕ್ಷ ಅಬ್ದುಲ್ ನಜೀರ್ ಕವಲೂರ ಹೇಳಿದರು.
ಕರವೇ ಮುಖಂಡರಾದ ಕಳಕಪ್ಪ ಕೊಡತಗೇರಿ, ಪ್ರಗತಿ ಪರ ಹೋರಾಟಗಾರ ಶರಣಪ್ಪ ದಾನಕೈ, ಮುತ್ತು ಬಳಿಗಾರ, ನವೀನಕುಮಾರ ಹಡಪದ, ವಿಜಯಕುಮಾರ ಚಲವಾದಿ, ಅಷ್ರಫಅಲಿ ಕಿನ್ನಾಳ, ಶರಣಪ್ಪ ಗಚ್ಚಿನಮನಿ, ಗೋಪಾಲಕೃಷ್ಣ ಆರೇರ, ಶಿವರಾಜ ತುಮ್ಮರಗುದ್ದಿ ಸೇರಿದಂತೆ ಇತರರು ಉಪಸ್ಥಿತರಿದ್ದರು.
0 comments:
Post a Comment