PLEASE LOGIN TO KANNADANET.COM FOR REGULAR NEWS-UPDATES




ಬಸವಕಲ್ಯಾಣ  : ಕೃಷಿ ಇಲಾಖೆ ಹಾಗೂ ಶಾಂತಿಶ್ವರಿ ಸ್ವಯಂ ಸೇವಾ ಸಂಸ್ಥೆ ವತಿಯಿಂದ ಹಂದ್ರಾಳ (ಕೆ) ಗ್ರಾಮದಲ್ಲಿ ಸಾವಯುವ ಭಾಗ್ಯ ಯೋಜನೆ ಅಡಿ ರೈತರ ತರಬೇತಿ ಕಾರ್ಯಕ್ರಮವನ್ನು ದಿನಾಂಕ ೧೬-೦೬-೨೦೧೪ ರಂದು ಜರುಗಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಬಸವಕಲ್ಯಾಣ ತಾಲೂಕಾ ಸಹಾಯಕ ಕೃಷಿ ನಿರ್ದೇಶಕರಾದ ವಿಶ್ವನಾಥ ಚನ್ನಶೇಟ್ಟೆಯವರು ಸಸಿಗೆ ಎರೆಹುಳು ಗೊಬ್ಬರ ಹಾಕುವ ಮೂಲಕ ಚಾಲನೆ ನೀಡಿದರು ಅವರು ಮಾತನಾಡಿ ರೈತರ ಸರ್ವಾಗಿಂಣ ಅಭೀವೃದ್ದಿ ಯಾಗಬೇಕಾದರೆ ಸಾವಯುವ ಕೃಷಿಯಿಂದ ಮಾತ್ರ ಸಾಧ್ಯ ಸಾವಯುವ ಕೃಷಿ ರೈತರ ಮತ್ತು ಪರಿಸರ ಸ್ನೇಹಿಯಾಗಿದ್ದು ಇದರಿಂದ ಅಧಿಕ ಇಳುವರಿ ಪಡೆಯುಲು ಸಾಧ್ಯವೆಂದು ಹೇಳೀದರು ರೈತರು ರಸಾಯನಿಕ ಗೊಬ್ಬರ ಬಳಸಿ ಭೂಮಿ ಬಂಜರು ಮಾಡಿದರೆ ಇದರಿಂದ ಬೇಳೆ ಬೆಳೆಯಲು ಸಾಧ್ಯ ವಿಲ್ಲ ಆದ್ದರಿಂದ ರೈತರು ಅಧಿಕ ಪ್ರಮಾಣದಲ್ಲಿ ಏಳೆಹುಳು ಗೊಬ್ಬರ ಬಳಸಿ ಅಧಿಕ ಇಳುವರಿ ಪಡೆಯಲು ರೈತರಿಗೆ ಸಲಹೆ ನೀಡಿದರು. ಇದೆ ಸಂದರ್ಭದಲ್ಲಿ ಸಹಾಯಕ ಕೃಷಿ ನಿರ್ದೇಶಕರು ಏರೆಹುಳು ಗೊಬ್ಬರ ಉತ್ಪಾದನೆ ಕುರಿತು ಪ್ರಕಟಿಸಲಾದ ಬಿತ್ತಿ ಪತ್ರವನ್ನು ಬಿಡುಗಡೆ ಗೊಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಾರತಿಯ ಪ್ರಾಣಿ ಕಲ್ಯಾಣ ಮಂಡಳಿಯ ಸದಸ್ಯರಾದ ಶಿವಯ್ಯ ಸ್ವಾಮಿಯವರು ವಹಿಸಿಕೊಂಡು ಸಾವಯುವ ಕೃಷಿಯಲ್ಲಿ ಗೊವುಗಳ ಪಾತ್ರ ಬಹು ಮುಖ್ಯವಾಗಿದೆ ಆದ್ದರಿಂದ ಎಲ್ಲಾ ರೈತರು ದೇಶಿ ತಳಿಯ ಗೋವುಗಳನ್ನು ಸಾಕಿ ಅವುಗಳ ಗೊಬ್ಬರದ ಮೂಲಕ ಅಧಿಕ ಇಳುವರಿ ಪಡೆಯಲು ಮತ್ತು ಗೊ ಮೂತ್ರ ಕಶಾಯ ಮಾಡಿ ಸಿಂಪರಣೆ ಮಾಡುವ ಮೂಲಕ ವಿಶ್ವ ಮೂಕ್ತ ಆಹಾರ ದೇಶಕ್ಕೆ ನೀಡಬೇಕೆಂದು ರೈತರಿಗೆ ಸಲಹೆ ನೀಡಿದರು.
ಮುಖ್ಯ ಅತಿಥಿಗಳಾಗಿ ಜಿಲ್ಲೆಯ ಪ್ರಗತಿ ಸಾವಯುವ ಕೃಷಿಕರಾದ ಗುರುಶಾಂತ ಹಿರೆಮಠ ಅವರು ಮಾತನಾಡಿ ರೈತರು ರಸಾಯಿನಿಕ ಕೃಷಿ ಎಂಬ ಭೂತ ದಿಂದ ಬಿಡಿಸಿಗೊಂಡು ಅಮೃತ ಎಂಬ ಸಾವಯುವ ಕೃಷಿ ಅನುಸರಿಸುವ ಮೂಲಕ ಪರಿವರ್ತನೆ ಹೊಂದಬೇಕು ಎಂದು ಕರೆ ನೀಡಿದರು.  ವೇದಿಕೆ ಮೇಲೆ ಹಂದ್ರಾಳ ಸಾವಯುವ ಕೃಷಿಕರ ಸಂಘದ ಅಧ್ಯಕ್ಷರಾದ ರಾಮ ರೆಡ್ಡಿ, ಹಂದ್ರಾಳ ಗ್ರಾಮದ ಗ್ರಾ.ಪಂ ಸದಸ್ಯರಾದ ಭೀಮಣ್ಣ ಹಡಪದ, ಗ್ರಾಮದ ಪ್ರಮೂಖರಾದ ಬಸವರಾಜ ಪಾಟೀಲ, ಸೇರಿದಂತೆ ರೈತರು ಉಪಸ್ಥಿತರಿದ್ದರು.
ಕಾರ್ಯಕ್ರಮದ  ಕ್ಷೇತ್ರದ ಸಹಾಯಕರಾದ ಶಿವಕುಮಾರ ಮಠಪತಿ ಸ್ವಾಗಿತಿಸದರೆ, ಸಂಚಾಲನೆ ಕ್ಷೇತ್ರ ಅಧಿಕಾರಿಯಾದ ಕರ ಬಸಯ್ಯ ಸ್ವಾಮಿ, ನಾಗರಾಜ ಅವರು ವಂದನೆ ಸಲ್ಲಿಸಿದರು.    

Advertisement

0 comments:

Post a Comment

 
Top