ಮೂಲಭೂತ ಸೌಲಭ್ಯಗಳು : ಕೊಪ್ಪಳ ಜಿಲ್ಲೆಯ ಜನರು ರೈಲಿನಲ್ಲಿ ಸಂಚರಿಸುವ ಸಂಖ್ಯೆ ದಿನೆ-ದಿನೇ ಹೆಚ್ಚುತ್ತಿದ್ದರೂ, ಜನರಿಗೆ ಬೇಕಾದ ಕನಿಷ್ಟ ಸೌಲಭ್ಯಗಳು ಕಲ್ಪಿಸುತ್ತಿಲ್ಲ. ಬಸ್ ದರ ಹೆಚ್ಚುತ್ತಿರುವುದರಿಂದ ರೈಲು ಸಂಚಾರವನ್ನು ಹೆಚ್ಚಿನ ಜನ ಅವಲಂಬಿಸುತ್ತಿದ್ದಾರೆ. ಆದರೂ ಕೇಂದ್ರ ಸರ್ಕಾರ ಕೊಪ್ಪಳ ರೈಲು ನಿಲ್ದಾಣಕ್ಕೆ ಇನ್ನೂವರೆಗೂ ಮೂಲಭೂತ ಸೌಲಭ್ಯಗಳಿಗೆ ಮತ್ತು ಅಭಿವೃದ್ಧಿಗೆ ಸಂಪೂರ್ಣವಾಗಿ ನಿರ್ಲಕ್ಷಿಸಿದೆ.
ಕೊಪ್ಪಳ ರೈಲ್ವೆ ನಿಲ್ದಾಣದ ಪ್ಲಾಟ್ ಫಾರ್ಮ್ ೨ ಮತ್ತು ೩ ವಿಸ್ತಾರಣೆಯ ಭೂಮಿ ವಿವಾದ ಸಹಾಯಕ ಆಯುಕ್ತರು (ಎಸಿ) ಅವರಲಿದ್ದು, ಅದನ್ನು ತೀವ್ರವಾಗಿ ಬಗೆಹರಿಸಿ ೬ ಲೈನ್‌ಗೆ ವಿಸ್ತರಿಸಲು ತಕ್ಷಣ ಅನುಕೂಲ ಮಾಡಿಕೊಡಬೇಕು. ಪ್ಲಾಟ್‌ಫಾರ್ಮ್-೨ ಮತ್ತು ೩ಗೆ ಮೇಲುಸೇತುವೆ (ಫುಟ್ ಓವರ್ ಬ್ರಿಡ್ಜ್) ನಿರ್ಮಿಸಬೇಕು. ಟಿಕೇಟ್ ನೀಡುವ ಹೆಚ್ಚುವರಿ ಕೌಂಟರ್ ಪ್ರಾರಂಭಿಸಿದ್ದು. ಸಿಬ್ಬಂದಿ ಕೊರತೆಯಿಂದ ಅದು ಸುಮಾರು ದಿನಗಳಿಂದ ಬಂದಾಗಿದೆ. ಶುದ್ಧ ಕುಡಿಯುವ ಸಿಹಿ ನೀರು ಪೂರೈಕೆ, ಪಾರ್ಕಿಂಗ್ ಜಾಗ ವಿಸ್ತರ್ಣೆ, ಪ್ರೀಪೇಡ್ ಆಟೋ ರಿಕ್ಷಾ ನಿಲ್ದಾಣ, ಸಿ.ಟಿ. ಬಸ್ ನಿಲ್ದಾಣ ವಿಸ್ತರ್ಣೆ, ಮೂತ್ರಾಲಯ, ಶೌಚಾಲಯ ಹೊಲಸಿನಿಂದ ನಾರುತ್ತಿದೆ ಇದರ ಸ್ವಚ್ಚತೆಗೆ ಕ್ರಮಕೈಗೊಳ್ಳಬೇಕು, ಡಿಜಿಟಲ್ ಕೋಚ್ ಪೋಜಿಶನ್ (ಯಾವ ಗಾಡಿಯ ಬೋಗಿ ಎಲ್ಲಿ ಬಂದು ನಿಲ್ಲುತ್ತದೆಂಬ ಸೂಚಿಸುವ ವ್ಯವಸ್ಥೆ) ಶೆಲ್ಟರ್ ವಿಸ್ತರ್ಣೆ (ಮೇಲ ಛಾವಣಿ), ಹೊಸ ಮಾದರಿಯ ವಸತಿ ಗೃಹಗಳ ನಿರ್ಮಾಣ, ರೈಲ್ವೆ ನಿಲ್ದಾಣದಲ್ಲಿ ಪ್ರಯಾಣಿಕರು ಕುಳಿತುಕೊಳ್ಳಲು ಹೆಚ್ಚಿನ ಆಸನಗಳ ವ್ಯವಸ್ಥೆ ಮಾಡಬೇಕು, ಲಕ್ಷಾಂತರ ರೂಪಾಯಿ ವೆಚ್ಚ ಮಾಡಿ ಅಲ್ಲಲ್ಲಿ ಸಣ್ಣ-ಪುಟ್ಟ ಕಾಮಗಾರಿ ನಡೆಸಿ ಸಿಮೇಂಟ್ ಲೇಪಿಸಿ. ಸುಣ್ಣ-ಬಣ್ಣ ಹಚ್ಚಿ ಆದರ್ಶ ರೈಲ್ವೆ ನಿಲ್ದಾಣವೆಂದು ನಾಮಫಲಕ ಹಾಕಿ ಉದ್ಘಾಟಿಸಿದನ್ನು ಹೊರತು ಯಾವ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿಲ್ಲ. ಈ ಭಾಗದಲ್ಲಿ ಮೆಕ್ಕೆಜೋಳ ಮ್ಯಾಪಕವಾಗಿ ಬೆಳಯುತ್ತಿರುವದರಿಂದ ಪ್ರತಿ ಸಿಜನ್‌ನಲ್ಲಿ ಮೆಕ್ಕೆಜೋಳ, ಅಕ್ಕಿ, ಸಕ್ಕರೆ, ರಾಸಾಯಣಿಕ ಗೊಬ್ಬರ, ಗ್ರಾನೈಟ್ ಕಲ್ಲು ಮುಂತಾದ ಹಲವು ಸರಕಗಳ ಲೋಡ್ ಮತ್ತು ಅನ್‌ಲೋಡ್ ಮಾಡಲು ಪ್ರತ್ಯೇಕ ಮಾರ್ಗ ನಿರ್ಮಿಸಬೇಕು. ಕೊಪ್ಪಳ ರೈಲ್ವೆ ನಿಲ್ದಾಣ ಸಿ-ಗ್ರೇಡ್‌ದಿಂದ ಬಿ-ಗ್ರೇಡ್‌ಗೆ ಮೇಲ್ದರ್ಜೆಗೆರಿಸಲಾಗಿದೆ, ಬಿ-ಗ್ರೇಡ್‌ಗೆ ತಕ್ಕಂತೆ ಸ್ವಚ್ಚತೆ, ಬುಕ್ಕಿಂಗ್ ಸ್ಟಾಫ್, ಕಾರ್ಯ ಸಿಬ್ಬಂದಿ, ರೈಲ್ವೆ ನಿಲ್ದಾಣ ಆರಂಭವಾದಾಗ ಮಂಜೂರಾದ ಸಂಖ್ಯೆ ಕೇವಲ ೩ ಜನ ಪೊಲೀಸ್‌ರು ಇನ್ನೂವರೆಗೂ ಮುಂದುವರೆದಿದೆ. ಜಿಲ್ಲಾ ಸ್ಥಳವಾಗಿರುವ ಕೊಪ್ಪಳ ರೈಲ್ವೆ ನಿಲ್ದಾಣ ರೈಲ್ವೆ ಪೊಲೀಸ್ ಔಟ್ ಪೋಸ್ಟ್ ಮೇಲ್ದರ್ಜೆಗೆರಿಸಿ ರೈಲ್ವೆ ಪ್ರೋಟಕ್ಷನ್ ಫೋರ್ಸ್ (ಆರ್‌ಪಿಎಫ್)ನ ಹೆಚ್ಚಿನ ಸಿಬ್ಬಂದಿ ಒದಗಿಸಬೇಕು. ನಿಲ್ದಾಣ ಮುಂದೆ ಸ್ವಾಗತ ಕಮಾನ ಫಲಕ ನಿರ್ಮಿಸಿ, ರೈಲ್ವೆ ನಿಲ್ದಾಣವನ್ನು ಆಧುನಿಕರಣಗೊಳಿಸಬೇಕು.
ಹೊಸ ರೈಲು ಮಾರ್ಗ-ಕಾಮಗಾರಿಗಳು : ಸುಮಾರು ಎರಡು ದಶಕಗಳನ್ನು ಕಳೆದರೂ ಗಿಣಗೇರಾ ಮಹೆಬೂಬ ನಗರ ಹೊಸ ರೈಲು ಮಾರ್ಗ ಪೂರ್ಣಗೊಳ್ಳಿಸಲು ಕೊರತೆ ಇರುವ ಅನುದಾನ ತಕ್ಷಣ ಬಿಡುಗಡೆ ಮಾಡಿ ಕಾಮಗಾರಿ ಪೂರ್ಣಗೊಳಿಸಬೇಕು. ಗದಗ-ವಾಡಿ ಹೊಸ ಮಾರ್ಗ ಯೋಜನೆ ನಿರ್ಮಾಣ ಕಾಮಗಾರಿ ಹೊಸಪೇಟೆ-ಲೋಂಡ ರೈಲು ಜೋಡಿ ಮಾರ್ಗ ನಿರ್ಮಾಣ ಕಾಮಗಾರಿ ಹುಬ್ಬಳ್ಳಿ ಹತ್ತಿರದ ಹೆಬಸೂರದಿಂದ ಹೊಸಪೇಟೆವರೆಗೆ ಕೆಲಸ ಅನೇಕ ನೆಪಗಳನ್ನು ಹೇಳುತ್ತ ಕುಂಟುತ್ತ ಸಾಗಿದ್ದನ್ನು ಕಾಲಮಿತಿ ಯೋಜನೆಯಲ್ಲಿ ತೆಗೆದುಕೊಂಡು ಕಡಿಮೆ ಅವಧಿಯಲ್ಲಿ ಪೂರ್ಣಗೊಳಿಸಬೇಕು. ಕೊಪ್ಪಳ ಆಲಮಟ್ಟಿ ಹೊಸ ರೈಲು ಮಾರ್ಗ ಹಾಗೂ ಕೊಪ್ಪಳಕ್ಕೆ ಜಂಕ್ಷನ್ ಮಂಜೂರು ಮಾಡಬೇಕು.
ಹೆಚ್ಚುವರಿ ರೈಲುಗಳು : ಹೊಸಪೇಟೆ-ಬೆಂಗಳೂರು ರೈಲುನ್ನು ಬದಲಾಗಿ ಗದಗ-ಬೆಂಗಳೂರು ಪ್ಯಾಸೆಂಜರ್ ರೈಲನ್ನಾಗಿ ಮಾರ್ಪಡಿಸಿ ಓಡಿಸಬೇಕು ಹೆಚ್ಚುವರಿ ರೈಲುಗಳನ್ನು ಬಿಜಾಪೂರ-ಗುಂತಕಲ್, ವಾಯ ಗದಗ, ಕೊಪ್ಪಳ, ಬಳ್ಳಾರಿ ಮಾರ್ಗವಾಗಿ, ಮದ್ರಾಸ-ಬಾಂಬೆ (ವಾಯ ಗುಂತಕಲ್, ಬಳ್ಳಾರಿ, ಕೊಪ್ಪಳ, ಗದಗ, ಬಿಜಾಪೂರ ಮಾರ್ಗವಾಗಿ ಸಂಚರಿಸಲಿ) ಸೋಲಾಪೂರ-ಗುಂತಕಲ್, (ವಾಯ ಗದಗ, ಕೊಪ್ಪಳ, ಬಳ್ಳಾರಿ ಮಾರ್ಗವಾಗಿ ಸಂಚರಿಸಲಿ) ಬಿಜಾಪೂರ-ಬಳ್ಳಾರಿ ಇಂಟರ್‌ಸಿಟಿ ರೈಲು (ವಾಯ ಗದಗ, ಕೊಪ್ಪಳ-ಹೊಸಪೇಟೆ ಮಾರ್ಗವಾಗಿ ಸಂಚರಿಸಲಿ), ಅಮರಾವತಿ ಎಕ್ಸಪ್ರೇಸ್ (ಗಾಡಿ ಸಂಖ್ಯೆ ೧೭೨೨೫), ವಿಜಯವಾಡ-ಹುಬ್ಬಳ್ಳಿ ರೈಲನ್ನು ಭಾನುವಾರ, ಮಂಗಳವಾರ, ಶುಕ್ರವಾರ ಹುಬ್ಬಳ್ಳಿಯಲ್ಲಿ ಸುಮಾರು ೨೪ ತಾಸಿಗೂ ಹೆಚ್ಚು ಕಾಲ ನಿಲ್ಲುತ್ತಿದ್ದು, ಸದರಿ ರೈಲನ್ನು ಇಂಟರ್‌ಸಿಟಿ ರೈಲನ್ನಾಗಿ ಪ್ರತಿದಿನ ಓಡಿಸುವದು, ವಾಸ್ಕೋ-ಮದ್ರಾಸ (ಚೆನ್ನೈ) ವಾಯ ಗುಂತಕಲ್, ಬಳ್ಳಾರಿ, ಹೊಸಪೇಟೆ, ಕೊಪ್ಪಳ, ಗದಗ, ಹುಬ್ಬಳ್ಳಿ ಮಾರ್ಗವಾಗಿ ಸಂಚರಿಸಲಿ, ವರ್ತುಲ ರೈಲು ಗುಲ್ಬರ್ಗಾ, ವಾಡಿ, ರಾಯಚೂರು, ಗುಂತಕಲ್, ಬಳ್ಳಾರಿ, ಹೊಸಪೇಟೆ, ಕೊಪ್ಪಳ, ಗದಗ, ಬಾಗಲಕೋಟೆ, ಬಿಜಾಪೂರ, ಸೋಲಾಪೂರ, ಗುಲ್ಬರ್ಗಾ, ವರ್ತುಲ ಮಾರ್ಗವಾಗಿ ಸಂಚರಿಸಬೇಕು, ಈ ಭಾಗದಲ್ಲಿ ಸಂಚರಿಸುವ ಎಲ್ಲ ರೈಲುಗಳ ಮುಂದೆ, ಮಧ್ಯ ಹಾಗೂ ಹಿಂದಿನ ಭಾಗಗಳಲ್ಲಿ ಈಗಿರುವ ಸಂಖ್ಯೆಗಳಕ್ಕಿಂತ ಎರಡುಪಟ್ಟು ಹೆಚ್ಚಿಸಿ ಜನರಲ್ ಬೋಗಿಗಳನ್ನು ಅಳವಡಿಸಬೇಕು. ಅಂದರೆ ಒಂದು ಎಕ್ಸಪ್ರೇಸ್ ರೈಲಿಗೆ ಕನಿಷ್ಟ ೧೦ ಜನರಲ್ ಬೋಗಿಗಳನ್ನು ಕಡ್ಡಾಯವಾಗಿ ಅಳವಡಿಸಬೇಕು, ಅಲ್ಲದೇ ಕೊಪ್ಪಳದಲ್ಲಿ ರಿಸರ್ವೆಷನ್ ಮಾಡಿಸಲು ೧೫ ದಿನದಿಂದ ೧ ತಿಂಗಳಿಗೂ ಮುಂಚಿತವಾಗಿ ಟಿಕೇಟ್ ಕಾದಿರಿಸಬೇಕಾದ ಪರಿಸ್ಥಿತಿ ಇದ್ದು, ಈ ಭಾಗದಲ್ಲಿ ಸಂಚರಿಸುವ ಎಲ್ಲಾ ಎಕ್ಸ್‌ಪ್ರೇಸ್ ರೈಲುಗಳಿಗೆ ತಲಾ ಕನಿಷ್ಟ ೬ ಹೆಚ್ಚುವರಿ ರಿಸರ್ವೆಷನ್ ಬೋಗಿಗಳನ್ನು ಅಳವಡಿಸಬೇಕು.
ಗೇಟ್‌ಗಳಿಗೆ ಮೇಲು/ಕೆಳ ಸೇತುವೆಗಳ ನಿರ್ಮಿಸುವುದು : ಕೊಪ್ಪಳ ನಗರದ ಗೇಟ್ ಸಂಖ್ಯೆ ೬೨ ಮತ್ತು ೬೪ ಮೇಲು ಸೇತುವೆ/ಕೆಳ ಸೇತುವೆಗಳು ತ್ವರಿತಗತಿಯಲ್ಲಿ ನಿರ್ಮಿಸುವದು, ಕೊಪ್ಪಳ-ಕುಷ್ಟಗಿ ರಸ್ತೆ ಗೇಟ್, ಕಿಡದಾಳ ರೈಲ್ವೆ ಗೇಟ್, ಗಿಣಿಗೇರಾ ರೈಲ್ವೆ ಗೇಟ್, ಯಲಬುರ್ಗಾದಿಂದ ಜಿಲ್ಲಾ ಕೇಂದ್ರವಾದ ಕೊಪ್ಪಳಕ್ಕೆ ಸಂಪರ್ಕ ಹೊಂದಿರುವ ಭಾನಾಪೂರ ರೈಲ್ವೆ ಗೇಟ್ ಇವುಗಳಿಗೆ ಮೇಲು/ಕೆಳ ಸೇತುವೆಗಳನ್ನು ನಿರ್ಮಿಸಬೇಕು. ಕೊಪ್ಪಳ ಜಿಲ್ಲೆಯಲ್ಲಿ ಅಗತ್ಯವಿದ್ದ ಕಡೆಗಳೆಲ್ಲೆಲ್ಲಾ ಮ್ಯಾನವಲ್ ಗೇಟ್ ನಿರ್ಮಿಸಬೇಕು. ಕೊಪ್ಪಳ ತಾಲೂಕಿನ ಗಿಣಿಗೇರಾ ರೈಲ್ವೆ ನಿಲ್ದಾಣದಲ್ಲಿ ಹುಬ್ಬಳ್ಳಿ-ಮೈಸೂರು ಹಂಪಿ ಎಕ್ಸಪ್ರೇಸ್ ರೈಲನ್ನು ನಿಲುಗಡೆ ತುಂಬಾ ಅಗತ್ಯವಿದೆ. ಗಂಗಾವತಿ, ಕಾರಟಗಿ, ಕನಕಗಿರಿ ಸುತ್ತಲಿನ ಅನೇಕ ಹಳ್ಳಿಗಳ ಜನರು ಹಾಗೂ ಗಿಣಿಗೇರಾ ಹತ್ತಿರ ಇರುವ ಸುಮಾರು ೨೦ಕ್ಕೂ ಹೆಚ್ಚು ವಿವಿಧ ಕಾರ್ಖಾನೆಗಳ ಜನರು ಬೆಂಗಳೂರಿಗೆ ಹೋಗಿ ಬರಲು ಕೊಪ್ಪಳ ರೈಲ್ವೆ ನಿಲ್ದಾಣಕ್ಕೆ ಬರಬೇಕಾಗಿದೆ. ಹೀಗಾಗಿ ಪ್ರತಿ ದಿನ ಹುಬ್ಬಳ್ಳಿ-ಮೈಸೂರು ಹಂಪಿ ಎಕ್ಸಪ್ರೇಸ್ ರೈಲನ್ನು ಗಿಣಿಗೇರಾ ರೈಲ್ವೆ ನಿಲ್ದಾಣದಲ್ಲಿ ನಿಲ್ಲಿಸುವದರಿಂದ ಪ್ರತಿನಿತ್ಯ ನೂರಾರು ಜನರಿಗೆ ಅನುಕೂಲವಾಗುತ್ತದೆ. ಮುಂತಾದ ಅನೇಕ ಬೇಡಿಕೆಗಳನ್ನು ಇಟ್ಟು, ಸುಮಾರು ವರ್ಷಗಳಿಂದ ಅನೇಕ ಹೋರಾಟಗಳು ನಡೆದರೂ ಪ್ರಯೋಜನವಾಗಿಲ್ಲ. ಕರ್ನಾಟಕದವರೇಯಾದ ತಾವು ರೈಲ್ವೆ ಖಾತೆ ಸಚಿವರಾಗಿ ಇರುವವರೆಗೆ ಬಹುತೇಕವಾಗಿ ನಮ್ಮ ಜಿಲ್ಲೆಗೆ ರೈಲ್ವೆ ಅಭಿವೃದ್ಧಿ ಕೆಲಸಗಳನ್ನು ಮಾಡಬೇಕೆಂದು ರೈಲ್ವೆ ಜನಪರ ಹೋರಾಟ ಸಮಿತಿಯಿಂದ ದಿನಾಂಕ: ೨೧-೬-೨೦೧೪ ರಂದು ಶನಿವಾರ ಧರಣಿ ನಡೆಸಿ ಮನವಿ ಅರ್ಪಿಸುತ್ತಿದ್ದೇವೆ ನಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೆ ಮುಂದೇ ವಿವಿಧ ಹಂತದ ಹೋರಾಟಗಳನ್ನು ಪ್ರಾರಂಭಿಸಬೇಕಾಗುತ್ತದೆ.
ಎಂದು ವಿವಿಧ ಸಂಘಟನೆಗಳ ಮುಖಂಡರಾದ ಎಸ್.ಎ.ಗಫಾರ್ ಅಧ್ಯಕ್ಷರು, ರೈಲ್ವೆ ಜನಪರ ಹೋರಾಟ ಸಮಿತಿ, ಕೊಪ್ಪಳ, ರಮೇಶ ಪಿ. ಚಿಕೇನಕೊಪ್ಪ ಜಿಲ್ಲಾಧ್ಯಕ್ಷರು, ಕರ್ನಾಟಕ ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘ, ಕೊಪ್ಪಳ, ಬಸವರಾಜ ಶೀಲವಂತರ್‌ಜಿಲ್ಲಾ ಅಧ್ಯಕ್ಷರು ಅಖಿಲ ಭಾರತ ಕಾರ್ಮಿಕ ಸಂಘಟನೆಗಳ ಒಕ್ಕೂಟ, ಕೊಪ್ಪಳ, ಮೈಲಪ್ಪ ಬಿಸರಳ್ಳಿ ಜಿಲ್ಲಾ ಸಂಘಟನಾ ಸಂಚಾಲಕರು, ದಲಿತ ವಿಮೋಚನೆಯ ಮಾನವ ಹಕ್ಕುಗಳ ವೇದಿಕೆ, ಕೊಪ್ಪಳ, ಮಖಬೂಬ ರಾಯಚೂರ, ಶಿವಪ್ಪ ಹಡಪದ, ಶಿವಮ್ಮ ಕಾಮನೂರ, ನನ್ನುಸಾಬ ನೀಲಿ, ನೂರಸಾಬ ಹೊಸಮನಿ, ಶಿವಸಂಗಪ್ಪ ವಣಗೇರಿ, ಮರ್ದಾನ ಅಲಿ ಕೊತ್ವಾಲ, ಈರಪ್ಪ ಚಾಕ್ರಿ, ಎ.ಬಿ. ದಿಂಡೂರು ಆಗ್ರಹಿಸಿದ್ದಾರೆ.
0 comments:
Post a Comment