ಯಲಬುರ್ಗಾ :ತಾಲೂಕಿನ ಕುಕನೂರ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರಾದ ಮಹೇಶ ಸಬರದ ಹಾಗೂ ಚಿದಾನಂದಪ್ಪ ಪತ್ತಾರ ಶಿಕ್ಷಕರು ಮಕ್ಕಳ ಎದುರಿನಲ್ಲಿಯೇ ಬಡಿದಾಡಿ ಮಕ್ಕಳು ಅಸಭ್ಯ ಪಟ್ಟುಕೊಳ್ಳುವಂತಹ ಕೆಲಸ ಮಾಡಿರುವದನ್ನು ಮತ್ತು ಇವರ ಜಗಳದ ಸಂಬಂಧ ಶಾಲೆಯಲ್ಲಿ ರಜೆ ಪಡೆಯದೆ ಇಬ್ಬರು ಶಿಕ್ಷಕರ ಪರವಾಗಿ ಶಿಕ್ಷಕರ ಗುಂಪುಗಳು ನಿಂತಿರುವದನ್ನು ಖಂಡಸಿ ಕರ್ನಾಟಕ ರಕ್ಷಣಾ ವೇದಿಕೆ [ಶಿವರಾಮೇಗೌಡ ಬಣ] ತಾಲೂಕಾ ಕ್ಷೇತ್ರ ಶಿಕ್ಷಣಾಧಿಕಾರಿಗಳ ಅಂತಹ ಶಿಕ್ಷಕರ ಮೇಲೆ ಕ್ರಮ ತಗೆದುಕೊಳ್ಳಬೇಕು ಎಂದು ವಿರುಪಾಕ್ಷಯ್ಯ ಹೀರೆಮಠ ರವರಿಗೆ ಮನವಿ ಸಲ್ಲಿಸಿದರು.
ಮನವಿ ಸಲ್ಲಿಸಿ ಮಾತನಾಡಿದ ಗದಗ ಜಿಲ್ಲಾಧ್ಯಕ್ಷ ಕೆ,ಎಸ್,ಕೊಡತಗೇರಿ ಮಾತನಾಡಿ ಶಿಕ್ಷಕರು ಮಕ್ಕಳಿಗೆ ತಿದ್ದಿ ಬುದ್ದಿ ಹೇಳಿ ಸಮಾಜಕ್ಕೆ ಒಬ್ಬ ಒಳ್ಳೆಯ ಪ್ರಜೆಯನ್ನು ಮಾಡುವ ಜವಾಬ್ದಾರಿ ಹೊಂದಿರುತ್ತಾರೆ ಅದನ್ನು ಬಿಟ್ಟು ಮಕ್ಕಳ ಎದರಿನಲ್ಲಿಯೆ ಈ ರೀತಿ ಕಚ್ಚಾಡುವದು ಖಂಡನೀಯ ಅಂತಹ ಶಿಕ್ಷಕರ ಮೇಲೆ ಕ್ರಮ ತಗೆದುಕೊಳ್ಳಬೇಕು ಎಂದರು.
ನಂತರ ಮಾತನಾಡಿ ತಾಲೂಕಾಧ್ಯಕ್ಷ ರಾಜಶೇಖರ ಶ್ಯಾಗೋಟಿ ಮಾತನಾಡಿ ಶಿಕ್ಷಕರು ಸಂಘಗಳ ನೆಪದಲ್ಲಿ ರಾಜಕೀಯ ಮಾಡುತಿದ್ದಾರೆ ಆ ಶಿಕ್ಷಕರ ಜಗಳದ ಸಂಭಂದ ಆ ರೀತಿಯಾಗಿ ಗುಂಪು ಕಟ್ಟಿಕೊಂಡು ಬಂದು ಹೋರಾಟಮಾಡುವದು ಸರಿಯಲ್ಲ ಅದಕ್ಕೆ ಸಂಭಂದಿಸಿದ ಅಧಿಕಾರಿಗಳು ಇರುತ್ತಾರೆ ಅದನ್ನು ಬಿಟ್ಟು ಶಾಲೆಗೆ ರಜೆ ಹಾಕದೆ ಏಕಾಯಕಿ ಶಾಲೆಯಲ್ಲಿ ವಿದ್ಯಾರ್ಥಿಗಳನ್ನು ಬಿಟ್ಟು ಬರುವದು ಸರಿಯಲ್ಲ ಅವರ ಮೇಲೆ ತಾಲೂಕ ಕ್ಷೇತ್ರ ಶಿಕ್ಷಣಾಧಿಕಾರಿಗಳು ಸೂಕ್ತ ಕ್ರಮ ತಗೆದುಕೊಳ್ಳಬೇಕು ಇಲ್ಲದಿದ್ದರೆ ಮುಂದಿನ ದಿನಮಾನಗಳಲ್ಲಿ ಹೋರಾಟಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಎಸ್,ಕೆ,ದಾನಕೈ,ಬಸವರಾಜ ಹಳ್ಳಿ,ನಗರ ಘಟಕದ ಅಧ್ಯಕ್ಷ ಅಬ್ದುಲ್ ಕವಲೂರ,ಶಿವುರಾಜ ಚಿಕ್ಕೋಪ್ಪ ,ಮುತ್ತು ಬಳಗೇರ,ನವಿನಕುಮಾರ,ವಿಜಯಕುಮಾರ,ಶರಣಪ್ಪ ಗಚ್ಚಿನಮನಿ,ಬಸವರಾಜ ಕುರಿ,ಅಸ್ರಫಲಿ ಕಿನ್ನಾಳ,ಗೋಪಾಲ ಕೃಷ್ಣ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
0 comments:
Post a Comment